ಭೂಮಿಗೆ ಅಪ್ಪಳಿಸಲಿದೆಯೇ ಪ್ರಬಲ ಸೌರ ಮಾರುತ? ಇಸ್ರೋ ನೀಡಿದೆ ಹೈ ಅಲರ್ಟ್!

Solar storms for India: ಬಾಹ್ಯಾಕಾಶದ ‘ಮಹಾಶಕ್ತಿ’ ಸೂರ್ಯ ಈಗ ಕೆಂಡಾಮಂಡಲವಾಗಿದ್ದಾನೆ. ಸೂರ್ಯನ ಮೇಲ್ಮೈನಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿದ್ದು, ಪ್ರಬಲ ಸೌರ ಜ್ವಾಲೆಗಳು (Solar Flares) ಭೂಮಿಯತ್ತ ಧಾವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.

ಕಳೆದ 24 ಗಂಟೆಗಳಲ್ಲಿ ಸೂರ್ಯನಿಂದ ಅತಿ ದೊಡ್ಡ ಎಕ್ಸ್-ಕ್ಲಾಸ್ (X8.1) ಸೌರ ಜ್ವಾಲೆಗಳು ಹೊರಹೊಮ್ಮಿವೆ. ಇದು 2026ರ ಸಾಲಿನಲ್ಲಿ ದಾಖಲಾದ ಅತಿ ಪ್ರಬಲ ಸ್ಫೋಟ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಸೂರ್ಯನಲ್ಲಿ ಉಂಟಾಗಿರುವ ‘ಆಕ್ಟಿವ್ ರೀಜನ್ 14366’ ಎಂಬ ಕಾಂತೀಯ ವಲಯವು ಈ ಅಶಾಂತಿಗೆ ಕಾರಣವಾಗಿದೆ.

ಇದರಿಂದಾಗಿ ಭೂಮಿಯ ಮೇಲೆ ರೇಡಿಯೋ ಬ್ಲ್ಯಾಕ್‌ಔಟ್ ಅಥವಾ ಸಂವಹನ ಕಡಿತವಾಗುವ ಸಾಧ್ಯತೆ ಇದೆ. ಸೌರ ಮಾರುತಗಳು ಭೂಮಿಯ ವಾತಾವರಣಕ್ಕೆ ಅಪ್ಪಳಿಸಿದರೆ ಉಪಗ್ರಹಗಳು, ಟೆಲಿವಿಷನ್ ಸಂಕೇತಗಳು, ರೇಡಾರ್ ವ್ಯವಸ್ಥೆ ಮತ್ತು ವಿದ್ಯುತ್ ಗ್ರಿಡ್‌ಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇಸ್ರೋ ತನ್ನ 50ಕ್ಕೂ ಹೆಚ್ಚು ಕಾರ್ಯಾಚರಣಾ ಉಪಗ್ರಹಗಳನ್ನು ನಿರಂತರವಾಗಿ ಗಮನಿಸುತ್ತಿದೆ.

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್‌ ಭಟ್‌ ಬಂಧನ; ಅಕ್ರಮ ಸಂಬಂಧದ ದೂರು ನೀಡಿದ್ದಕ್ಕೆ ಕೊಲೆ ಸಂಚು ಮಾಡಿದ್ರಾ ಗುರೂಜಿ?

ಭಾರತದ ಮೊದಲ ಸೌರ ವೀಕ್ಷಣಾಲಯ ‘ಆದಿತ್ಯ-L1’ ಈಗ ಸೂರ್ಯನ ಈ ಅಬ್ಬರವನ್ನು ಹತ್ತಿರದಿಂದ ಗಮನಿಸುತ್ತಿದ್ದು, ಅಗತ್ಯ ಮಾಹಿತಿಯನ್ನು ರವಾನಿಸುತ್ತಿದೆ. ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಅಪಾಯವಿಲ್ಲದಿದ್ದರೂ, ಸೂರ್ಯನ ಚಟುವಟಿಕೆಗಳು ಏರುಪೇರಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories