ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ರಾಜಮಾತೆ, ಅಶ್ವಿನಿ ಗೌಡ ಮಾಡಿದ ಆ ತಪ್ಪಿನಿಂದ ಗೆಲುವು ಮಿಸ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಅಶ್ವಿನಿ ಗೌಡ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಮೂರನೇ ಸ್ಥಾನಕ್ಕೆ ರಾಜಮಾತೆ ಕುಸಿದಿದ್ದಾರೆ. ಸಖತ್ ಟಫ್ ಫೈಟ್ ಕೊಟ್ಟ ಅಶ್ವಿನಿ ಗೌಡ ವಿನ್ನರ್ ಅಥವಾ ರನ್ನರ್ ಆಗ್ತಾರೆ ಎಂದು ಎಲ್ಲಾ ಅಂದುಕೊಂಡಿದ್ರು. ಆದ್ರೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಎಲ್ಲಿ ಎಡವಿದ್ರೂ ನೋಡೋಣ.

ಗೌರವ ಬೇಕು ಅಂತಿದ್ರು, ಗೌರವ ಕೊಡಲಿಲ್ಲ
ಇನ್ನು ಅಶ್ವಿನಿ ಗೌಡ ನಟಿ ಮತ್ತು ಕನ್ನಡ ಪರ ಹೋರಾಟಗಾರ್ತಿ. ಬಂದಾಗಿನಿಂದ ಹೆಣ್ಣು ಮಕ್ಕಳ ಪರ ನಾನು ಸ್ಟ್ಯಾಂಡ್ ತಗೋತೀನಿ ಅಂತ ಹೇಳಿ ಅವರೇ ಯಾರಿಗೂ ಗೌರವ ಕೊಟ್ಟಿಲ್ಲ. ಅದು ಅಭಿಮಾನಿಗಳ ಮನಸ್ಸು ಕದಡಿದ್ದು ಸುಳ್ಳಲ್ಲ.

ಏಕವಚನ ಬಳಕೆ
ಇನ್ನು ಅಶ್ವಿನಿ ಗೌಡ ಅವರು ಕೋಪ ಬಂದಾಗ ಎಲ್ಲರಿಗೂ ಏಕವಚನ ಬಳಕೆ ಮಾಡ್ತಾ ಇದ್ರು. ಪದೇ ಪದೇ ಅದೇ ತಪ್ಪು ಮಾಡಿ ಸ್ಪರ್ಧಿಗಳ ಕೆಂಗಣ್ಣಿಗೂ ಗುರಿಯಾಗಿದ್ರು.

ರಕ್ಷಿತಾಗೆ ಅವಮಾನ ಮಾಡಿದ್ದು
ಮೂರನೇ ವಾರದಲ್ಲಿ ರಕ್ಷಿತಾಗೆ ಅಶ್ವಿನಿ ಗೌಡ ಅವರು ಅವಮಾನ ಮಾಡಿದ್ದರು. ಅದು ಅವರನ ಮೇಲಿನ ಅಭಿಪ್ರಾಯ ಬದಲಿಸಿತು.

ಇದನ್ನೂ ಓದಿ: https://kannada.newsnext.live/cinema/kavya-out-from-bigg-boss-house-see-detail/

ಏನೇ ಆಗಲಿ 41 ವರ್ಷವಾದ್ರೂ ಚೆನ್ನಾಗಿ ಟಫ್ ಫೈಟ್ ಕೊಟ್ಟು ಮೂರನೇ ಸ್ಥಾನಕ್ಕೆ ಬರುವುದು ಸುಲಭದ ಮಾತಲ್ಲ.

ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಕಾರ್ಯದರ್ಶಿ. ಅವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಅಶ್ವಿನಿ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದರು ಮತ್ತು ಅವರ ಆಟದಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories