ಟಾಸ್ಕ್ ಮಾಸ್ಟರ್ ಔಟ್, ಬಿಗ್ ಬಾಸ್ ಮನೆಯಿಂದ ಹೊರ ಬಂದ ಪ್ರಬಲ ಸ್ಪರ್ಧಿ ಧನುಷ್!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫಿನಾಲೆಯಲ್ಲಿ ಮೊದಲು ಟಾಸ್ಕ್ ಮಾಸ್ಟರ್ ಎಂದು ಖ್ಯಾತಿ ಪಡೆದಿದ್ದ ಧನುಷ್ ಗೌಡ ಔಟ್ ಆಗಿದ್ದಾರೆ. ಧನುಷ್ ಗೌಡ ಹೊರ ಬರುತ್ತಿದ್ದಂತೆ ಮನೆಯ ಸ್ಪರ್ಧಿಗಳು, ಮತ್ತು ಕುಟುಂಬದವರು ಶಾಕ್ ಆಗಿದ್ದಾರೆ. ಅವರಿಗೆ ಒಂದು ಕೋಟಿಗೂ ಹೆಚ್ಚು ಮತ ಬಂದಿವೆ.
ಟಾಸ್ಕ್ ಮಾಸ್ಟರ್ ಎಂದೇ ಫೇಮಸ್
ಧನುಷ್ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದು ಟಾಸ್ಕ್ ಸಹ ಸೋತಿಲ್ಲ. ಎಲ್ಲದರಲ್ಲೂ ಮುಂದೇ ಇದ್ದರು. ಅದಕ್ಕೆ ಫ್ಯಾನ್ಸ್ ಇವರನ್ನು ಟಾಸ್ಕ್ ಮಾಸ್ಟರ್ ಎಂದು ಪ್ರೀತಿಯಿಂದ ಕರೆಯತ್ತಿದ್ದರು. ಬಂದಾಗಿನಿಂದ ಗೇಮ್ ಆಡುವುದರಲ್ಲಿ ಎತ್ತಿದ ಕೈ.
ಟಾಪ್ 6ಗೆ ತಲುಪಿದ್ದ ಸ್ಪರ್ಧಿ
ಇನ್ನು ಧನುಷ್ ಗೌಡ ಅವರು ಈ ಬಿಗ್ ಬಾಸ್ ಸೀಸನ್ ನಲ್ಲಿ ಮೊದಲು ಟಾಪ್ 6 ತಲುಪಿದ್ದ ಸ್ಪರ್ಧಿ ಆಗಿದ್ದರು. ಕೊಟ್ಟ ಎಲ್ಲಾ ಗೇಮ್‍ಗಳನ್ನು ಆಡಿ ಟಾಪ್ ಸಿಕ್ಸ್ ತಲುಪಿದ್ದರು.
ಜಗಳವಾಡದ ಧನುಷ್
ಬಿಗ್ ಬಾಸ್ ಅಂದ್ರೆ ಅಲ್ಲಿ ಜಗಳವಾಡಿದ್ರೆ ಮಾತ್ರ ಇರೋಕೆ ಸಾಧ್ಯ ಎಂದು ಎಲ್ಲರೂ ಅಂದುಕೊಳ್ತಾರೆ. ಆದ್ರೆ ಧನುಷ್ ಜಗಳವಾಡದೇ, ತಮ್ಮ ವ್ಯಕ್ತಿತ್ವ ಬಿಟ್ಟು ಕೊಡದೇ ಆಡಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/bigg-boss-winner-gilli-nata-news-is-doing-the-rounds-on-social-media/
ಕಣ್ಣೀರಿಟ್ಟ ತಾಯಿ
ಇನ್ನು ಧನುಷ್ ಆಚೆ ಬಂದಿದ್ದಕ್ಕೆ ಧನುಷ್ ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಧನುಷ್ ಅವರ ಮುಂದಿನ ಭವಿಷ್ಯಕ್ಕೆ ಒಳ್ಳೆದಾಗಲಿ ಎಂದು ಆಲ್ ದಿ ಬೆಸ್ಟ್ ಹೇಳಿದ್ದಾರೆ.



