ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟ : 1 ಲಕ್ಷಕ್ಕೂ ಅಧಿಕ ವೇತನ
ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆಯ ಮೂಲಕ ಬ್ಯಾಂಕ್ ಆಪ್ ಇಂಡಿಯಾ ಒಟ್ಟು 779 ಕ್ರೆಡಿಟ್ ಆಫೀಸರ್‌ಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆಯ ಮೂಲಕ ಬ್ಯಾಂಕ್ ಆಪ್ ಇಂಡಿಯಾ ಒಟ್ಟು 779 ಕ್ರೆಡಿಟ್ ಆಫೀಸರ್‌ಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಜುಲೈ 20 ರ ಒಳಗೆ ಅರ್ಜಿ ಸಲ್ಲಿಕೆ ಅವಕಾಶವಿರುತ್ತದೆ. ಈ ಅರ್ಹತೆಗಳಿರುವ ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ
ಬ್ಯಾಂಕ್ ಆಫ್ ಇಂಡಿಯಾ ಈ ನೇಮಕಾತಿಯಲ್ಲಿ ಒಟ್ಟು ಮೂರು ಶ್ರೇಣಿಯ ಹುದ್ದೆಗಳಿಗೆ ಭರ್ತಿ ನಡೆಸಲಿದೆ. ಈ ಮೂರು ಹುದ್ದೆಗಳಿಗೆ ಕ್ರಮವಾಗಿ ಕನಿಷ್ಠ ವಯೋಮಿತಿಯನ್ನು ಕ್ರಮಾವಾಗಿ 25, 28 ಹಾಗೂ 32 ವರ್ಷಗಳನ್ನು ನಿಗದಿಪಡಿಸಿದೆ. ಇದೇ ರೀತಿ ಗರಿಷ್ಠ ವಯೋಮಿತಿಯನ್ನು ಸಹ ನಿಗದಿಪಡಿಸಿದೆ. ಗರಿಷ್ಠ ವಯಸ್ಸು ಕ್ರಮವಾಗಿ 32, 38 ಹಾಗೂ 45 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಇದನ್ನೂ ಓದಿ : ಐಬಿಪಿಎಸ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ನೇಮಕಾತಿ ಘೋಷಣೆ : ಆಸಕ್ತರು ಜುಲೈ 21 ರ ಮೊದಲು ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ಅವರ ಸ್ಕೇಲ್‌ಗೆ ಅನುಗುಣವಾಗಿ ನೀಡಲಾಗುವುದು.
ಸ್ಕೇಲ್-II: ತಿಂಗಳಿಗೆ ರೂ. 64,820 ರಿಂದ ರೂ. 93,960
ಸ್ಕೇಲ್-III: ತಿಂಗಳಿಗೆ ರೂ. 85,920 ರಿಂದ ರೂ. 1,05,280
ಸ್ಕೇಲ್-IV: ತಿಂಗಳಿಗೆ ರೂ. 1,02,300 ರಿಂದ ರೂ. 1,20,940
ಆಯ್ಕೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಮೊದಲಿಗೆ ಇಂಗ್ಲಿಷ್ ಮತ್ತು ಸಂಬಂಧಿತ ವಿಷಯದಲ್ಲಿ 125 ಅಂಕಗಳ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಪರೀಕ್ಷಾ ಅವಧಿ 2 ಗಂಟೆಗಳು. ಪ್ರತಿ ತಪ್ಪು ಉತ್ತರಕ್ಕೂ ಋಣಾತ್ಮಕ ಅಂಕ ಇರುತ್ತದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

