ಬಿಗ್ ಬಾಸ್ ಮನೆಯಿಂದ ಜವಾರಿ ಹುಡುಗ ಔಟ್, ಅಭಿಮಾನಿಗಳಿಗೆ ಶಾಕ್ ಆದ ಮಾಳು ಎಲಿಮಿನೇಷನ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಇನ್ನೇನು ಮುಗಿಯುವ ಹಂತಕ್ಕೆ ಬರುತ್ತಿದೆ. ಅದಕ್ಕೆ ಎಲಿಮಿನೇಷನ್ ಪ್ರಕ್ರಿಯೆ ಸಹ ಜೋರಾಗಿ ನಡೆಯುತ್ತಿದೆ. ಕಳೆದ ವಾರ ಇಬ್ಬರು ಔಟ್ ಆಗಿದ್ದು, ಉತ್ತರ ಕರ್ನಾಟಕದ ಹುಡುಗ ಮಾಳು ಮನೆಯಿಂದ ಹೊರ ನಡೆದಿದ್ದಾರೆ. ಎಲ್ಲರೂ ಸ್ಪಂದನಾ ಔಟ್ ಆಗ್ತಾರೆ ಎಂದುಕೊಂಡಿದ್ರು. ಆದ್ರೆ ಟ್ವಿಸ್ಟ್ ಆಗಿದೆ.

ಡಬಲ್ ಎಲಿಮಿನೇಷನ್
ಫ್ಯಾಮಿಲಿ ರೌಂಡ್ ಮುಗಿದ ಮೇಲೆ ಸ್ಪರ್ಧಿಗಳು ಖುಷಿಯಾಗಿದ್ರು ಆದ್ರೆ ಮನೆಯಿಂದ ಇಬ್ಬರು ಪ್ರಬಲ ಹಾಗೂ ಜನ ಮೆಚ್ಚಿದ ಸ್ಪರ್ಧಿಗಳೇ ಔಟ್ ಆಗಿರುವುದ ಶಾಕ್ ನೀಡಿದೆ. ಎಲ್ಲರೂ ಇದು ನಿಜನಾ ಎನ್ನುವಂತಾಗಿದೆ.

ಸೂರಜ್ ಶನಿವಾರ ಔಟ್
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ರು, ತಮ್ಮದೇ ಆದ ವಿಭಿನ್ನ ಶೈಲಿಯ ಆಟ ಮತ್ತು ಸ್ಟ್ರ್ಯಾಟಜಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಸೂರಜ್ ಶನಿವಾರ ಮೊದಲು ಮನೆಯಿಂದ ಹೊರಬಂದು. ಟಾಸ್ಕ್‍ಗಳಲ್ಲಿ ಸಕ್ರಿಯರಾಗಿದ್ದ ಸೂರಜ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅಲ್ಲದೇ ಅವರು ರಾಶಿಕಾ ಜೊತೆ ಮಾತ್ರ ಇರ್ತಿದ್ರು ಎನ್ನುವ ಮಾತುಗಳು ಕೇಳಿ ಬಂದಿವೆ.

ಮಾಳು ಔಟ್
ಇನ್ನು ಉತ್ತರ ಕರ್ನಾಟಕದ ಹುಡುಗ, ತಮ್ಮದೇ ಆದ ರೀತಿಯಲ್ಲಿ ಹಾಡು ಹೇಳಿ ಫೇಮಸ್ ಆಗಿದ್ದ ಮಾಳು ಸಹ ಮನೆಯಿಂದ ಹೊರ ನಡೆದಿದ್ದಾರೆ. ಮಾಳು ಔಟ್ ಆಗಿದ್ದನ್ನು ಅಭಿಮಾನಿಗಳೇ ಇನ್ನು ನಂಬಲು ಆಗುತ್ತಿಲ್ಲ. ಮಾಳು ಎಲ್ಲರ ಜೊತೆ ಬೆರೆಯಲ್ಲ ಎನ್ನುವುದೇ ಇತರೆ ಸ್ಪರ್ಧಿಗಳ ಕಾರಣವಾಗಿತ್ತು.

ಇದನ್ನೂ ಓದಿ: https://kannada.newsnext.live/cinema/bigg-boss-kannada-12-suraj-and-spandana-eliminated/

ಸಾಂಗ್ ಕೇಳಲ್ಲ
ಮಾಳು ಅವರು ಆಗಾಗ ತಮ್ಮ ಸ್ಟೈಲ್‍ನಲ್ಲಿ ಹಾಡು ಹೇಳಿ ಮನೆಯವರನ್ನು ಮನರಂಜಿಸುತ್ತಿದ್ದರು. ಆದ್ರೆ ಈಗ ಮಾಳು ಔಟ್ ಆಗದ್ದು ಆ ಚೆಂದದ ವಾಯ್ಸ್ ಮನೆಯಲ್ಲಿ ಕೇಳಲ್ಲ.

ಮಾಳು ಔಟ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತಂದಿರುವುದಂತು ನಿಜ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories