ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಕೊನೆ ದಿನ ಇಂದು. ಗ್ರ್ಯಾಂಡ್ ಫಿನಾಲೆ ಸಂಜೆ 6 ಗಂಟೆಯಿಂದ ಶುರುವಾಗಿದೆ. ಆದ್ರೆ ಅಷ್ಟರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ವಿನ್ನರ್ ಎಂಬ ಸುದ್ದಿ ಹರಿದಾಡ್ತಾ ಇದೆ. ಫೇಸ್ಬುಕ್, ಜನರ ಸ್ಟೇಟಸ್ ತುಂಬಾ ಗಿಲ್ಲಿ ನಟ ವಿನ್ನರ್ ಎಂಬ ಪೋಸ್ಟ್ ಗಳು ಇವೆ. ಅದು ನಿಜನಾ ಅಂತ ನೋಡೋಕೆ ಕೆಲವು ಗಂಟೆ ಕಾಯಲೇ ಬೇಕು.
ಗ್ರ್ಯಾಂಡ್ ಫಿನಾಲೆ
ಇನ್ನು ಬಿಗ್ ಬಾಸ್ ಶೋನಲ್ಲಿ ಪ್ರತಿ ಬಾರಿ 2 ದಿನ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು ಆದ್ರೆ ಈ ಬಾರಿ ಭಾನುವಾರ ಮಾತ್ರ ಫಿನಾಲೆ ನಡೆಯುತ್ತಿದೆ. ಅದರಲ್ಲೂ ಗಿಲ್ಲಿ ವಿನ್ನರ್ ಎಂದು ಎಲ್ಲಾ ಕಡೆ ಹರಿದಾಡ್ತಾ ಇದೆ.
ಗಿಲ್ಲಿ ವಿನ್ನರ್ , ರಕ್ಷಿತಾ ಶೆಟ್ಟಿ ರನ್ನರ್ ಅಪ್
ಇನ್ನು ಕಲರ್ಸ್ ಕನ್ನಡದವರು ಅನೌನ್ಸ್ ಮಾಡುವ ಮೊದಲೇ ಎಲ್ಲೆಡೆ ಗಿಲ್ಲಿ ವಿನ್ನರ್ ಎಂಬ ಸುದ್ದಿ ಹರಿದಾಡ್ತಾ ಇದೆ. ಅದೇ ರೀತಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಎಂದು ಬರೆದುಕೊಂಡಿದ್ದಾರೆ. ಅಶ್ವಿನಿ ಎರಡನೇ ರನ್ನರ್ ಅಪ್ ಆಗಿದ್ದಾರಂತೆ.
ಈ ಮಧ್ಯೆ, ಈ ಬಾರಿಯ ವೋಟಿಂಗ್ ವಿಚಾರದಲ್ಲಿ ಬಿಗ್ ಬಾಸ್ ಅಕ್ಷರಶಃ ಇತಿಹಾಸ ನಿರ್ಮಿಸಿದ್ದು, ಕಳೆದ ಎಲ್ಲಾ ಸೀಸನ್ಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ.
ಕಳೆದ ಸೀಸನ್ಗಿಂತ 6 ಪಟ್ಟು ಹೆಚ್ಚು ಮತ!
ಶನಿವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮತದಾನದ ಈ ದೈತ್ಯಾಕಾರದ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ ಹಲವು ಗಂಟೆಗಳಿರುವಾಗಲೇ, ರೇಸ್ನಲ್ಲಿ ಮುಂಚೂಣಿಯಲ್ಲಿರುವ ಒಬ್ಬನೇ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂದು ತಿಳಿಸಿ ಸ್ಪರ್ಧಿಗಳನ್ನು ದಂಗಾಗಿಸಿದ್ದಾರೆ.
ಇದನ್ನೂ ಓದಿ: https://kannada.newsnext.live/breaking/bigg-boss-season-12-live-this-winning-contestant-got-37-crore/
ಇದರ ಗಾಂಭೀರ್ಯವನ್ನು ವಿವರಿಸಿದ ಸುದೀಪ್, “ಕಳೆದ ಸೀಸನ್ 11ರ ವಿನ್ನರ್ ಪಡೆದಿದ್ದ ಒಟ್ಟು ಮತಗಳು ಕೇವಲ 5 ಕೋಟಿ. ಆದರೆ ಈ ಬಾರಿ ವಿನ್ನರ್ ಆಗಲಿರುವ ಸ್ಪರ್ಧಿಗೆ ಈಗಾಗಲೇ ಅದರ ಆರು ಪಟ್ಟು ಅಂದರೆ 37 ಕೋಟಿ ಮತಗಳು ಹರಿದು ಬಂದಿವೆ” ಎಂದು ದಾಖಲೆಯನ್ನು ಬಿಚ್ಚಿಟ್ಟರು.



