2026ರ ಫೆಬ್ರವರಿಯಲ್ಲಿ ಇಷ್ಟೆಲ್ಲ ಹಬ್ಬ ಹರಿದಿನಗಳಿವೆ; ಮಹಾಶಿವರಾತ್ರಿ ಸೇರಿದಂತೆ ಪ್ರಮುಖ ಹಬ್ಬಗಳ ಪಟ್ಟಿ
February 2026 full list of festivals:: 2026ರ ವರ್ಷದ ಎರಡನೇ ತಿಂಗಳಾದ ಫೆಬ್ರವರಿ ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಈ ತಿಂಗಳಲ್ಲಿ ಹಿಂದೂ ಪಂಚಾಂಗದ ಪ್ರಕಾರ ಪುಣ್ಯಪ್ರದವಾದ ‘ಮಾಘ ಮಾಸ’ ನಡೆಯುತ್ತಿದ್ದು, ಶಿವನ ಆರಾಧನೆಯ ಮಹಾಶಿವರಾತ್ರಿ ಹಾಗೂ ಗುರು ರಾಘವೇಂದ್ರ ಸ್ವಾಮಿಗಳ ಜಯಂತಿಯಂತಹ ದೊಡ್ಡ ಹಬ್ಬಗಳು ಬರಲಿವೆ.
ಫೆಬ್ರವರಿ ತಿಂಗಳ ಹಬ್ಬಗಳ ಸಂಪೂರ್ಣ ಕ್ಯಾಲೆಂಡರ್ ಇಲ್ಲಿದೆ:
ತಿಂಗಳ ಮೊದಲಾರ್ಧದ ವಿಶೇಷಗಳು:
- ಫೆಬ್ರವರಿ 01 (ಭಾನುವಾರ): ವೇದವ್ಯಾಸ ಪೂಜೆ – ಜ್ಞಾನದ ಅಧಿದೇವತೆಯ ಆರಾಧನೆಗೆ ಪ್ರಶಸ್ತ ದಿನ.
- ಫೆಬ್ರವರಿ 04 (ಬುಧವಾರ): ಶಬೀ ಬರಾತ್ – ಮುಸ್ಲಿಂ ಬಾಂಧವರ ಪವಿತ್ರ ದಿನಗಳಲ್ಲಿ ಒಂದು.
- ಫೆಬ್ರವರಿ 05 (ಗುರುವಾರ): ಸಂಕಷ್ಟಹರ ಚತುರ್ಥಿ – ಗಣೇಶನ ಭಕ್ತರಿಗೆ ಸಂಕಷ್ಟ ನಿವಾರಣೆಯ ವ್ರತದ ದಿನ.
- ಫೆಬ್ರವರಿ 09 (ಸೋಮವಾರ): ಸೀತಾ ಜಯಂತಿ – ಜಗನ್ಮಾತೆ ಸೀತಾದೇವಿಯ ಜನ್ಮೋತ್ಸವ.
- ಫೆಬ್ರವರಿ 12 (ಗುರುವಾರ): ಕುಂಭ ಸಂಕ್ರಮಣ – ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುವ ದಿನ.
- ಫೆಬ್ರವರಿ 13 (ಶುಕ್ರವಾರ): ವಿಜಯಾ ಏಕಾದಶಿ – ಶತ್ರುಗಳ ಮೇಲೆ ಜಯ ಸಾಧಿಸಲು ಈ ಏಕಾದಶಿ ವ್ರತ ಮಾಡಲಾಗುತ್ತದೆ.
ಮಹಾಶಿವರಾತ್ರಿ ಮತ್ತು ಅಮಾವಾಸ್ಯೆ:
- ಫೆಬ್ರವರಿ 15 (ಭಾನುವಾರ): ಮಹಾಶಿವರಾತ್ರಿ – ಈ ತಿಂಗಳ ಅತ್ಯಂತ ದೊಡ್ಡ ಹಬ್ಬ. ಶಿವ ದೇವಾಲಯಗಳಲ್ಲಿ ಜಾಗರಣೆ ಮತ್ತು ವಿಶೇಷ ಅಭಿಷೇಕಗಳು ನಡೆಯಲಿವೆ.
- ಫೆಬ್ರವರಿ 17 (ಮಂಗಳವಾರ): ಮಾಘ ಅಮಾವಾಸ್ಯೆ – ಪಿತೃ ಕಾರ್ಯಗಳಿಗೆ ಮತ್ತು ಪವಿತ್ರ ನದಿ ಸ್ನಾನಕ್ಕೆ ಇದು ಶ್ರೇಷ್ಠ ದಿನ.
ತಿಂಗಳ ದ್ವಿತೀಯಾರ್ಧದ ವಿಶೇಷಗಳು:
- ಫೆಬ್ರವರಿ 19 (ಗುರುವಾರ): ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನ ಹಾಗೂ ಮುಸ್ಲಿಂರ ಪವಿತ್ರ ರಂಜಾನ್ ಮಾಸದ ಆರಂಭ.
- ಫೆಬ್ರವರಿ 24 (ಮಂಗಳವಾರ): ಶ್ರೀ ರಾಘವೇಂದ್ರ ಜಯಂತಿ – ಮಂತ್ರಾಲಯದ ಗುರು ಸಾರ್ವಭೌಮರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆಯಲಿವೆ.
- ಫೆಬ್ರವರಿ 27 (ಶುಕ್ರವಾರ): ಆಮಲಕಿ ಏಕಾದಶಿ – ನೆಲ್ಲಿಕಾಯಿ ಮರದ ಆರಾಧನೆ ಮಾಡುವ ವಿಶೇಷ ಏಕಾದಶಿ.
ಕೇತು ಗೋಚಾರ ಎಂದರೇನು? ಗೊಂದಲ, ನಷ್ಟ ಮತ್ತು ಅನಿಶ್ಚಿತತೆಯ ಪರಿಹಾರಕ್ಕೆ ಹೀಗೆ ಮಾಡಿ
ಹಬ್ಬಗಳ ಮಹತ್ವ:
ಫೆಬ್ರವರಿ ತಿಂಗಳು ಚಳಿಗಾಲ ಮುಗಿದು ವಸಂತ ಕಾಲದ ಆಗಮನದ ಮುನ್ಸೂಚನೆ ನೀಡುವ ಸಮಯ. ಈ ತಿಂಗಳ ಪವಿತ್ರ ಸ್ನಾನ ಮತ್ತು ದಾನ ಧರ್ಮಗಳು ವಿಶೇಷ ಫಲ ನೀಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ವಿಶೇಷವಾಗಿ ಮಹಾಶಿವರಾತ್ರಿ ಈ ಬಾರಿ ಭಾನುವಾರ ಬಂದಿರುವುದು ಭಕ್ತರಿಗೆ ಹೆಚ್ಚಿನ ಸಂಭ್ರಮ ತಂದಿದೆ. ನಿಮ್ಮ ದಿನಚರಿಯಲ್ಲಿ ಈ ದಿನಾಂಕಗಳನ್ನು ಗುರುತು ಮಾಡಿಕೊಳ್ಳಿ ಮತ್ತು ಹಬ್ಬಗಳನ್ನು ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿ.



