ಪ್ರೇಮಿಗಳ ದಿನದಂದು ಹೊಸ ದಾಖಲೆ ಬರೆದ ಬೆಂಗಳೂರು ಏರ್​ಪೋರ್ಟ್ : ಗುಲಾಬಿ ರಫ್ತಿನಲ್ಲಿ ಇತಿಹಾಸ ನಿರ್ಮಾಣ

ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ ಹೊಸ ಸಾಧನಗೈದಿದೆ. ದಾಖಲೆಯ 60 ದಶಲಕ್ಷಕ್ಕೂ ಅಧಿಕ ಗುಲಾಬಿ ಹೂವುಗಳನ್ನು ವಿಶ್ವದೆಲ್ಲೆಡೆ ರಫ್ತು ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಒಟ್ಟು ತೂಕದಲ್ಲಿ ಶೇ. 64 ರಷ್ಟು ಮತ್ತು ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಏರಿಕೆ ಕಂಡು ಬಂದಿದ. ಬೆಂಗಳೂರು ಏರ್​ಪೋರ್ಟ್​ನಿಂದ ಒಟ್ಟು 2,700 ಮೆಟ್ರಿಕ್ ಟನ್‌ಗಿಂತಲೂ ಅಧಿಕ ತೂಕದ ಹೂವುಗಳನ್ನು ರವಾನಿಸಲಾಗಿದೆ.
26 ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿಂದ ಗುಲಾಬಿ ಹೂವು ಸರಬರಾಜಾಗಿದೆ. ಇದರಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಲಾಸ್​ ಏಂಜಲೀಸ್​ ಹಾಗ ಲಂಡನ್​ ಗ್ಯಾಟಿಂಕ್​ನಂತಹ ನಗರಗಳಲ್ಲಿಯೂ ಬೆಂಗಳೂರಿನ ಗುಲಾಬಿಯ ಕಂಪು ತಲುಪಿದೆ. ಭಾರತದೊಳಗೆ 47 ತಾಣಗಳಿಗೆ ಒಟ್ಟು 2,402 ಮೆಟ್ರಿಕ್ ಟನ್ ಹೂವುಗಳನ್ನು ಸಾಗಿಸಲಾಗಿದೆ. ಈ ಮೂಲಕ ಸತತ 5ನೇ ವರ್ಷವೂ ಗುಲಾಬಿ ಹೂವು ರಫ್ತಿನಲ್ಲಿ ಬೆಂಗಳೂರು ಅಗ್ರಗಣ್ಯ ಸ್ಥಾನ ಗಳಿಸಿದಂತಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories