ರಾಜ್ಯದಲ್ಲಿ ಸದ್ದಿಲ್ಲದೇ ವ್ಯಾಪಿಸಿದೆ ಕ್ಯಾನ್ಸರ್​ ಹೆಮ್ಮಾರಿ : ಕಿದ್ವಾಯಿ ಆಸ್ಪತ್ರೆಯಿಂದ ಹೊರಬಿತ್ತು ಶಾಕಿಂಗ್​ ಮಾಹಿತಿ

ರಾಜ್ಯದಲ್ಲಿ ತಂಬಾಕು ಮತ್ತು ಧೂಮಪಾನದ ವ್ಯಸನ ಸದ್ದಿಲ್ಲದೆ ಸಾವಿರಾರು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಕೇವಲ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಬರೋಬ್ಬರಿ 10,000 ಕ್ಕೂ ಹೆಚ್ಚು ಜನರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಾಕಿಂಗ್​ ಮಾಹಿತಿ ಇದೀಗ ಬಯಲಾಗಿದೆ.

ರಾಜ್ಯದಲ್ಲಿ ತಂಬಾಕು ಮತ್ತು ಧೂಮಪಾನದ ವ್ಯಸನ ಸದ್ದಿಲ್ಲದೆ ಸಾವಿರಾರು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಕೇವಲ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಬರೋಬ್ಬರಿ 10,000 ಕ್ಕೂ ಹೆಚ್ಚು ಜನರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಾಕಿಂಗ್​ ಮಾಹಿತಿ ಇದೀಗ ಬಯಲಾಗಿದೆ.

ವಿಶ್ವ ತಂಬಾಕು ರಹಿತ ದಿನ’ದ ಅಂಗವಾಗಿ ರಾಜಧಾನಿಯ ಪ್ರಸಿದ್ಧ ‘ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ’ ಈ ಆತಂಕಕಾರಿ ಅಂಕಿ-ಅಂಶಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಇದರ ಅನುಸಾರ ಪುರುಷರು ಶ್ವಾಸಕೋಶ, ಬಾಯಿ ಹಾಗೂ ನಾಲಿಗೆಯ ಕ್ಯಾನ್ಸರ್ಗೆ ಹೆಚ್ಚು ಒಳಗಾಗುತ್ತಿದ್ದರೆ, ಮಹಿಳೆಯರು ಶ್ವಾಸಕೋಶ ಮತ್ತು ಬಾಯಿಯ ಜೊತೆಗೆ ಅನ್ನನಾಳದ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಧೂಮಪಾನದ ಹಾನಿಕಾರಕ ಹೊಗೆಯಿಂದಾಗಿ ಹೃದಯ ರಕ್ತನಾಳದ ತೊಂದರೆಗಳು, ಮೂತ್ರಪಿಂಡದ ಸಮಸ್ಯೆಗಳು, ಗಂಟಲು ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗಳು ಆವರಿಸಿಕೊಳ್ಳುತ್ತಿವೆ. ಕಣ್ಣಿನ ಅಂಧತ್ವ, ಉಬ್ಬಸ, ಹಲ್ಲುಗಳ ದೌರ್ಬಲ್ಯ ಮತ್ತು ಪುರುಷರಲ್ಲಿ ವೀರ್ಯಾಣುಗಳ ಕೊರತೆಗೂ ತಂಬಾಕು ನೇರ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Also Read: ಕರ್ನಾಟಕದಲ್ಲಿ ಇಂದು ವರುಣನ ಅಬ್ಬರ : ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 88,813 ಕ್ಯಾನ್ಸರ್ ಪ್ರಕರಣಗಳ ಪೈಕಿ 22,583 ಜನರು ಸಾವನ್ನಪ್ಪಿದ್ದಾರೆ . ಹೊಸದಾಗಿ ಪತ್ತೆಯಾದ 39,371 ಪುರುಷ ಕ್ಯಾನ್ಸರ್ ಪೀಡಿತರಲ್ಲಿ ಶೇಕಡಾ 52 ರಷ್ಟು ಅಂದರೆ 20,652 ಜನ ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. ಇವರಲ್ಲಿ ಈಗಾಗಲೇ 5,814 ಪುರುಷರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 49,442 ಮಹಿಳಾ ರೋಗಿಗಳಲ್ಲಿ ಶೇಕಡಾ 30.7 ರಷ್ಟು ಅಂದರೆ 15,187 ಜನ ಮಹಿಳೆಯರು ತಂಬಾಕಿನಿಂದಲೇ ಕ್ಯಾನ್ಸರ್ ತಂದುಕೊಂಡಿದ್ದು, 4,230 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ತಂಬಾಕು ಮತ್ತು ಸಿಗರೇಟ್ ಸೇವನೆಯು ಅಪಾಯಕಾರಿ ಮಟ್ಟ ತಲುಪಿದೆ. ನಗರದಲ್ಲಿ ಪುರುಷರ 3,734 ಹಾಗೂ ಮಹಿಳೆಯರ 2,634 ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ನೇರ ಕಾರಣವಾಗಿದೆ. ಬೆಂಗಳೂರಿನಲ್ಲೇ ತಂಬಾಕಿನ ವಿಷಕ್ಕೆ ಬಲಿಯಾದವರ ಸಂಖ್ಯೆ 1,775 ದಾಟಿದೆ.ದೇಶದ ಒಟ್ಟಾರೆ ತಂಬಾಕು ಬಳಕೆಯ ಸರಾಸರಿ ಪ್ರಮಾಣಕ್ಕೆ (ಶೇ. 28.6) ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಈ ವ್ಯಸನದ ಪ್ರಮಾಣ ಕೊಂಚ ಕಡಿಮೆ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 8.8 ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದರಲ್ಲಿ ಶೇ. 16.8 ರಷ್ಟು ಪುರುಷರು ಹಾಗೂ ಶೇ. 0.7 ರಷ್ಟು ಮಹಿಳೆಯರು ಸೇರಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆಯ ವರದಿ ಸ್ಪಷ್ಟಪಡಿಸಿದೆ.

Cancer epidemic spreads silently in the state Shocking information emerges from Kidwai hospital

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories