ಖ್ಯಾತ ಇನ್‌ಪ್ಲುಯೆನ್ಸರ್‌ ಎಸ್‌ಜಿ ಮಲೆನಾಡು ವಿರುದ್ಧ ಎಫ್‌ಐಆರ್‌ ದಾಖಲು; ಕಾರಣ ಏನು?

FIR On Influencer SG Malenadu: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ (KTR) ಅನುಮತಿ ಇಲ್ಲದೆ ಅಕ್ರಮವಾಗಿ ಪ್ರವೇಶಿಸಿ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜನಪ್ರಿಯ ಯೂಟ್ಯೂಬರ್ ಒಬ್ಬರ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ (FIR) ದಾಖಲಿಸಿದೆ.

ಇನ್‌ಸ್ಟಾಗ್ರಾಂನಲ್ಲಿ @sg_malenadu ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಯೂಟ್ಯೂಬರ್ ಈ ಪ್ರಕರಣದಲ್ಲಿ ಸಿಲುಕಿದವರು. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕುಂಬಾರವಾಡದ ‘ಪಥೆಗುಡಿ’ ಎಂಬ ಸೂಕ್ಷ್ಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಪ್ರಕರಣದ ಹಿನ್ನೆಲೆ ಮತ್ತು ನಿಯಮ ಉಲ್ಲಂಘನೆ

ಪಥೆಗುಡಿ ಪ್ರದೇಶವು ಹುಲಿಗಳ ಸಂಚಾರವಿರುವ ಪ್ರಮುಖ ‘ಕೋರ್ ಟೈಗರ್ ರಿಸರ್ವ್’ ವಲಯವಾಗಿದೆ. ಇಲ್ಲಿ ಸಾರ್ವಜನಿಕ ಪ್ರವಾಸೋದ್ಯಮಕ್ಕೆ ಕಟ್ಟುನಿಟ್ಟಾದ ನಿಷೇಧವಿದೆ. ಕಳೆದ ನವೆಂಬರ್ 5, 2025 ರಂದು ಆರೋಪಿತ ಯೂಟ್ಯೂಬರ್ ತನ್ನ ಬೈಕ್‌ನಲ್ಲಿ ಈ ಪ್ರದೇಶಕ್ಕೆ ಪ್ರವೇಶಿಸಿ, ಅಲ್ಲಿ ರಾತ್ರಿ ತಂಗಿದ್ದರು ಎಂದು ವರದಿಯಾಗಿದೆ. ಅನುಮತಿ ಇಲ್ಲದಿದ್ದರೂ ಡ್ರೋನ್ ಮತ್ತು ವಿಡಿಯೋ ಕ್ಯಾಮೆರಾಗಳನ್ನು ಬಳಸಿ ಕಾಡಿನ ದೃಶ್ಯಗಳನ್ನು ಚಿತ್ರೀಕರಿಸಿದ್ದಲ್ಲದೆ, ನವೆಂಬರ್ 21 ರಂದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ನಿಧಿ ಸಿಕ್ಕ ಲಕ್ಕುಂಡಿ ಗ್ರಾಮ ಸ್ಥಳಾಂತರಕ್ಕೆ ಚಿಂತನೆ : ಸಚಿವ ಎಚ್​.ಕೆ ಪಾಟೀಲ

ಇಲಾಖೆಯ ಕ್ರಮ

ವೀಡಿಯೊ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ತನಿಖೆ ಆರಂಭಿಸಿತು. ಆರಂಭದಲ್ಲಿ ವಿವರಣೆ ಕೋರಿ ನೋಟಿಸ್ ನೀಡಿದರೂ ಯೂಟ್ಯೂಬರ್ ಪ್ರತಿಕ್ರಿಯಿಸದ ಕಾರಣ, ಡಿಸೆಂಬರ್ 2 ರಂದು ಅಧಿಕೃತವಾಗಿ ದೂರು ದಾಖಲಿಸಲಾಯಿತು. ಆರೋಪಿತ ವ್ಯಕ್ತಿಯು ಇಲಾಖೆಯ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾರೆ. ಆತ ಬಳಸಿದ್ದ ಡ್ರೋನ್ ಮತ್ತು ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದ್ದು, ನಿಯಮಬಾಹಿರವಾಗಿ ಚಿತ್ರೀಕರಿಸಲಾದ ದೃಶ್ಯಗಳನ್ನು ಅಳಿಸಿಹಾಕಲು (Delete) ಸೂಚಿಸಲಾಗಿದೆ ಎಂದು ಕುಂಬಾರವಾಡ ವಲಯ ಅರಣ್ಯಾಧಿಕಾರಿ (RFO) ಗಿರೀಶ್ ಚೌಗಲೆ ತಿಳಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories