ಸ್ಮಾರ್ಟ್ಫೋನ್ ಪ್ರಿಯರೇ ಎಚ್ಚರ: ಪ್ರತಿದಿನ ಫೋನ್ 100% ಚಾರ್ಜ್ ಮಾಡ್ತೀರಾ? ಹಾಗಿದ್ರೆ ನೀವು ಅಪಾಯದಲ್ಲಿದ್ದೀರಿ!
ಮೊಬೈಲ್ ಡಿಸ್ಪ್ಲೇ ಮೇಲೆ ಆ '100%' ಎಂಬ ಅಂಕಿ ಕಂಡರೆ ಸಿಗುವ ನೆಮ್ಮದಿಯೇ ಬೇರೆ. ಆದರೆ, ಟೆಕ್ ತಜ್ಞರು ಮತ್ತು ವಿಜ್ಞಾನದ ಪ್ರಕಾರ, ನಿಮ್ಮ ಈ ನೆಮ್ಮದಿಯ ಹವ್ಯಾಸವೇ ನಿಮ್ಮ ಸ್ಮಾರ್ಟ್ಫೋನ್ ಪಾಲಿಗೆ ಮರಣಶಾಸನವಾಗುತ್ತಿದೆ!

ಬೆಂಗಳೂರು: ನಮ್ಮಲ್ಲಿ ಬಹುತೇಕರಿಗೆ ಒಂದು ಸಾಮಾನ್ಯ ಹವ್ಯಾಸವಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಅಥವಾ ಆಫೀಸ್ಗೆ ಕಲ್ಪಿಸುವ ಮುನ್ನ ಮೊಬೈಲ್ ಫೋನ್ ಅನ್ನು ಚಾರ್ಜಿಂಗ್ ಇಟ್ಟು, ಅದು ನೂರಕ್ಕೆ ನೂರು (100%) ಆಗುವವರೆಗೂ ಕಾಯುತ್ತೇವೆ. ಇನ್ನೂ ಕೆಲವರಂತೂ ರಾತ್ರಿ ಮಲಗುವಾಗ ಫೋನ್ ಚಾರ್ಜರ್ಗೆ ಸಿಕ್ಕಿಸಿ, ಬೆಳಗ್ಗೆ ಎದ್ದಾಗ ಅನ್ಪ್ಲಗ್ ಮಾಡುತ್ತಾರೆ. ಮೊಬೈಲ್ ಡಿಸ್ಪ್ಲೇ ಮೇಲೆ ಆ ‘100%’ ಎಂಬ ಅಂಕಿ ಕಂಡರೆ ಸಿಗುವ ನೆಮ್ಮದಿಯೇ ಬೇರೆ. ಆದರೆ, ಟೆಕ್ ತಜ್ಞರು ಮತ್ತು ವಿಜ್ಞಾನದ ಪ್ರಕಾರ, ನಿಮ್ಮ ಈ ನೆಮ್ಮದಿಯ ಹವ್ಯಾಸವೇ ನಿಮ್ಮ ಸ್ಮಾರ್ಟ್ಫೋನ್ ಪಾಲಿಗೆ ಮರಣಶಾಸನವಾಗುತ್ತಿದೆ!
ಹೌದು, ನೀವು ಕೇಳುತ್ತಿರುವುದು ನೂರಕ್ಕೆ ನೂರು ನಿಜ. ನಿಮ್ಮ ಸ್ಮಾರ್ಟ್ಫೋನ್ ಅನ್ನು ಪ್ರತಿದಿನ ಕಂಪ್ಲೀಟ್ ಆಗಿ 100% ಚಾರ್ಜ್ ಮಾಡುವುದರಿಂದ ಅದರ ಬ್ಯಾಟರಿ ಆಯುಷ್ಯ ಅತ್ಯಂತ ವೇಗವಾಗಿ ಕ್ಷೀಣಿಸುತ್ತದೆ.
ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಾಗುವ ‘ಕೆಮಿಕಲ್ ಸ್ಟ್ರೆಸ್’ ಏನು?
ಇವತ್ತಿನ ದಿನದ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ‘ಲಿಥಿಯಂ-ಐಯಾನ್’ (Lithium-ion) ಬ್ಯಾಟರಿಗಳನ್ನು ಬಳಸಿರುತ್ತಾರೆ. ನಾವು ಫೋನ್ ಅನ್ನು ಪೂರ್ತಿಯಾಗಿ 100% ಚಾರ್ಜ್ ಮಾಡಿದಾಗ ಅಥವಾ ಸಂಪೂರ್ಣವಾಗಿ 0% ಗೆ ಇಳಿಸಿದಾಗ ಬ್ಯಾಟರಿಯ ಒಳಗಿನ ರಾಸಾಯನಿಕಗಳ ಮೇಲೆ ವಿಪರೀತ ಒತ್ತಡ (Chemical Stress) ಉಂಟಾಗುತ್ತದೆ.
ನೀವು ಗಮನಿಸಿರಬಹುದು; ಹೊಸದಾಗಿ ಫೋನ್ ಖರೀದಿಸಿದಾಗ ಬ್ಯಾಟರಿ ಲೈಫ್ ಅದ್ಭುತವಾಗಿರುತ್ತದೆ. ಆದರೆ ಒಂದು ವರ್ಷ ಕಳೆಯುತ್ತಿದ್ದಂತೆ ಬ್ಯಾಟರಿ ಬ್ಯಾಕಪ್ ಕಮ್ಮಿಯಾಗುತ್ತಾ ಬರುತ್ತದೆ. ಇದಕ್ಕೆ ನಾವು ದಿನಾಲೂ ಮಾಡುವ ಈ 100% ಚಾರ್ಜಿಂಗ್ ತಪ್ಪು ಮತ್ತು ಬ್ಯಾಟರಿ ಮೇಲಾಗುವ ಕೆಮಿಕಲ್ ಸ್ಟ್ರೆಸ್ ಆಯುಷ್ಯವನ್ನು ಕುಗ್ಗಿಸುವುದೇ ಮುಖ್ಯ ಕಾರಣ.
ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಪಾಲಿಸಿ ’80-20 ರೂಲ್’!
ಹಾಗಾದರೆ ಫೋನ್ ಅನ್ನು ಎಷ್ಟು ಚಾರ್ಜ್ ಮಾಡಬೇಕು? ಬ್ಯಾಟರಿ ಎಕ್ಸ್ಪರ್ಟ್ಸ್ ಪ್ರಕಾರ, ಸ್ಮಾರ್ಟ್ಫೋನ್ಗಳ ದೀರ್ಘಾವಧಿ ಬಾಳಿಕೆಗೆ ’80-20 ನಿಯಮ’ (80-20 Rule) ಅತ್ಯಂತ ಸೂಕ್ತ ಹಾಗೂ ಬೆಸ್ಟ್.
20% ರೂಲ್: ನಿಮ್ಮ ಫೋನ್ ಚಾರ್ಜ್ 20% ಗೆ ಇಳಿದ ತಕ್ಷಣವೇ ಚಾರ್ಜರ್ಗೆ ಕನೆಕ್ಟ್ ಮಾಡಿ. ಚಾರ್ಜ್ ಪೂರ್ತಿ ಖಾಲಿಯಾಗುವವರೆಗೂ ಕಾಯಬೇಡಿ.
80% ರೂಲ್: ಮೊಬೈಲ್ ಚಾರ್ಜ್ 80% ತಲುಪಿದ ತಕ್ಷಣವೇ ಚಾರ್ಜಿಂಗ್ ಆಫ್ ಮಾಡಿಬಿಡಿ.
ನಿಮ್ಮ ಫೋನ್ ಬ್ಯಾಟರಿ ಮಟ್ಟ ಯಾವಾಗಲೂ ಶೇಕಡಾ 20 ರಿಂದ 80 ರ ಆಸುಪಾಸಿನಲ್ಲಿದ್ದರೆ, ಬ್ಯಾಟರಿಯ ಒಟ್ಟಾರೆ ಆಯಸ್ಸು ದುಪ್ಪಟ್ಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇಂದೇ ಈ ಅಭ್ಯಾಸ ಬದಲಿಸಿಕೊಳ್ಳಿ
ನಿಮ್ಮ ಲಕ್ಷಾಂತರ ರೂಪಾಯಿ ಅಥವಾ ಕಷ್ಟದ ಗಳಿಕೆಯ ಸ್ಮಾರ್ಟ್ಫೋನ್ ದೀರ್ಘಕಾಲ ಸುಸ್ಥಿತಿಯಲ್ಲಿ ಇರಬೇಕೆಂದರೆ, ಇನ್ಮುಂದೆ ಫೋನ್ ಅನ್ನು 100% ಚಾರ್ಜ್ ಮಾಡಲು ಹೋಗಬೇಡಿ. ಅದರಲ್ಲೂ ವಿಶೇಷವಾಗಿ, ರಾತ್ರಿ ಇಡೀ ಚಾರ್ಜಿಂಗ್ ಇಟ್ಟು ಮಲಗುವ ಅಪಾಯಕಾರಿ ಹವ್ಯಾಸಕ್ಕೆ ಇಂದೇ ಬ್ರೇಕ್ ಹಾಕಿ. ನಿಮ್ಮ ಫೋನ್ ಬ್ಯಾಟರಿಯನ್ನು ನೀವೇ ಕಾಪಾಡಿಕೊಳ್ಳಿ!

