ಅಂಕೋಲಾ: ಬ್ಯಾಂಕ್ ಆಫ್ ಬರೋಡಾ ಶೌಚಾಲಯದ ಗೋಡೆ ಕೊರೆದರೂ ಸಿಗಲಿಲ್ಲ ದುಡ್ಡು!

Bank of Baroda theft attempt: ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿರುವ ‘ಬ್ಯಾಂಕ್ ಆಫ್ ಬರೋಡಾ’ ಶಾಖೆಯಲ್ಲಿ ಭಾನುವಾರ ತಡರಾತ್ರಿ ದರೋಡೆಗೆ ಸಂಚು ರೂಪಿಸಿದ್ದ ಕಳ್ಳರ ಪ್ರಯತ್ನವೊಂದು ವಿಫಲವಾಗಿದೆ. ಬ್ಯಾಂಕಿನ ಸ್ಟ್ರಾಂಗ್ ರೂಂ ಭೇದಿಸಲು ಸಾಧ್ಯವಾಗದ ಕಾರಣ ದರೋಡೆಕೋರರು ಬರಿಗೈಲಿ ವಾಪಸ್ಸಾದ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಈ ಬ್ಯಾಂಕ್ ಶಾಖೆ ಇದೆ. ಬ್ಯಾಂಕಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮೊದಲೇ ಮಾಹಿತಿ ಕಲೆಹಾಕಿದ್ದ ಖದೀಮರು, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಶೌಚಾಲಯದ ಭಾಗವನ್ನೇ ತಮ್ಮ ಕಾರ್ಯಾಚರಣೆಗೆ ಆರಿಸಿಕೊಂಡಿದ್ದರು. ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಬ್ಯಾಂಕಿನ ಒಳಗೆ ಪ್ರವೇಶಿಸಿದ್ದಾರೆ.

ಒಳನುಗ್ಗಿದ ಕಳ್ಳರು ಹಣ ಮತ್ತು ಚಿನ್ನಾಭರಣಗಳಿದ್ದ ಸ್ಟ್ರಾಂಗ್ ರೂಮ್ ಗೋಡೆಯನ್ನು ಒಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಗೋಡೆ ಭದ್ರವಾಗಿದ್ದರಿಂದ ಅದನ್ನು ಭೇದಿಸಲು ಸಾಧ್ಯವಾಗಿಲ್ಲ. ಕೊನೆಗೆ ಯಾವುದೇ ಮಾಲು ಸಿಗದೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : ಇಂದಿನಿಂದ ಮಧ್ಯರಾತ್ರಿಯವರೆಗೂ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ

ಸ್ಥಳಕ್ಕೆ ಪೊಲೀಸ್ ಭೇಟಿ:

ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ವಿಧಿವಿಜ್ಞಾನ ತಜ್ಞರ ತಂಡ ಆಗಮಿಸಿದ್ದು, ಮಹತ್ವದ ಸುಳಿವುಗಳನ್ನು ಸಂಗ್ರಹಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories