ಗಿಲ್ಲಿ ಕಳ್ಳ, ಸುಳ್ಳ, ಕೊಳಕ; ಆತನಿಗೆ ಹೊಡೆಯಲು ಹೋಗಿದ್ರಂತೆ ಇನ್ನೋರ್ವ ಸ್ಪರ್ಧಿ!

Bigg Boss 12 | Gilli Nata: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮುಕ್ತಾಯದ ಹಂತ ತಲುಪಿದ್ದರೂ, ಮನೆಯಿಂದ ಹೊರಬಂದಿರುವ ಸ್ಪರ್ಧಿಗಳ ನಡುವಿನ ಕೆಸರೆರಚಾಟ ಮಾತ್ರ ನಿಂತಿಲ್ಲ. ಈ ಸೀಸನ್‌ನ ವಿವಾದಿತ ಸ್ಪರ್ಧಿಗಳಲ್ಲಿ ಒಬ್ಬರಾದ ಡಾಗ್ ಸತೀಶ್ (Dog Sathish), ಈಗ ಫಿನಾಲೆ ರೇಸ್‌ನಲ್ಲಿರುವ ಗಿಲ್ಲಿ ನಟ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಗಿಲ್ಲಿ ವಿರುದ್ಧ ನಿಂದನಾತ್ಮಕ ಹೇಳಿಕೆ

ಇತ್ತೀಚೆಗೆ ಮಾಜಿ ಸ್ಪರ್ಧಿ ರಜತ್ ಅವರು ನಡೆಸಿದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಡಾಗ್ ಸತೀಶ್, ಗಿಲ್ಲಿ ನಟ ಬಗ್ಗೆ ಅತ್ಯಂತ ತಾತ್ಸಾರವಾಗಿ ಮಾತನಾಡಿದ್ದಾರೆ. ಗಿಲ್ಲಿಯನ್ನು ‘ಕಳ್ಳ, ಸುಳ್ಳ, ಕೊಳಕ’ ಎಂದು ಕರೆದಿರುವ ಅವರು, “ಮನೆಯೊಳಗೆ ಗಿಲ್ಲಿ ಎಲ್ಲರನ್ನೂ ಚೀಪ್ ಆಗಿ ನಡೆಸಿಕೊಳ್ಳುತ್ತಿದ್ದ. ಅವನ ವರ್ತನೆಯಿಂದಲೇ ನಾನು ಮನೆಯಲ್ಲಿ ಸೈಲೆಂಟ್ ಆಗಬೇಕಾಯಿತು. ಹೊರಗೆ ಬಂದವರು ಅವನ ಜನಪ್ರಿಯತೆ ಕಂಡು ಸುಮ್ಮನಿದ್ದಾರೆ, ಆದರೆ ನಾನು ಸತ್ಯ ಹೇಳಲು ಹೆದರುವುದಿಲ್ಲ” ಎಂದು ಕಿಡಿಕಾರಿದ್ದಾರೆ.

‘ಹೊಡೆಯಲು ಹೋಗಿದ್ದೆ, ಆದರೆ ದೃಶ್ಯ ಕಟ್ ಮಾಡಲಾಗಿದೆ’

ಸಂದರ್ಶನದ ವೇಳೆ ಸತೀಶ್ ಒಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮನೆಯೊಳಗೆ ಗಿಲ್ಲಿ ನಟನಿಗೆ ಅಶ್ಲೀಲ ಪದಗಳಿಂದ ಬೈದಿದ್ದೆ ಮಾತ್ರವಲ್ಲದೆ, ಒಮ್ಮೆ ಹೊಡೆಯಲು ಸಹ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ. “ನಾನು ಗಿಲ್ಲಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೇನೆ, ಆದರೆ ಬಿಗ್ ಬಾಸ್ ತಂಡ ಆ ದೃಶ್ಯಗಳನ್ನು ಕಟ್ ಮಾಡಿದೆ. ಯಾವುದನ್ನೂ ಪ್ರಸಾರ ಮಾಡಿಲ್ಲ” ಎಂಬ ಗಂಭೀರ ಆರೋಪವನ್ನು ಅವರು ಶೋ ವಿರುದ್ಧ ಮಾಡಿದ್ದಾರೆ. ಅಲ್ಲದೆ, ಗಿಲ್ಲಿ ಹೊರಬಂದ ಮೇಲೂ ಅವನನ್ನು ಹತ್ತಿರ ಸೇರಿಸುವುದಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

Bigg Boss 12: ಫಿನಾಲೆ ಹೊಸ್ತಿಲಲ್ಲಿ ಧ್ರುವಂತ್ ಔಟ್; ಅಂತಿಮ ಹಣಾಹಣಿಗೆ ಈ 6 ಸ್ಪರ್ಧಿಗಳು!

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆ

ಡಾಗ್ ಸತೀಶ್ ಅವರ ಈ ಹೇಳಿಕೆಗಳು ಗಿಲ್ಲಿ ನಟನ ಅಭಿಮಾನಿಗಳನ್ನು ಕೆರಳಿಸಿದೆ. ಈಗಾಗಲೇ ಸತೀಶ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಗಿಲ್ಲಿ ನಟ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು, ಒಂದು ವೇಳೆ ಅವರು ಟ್ರೋಫಿ ಗೆದ್ದರೆ ಡಾಗ್ ಸತೀಶ್ ಅವರ ಸ್ಥಿತಿ ಏನಾಗಬಹುದು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories