ಕಾವ್ಯ ಮುಂದೆ ಗಿಲ್ಲಿಗೆ ಯಾರು ಕಾಣ್ತಿಲ್ವಾ? ಕ್ಯಾಪ್ಟನ್ ಆದ್ರೂ ಜಡ್ಜ್​​ಮೆಂಟ್ ರಾಂಗ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಗಿಲ್ಲಿ ನಟ ಅಂದ್ರೆ ತುಂಬಾ ಜನಕ್ಕೆ ಇಷ್ಟ. ದೊಡ್ಡ ಫ್ಯಾನ್ ಬೇಸ್ ಇದೆ ಅಂದ್ರೆ ತಪ್ಪಾಗಲಾರದು. ಗಿಲ್ಲಿ ಈ ಬಾರಿ ಕ್ಯಾಪ್ಟನ್ ಆಗಿದ್ದು, ತನ್ನ ನಿರ್ಧಾರಗಳನ್ನು ತಪ್ಪಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಅದರಲ್ಲೂ ಕಾವ್ಯಾಗಾಗಿ ಗಿಲ್ಲಿ ಎಲ್ಲರ ವಿರೋಧ ಕಟ್ಟಿಕೊಳ್ತಾ ಇದ್ದಾರೆ.

ಇಬ್ಬರು ಜಡ್ಜ್
ಗಿಲ್ಲಿ ಕ್ಯಾಪ್ಟನ್ ಆಗಿದ್ರು ಅವರ ಜೊತೆ ಅಶ್ವಿನಿ ಗೌಡ ಜಡ್ಜ್ ಆಗಿ ಇದ್ದಾರೆ. ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದು ಇಬ್ಬರು ಮಹಿಳಾ ಸ್ಪರ್ಧಿಗಳ ನೀರು ತುಂಬುವ ಸ್ಪರ್ಧೆ ಇದೆ. ಅದರಲ್ಲಿ ಸ್ಪಂದನಾ ಸೋಮಣ್ಣ ಮತ್ತು ಕಾವ್ಯ ಎದುರಾಗಿದ್ದಾರೆ.

ಯಾರ ಬಕೆಟ್ ನೀರು ಹೆಚ್ಚು
ಬಿಗ್ ಬಾಸ್ ಪ್ರೋಮೋ ಪ್ರಕಾರ ಸ್ಪಂದನಾ ಅವರ ಬಕೆಟ್‍ನಲ್ಲಿ ನೀರು ಹೆಚ್ಚು ಇದೆ. ಅದನ್ನು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಆದ್ರೆ ಗಿಲ್ಲಿ ನಟ ಒಪ್ಪುತ್ತಿಲ್ಲ. ಕಾವ್ಯ ಅವರ ಬಕೆಟ್ ನೀರು ಹೆಚ್ಚಿದೆ ಎಂದು ಹೇಳ್ತಾ ಇದ್ದಾರೆ.

ತಪ್ಪು ನಿರ್ಧಾರ
ಮನೆಯವರಿಗೆಲ್ಲಾ ಯಾರ ನೀರು ಹೆಚ್ಚಿದೆ ಎಂದು ಕಾಣ್ತಾ ಇದೆ. ಆದ್ರೆ ಅದನ್ನು ಗಿಲ್ಲಿ ಒಪ್ಪಲು ತಯಾರಿಲ್ಲ. ಕಾವ್ಯ ಅವರನ್ನು ಗೆಲ್ಲಿಸುವ ಸಲುವಾಗಿ ಅವರ ಪರ ಮಾತಾಡಿ ತಪ್ಪು ನಿರ್ಧಾರ ತೆಗೆದುಕೊಳ್ತಾ ಇದ್ದಾರೆ.

ಜನಪ್ರಿಯ ಹಾಸ್ಯ ನಟ
ಗಿಲ್ಲಿ ನಟ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದು, ಅವರ ಕಾಮಿಡಿ ಮತ್ತು ನಟನೆಗೆ ಹೆಸರಾಗಿದ್ದಾರೆ. ಗಿಲ್ಲಿ ನಟ ಅವರು ‘ಕ್ವಾಟ್ಲೆ ಕಿಚನ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.

ಇದನ್ನೂ ಓದಿ: https://kannada.newsnext.live/cinema/kannada-and-tamil-active-serial-actress-nandini-suicide/

ಪ್ರೇಕ್ಷಕರ ಮನ ಗೆದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಅವರೊಂದಿಗೆ ತಮಾಷೆಯ ಲವ್ ಸ್ಟೋರಿ ನಡೆಸ್ತಾ ಇದ್ದಾರೆ.ಗಿಲ್ಲಿ ನಟ ಅವರ ಹಾಸ್ಯ ಮತ್ತು ನಟನೆಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories