ಸುಚಿತ್ರಾ ನಾಯ್ಕ್ ಕಳ್ಳಾಟ; ಅಪ್ಪು ಹೆಸರಿನ ದುರ್ಬಳಕೆ, ಕಲಬುರಗಿ ಜಮೀನ್ದಾರನ ಜೊತೆ ಅಕ್ರಮ ಸಂಬಂಧ!
Astrologer Kamalakar Bhat Suchitra Bhat Case updates: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತಳಾಗಿರುವ ಸುಚಿತ್ರಾ ಎಂಬಾಕೆಯ ಅಚ್ಚರಿಯ ಸಂಗತಿಗಳು ತನಿಖೆಯ ವೇಳೆ ಬಯಲಾಗುತ್ತಿವೆ. ಟಿವಿ9 ವರದಿಯ ಪ್ರಕಾರ, ಸುಚಿತ್ರಾ ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಮಾತ್ರವಲ್ಲದೆ, ಕಲಬುರಗಿಯ ಜಮೀನ್ದಾರನೊಬ್ಬನ ಜೊತೆಗೂ ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು ಎನ್ನುವುದು ಈಗ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯ ವೇಳೆ ಸುಚಿತ್ರಾಳ ಮೊಬೈಲ್ ರಹಸ್ಯಗಳು ಅನಾವರಣಗೊಂಡಿವೆ. ಕಲಬುರಗಿಯ ಶರಣಬಸಪ್ಪ ಎಂಬ ಜಮೀನ್ದಾರನ ಜೊತೆ ಈಕೆ ಲವ್ ರಿಲೇಷನ್‌ಶಿಪ್ ಹೊಂದಿದ್ದಳು. ಈತನ ಹಣದ ಸಹಾಯದಿಂದಲೇ ಆಕೆ ‘ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ’ ನಡೆಸುತ್ತಿದ್ದಳು ಎನ್ನಲಾಗಿದೆ.
ಹಣದ ವ್ಯವಹಾರ ಮತ್ತು ಮನಸ್ತಾಪ
ಟಿವಿ9 ಮಾಹಿತಿಯ ಪ್ರಕಾರ, ಶರಣಬಸಪ್ಪ ನೀಡುತ್ತಿದ್ದ ಹಣವನ್ನು ಸುಚಿತ್ರಾ ಸಿದ್ದಾಪುರದಲ್ಲಿ ಬಡ್ಡಿಗೆ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್ ಗಮನಕ್ಕೆ ಬಂದಾಗ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹಣದ ವ್ಯಾಮೋಹದಲ್ಲಿದ್ದ ಸುಚಿತ್ರಾ, ನಂತರ ಜಮೀನ್ದಾರನನ್ನು ಬಿಟ್ಟು ಜ್ಯೋತಿಷಿಯ ಜೊತೆ ಪೂರ್ಣ ಪ್ರಮಾಣದ ಸಂಬಂಧ ಮುಂದುವರಿಸಿದ್ದಳು. ಈಕೆಯ ಐಷಾರಾಮಿ ಜೀವನಕ್ಕಾಗಿ ಕಮಲಾಕರ್ ಭಟ್ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದುಬಂದಿದೆ.
ಅಭಿಪ್ರಾಯ: ಜ್ಯೋತಿಷಿ ಕಮಲಾಕರ್ ಭಟ್-ಸುಚಿತ್ರಾ ನಾಯ್ಕ್ ಪ್ರಕರಣ ಆಧುನಿಕ ಸಮಾಜದ ನೈತಿಕ ಪತನಕ್ಕೆ ಹಿಡಿದ ಕೈಗನ್ನಡಿ
ಸಂಸಾರದಲ್ಲಿ ಬಿರುಕು
ಸುಚಿತ್ರಾಳ ಇಂತಹ ನೌಟಂಕಿ ಆಟಗಳು ಮತ್ತು ರೀಲ್ಸ್ ಕ್ರೇಜ್‌ನಿಂದಾಗಿ ಆಕೆಯ ಪತಿ ಮಹೇಶ್ ಬೇಸತ್ತಿದ್ದರು. ಪತ್ನಿಯ ನಡವಳಿಕೆಯಿಂದ ಸಂಸಾರದಲ್ಲಿ ಜಗಳವಾಗಿ, ಕಳೆದ ಆರು ತಿಂಗಳಿಂದ ಮಹೇಶ್ ಆಕೆಯಿಂದ ದೂರವಿದ್ದರು ಎನ್ನಲಾಗಿದೆ.
ತನಿಖೆ ತೀವ್ರ
ಸುಚಿತ್ರಾಳ ಮೊಬೈಲ್‌ನಲ್ಲಿ ಇನ್ನೂ ಅನೇಕ ಪ್ರಭಾವಿಗಳ ಸಂಪರ್ಕ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆಕೆಯ ಸಂಪರ್ಕದಲ್ಲಿದ್ದ ಇತರರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಜ್ಯೋತಿಷಿ ಮತ್ತು ಪ್ರೇಯಸಿ ಸುಚಿತ್ರಾ ಇಬ್ಬರೂ ಜೈಲು ಪಾಲಾಗಿದ್ದು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ರಹಸ್ಯಗಳು ಹೊರಬರುವ ಸಾಧ್ಯತೆಯಿದೆ.



