iQOO 15R ಬಿಡುಗಡೆ: 7600mAh ಬ್ಯಾಟರಿ ಮತ್ತು ಪವರ್ಫುಲ್ ಪ್ರೊಸೆಸರ್ : ಅಗ್ಗದ ಬೆಲೆಗೆ ಗೇಮಿಂಗ್ ಪೋನ್

iQOO 15R Price : ನೀವು ಗೇಮಿಂಗ್ ಪ್ರಿಯರಾ ? ಅಥವಾ ದಿನವಿಡೀ ಚಾರ್ಜ್ ಇಲ್ಲದೆ ಫೋನ್ ಬಳಸಬೇಕೆನ್ನುವವರಾ ? ಹಾಗಿದ್ದರೆ ನಿಮಗಾಗಿಯೇ ಐಕೂ (iQOO) ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ iQOO 15R ಸ್ಮಾರ್ಟ್ಫೋನ್ ಅನ್ನು ಇಂದು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಈ ಫೋನ್ನ ಬೆಲೆ ಮತ್ತು ಫೀಚರ್ಸ್ಗಳು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿವೆ.
ಸ್ಮಾರ್ಟ್ಪೋನ್ ಮಾರುಕಟ್ಟೆಗೆ ಐಕ್ಯೂ 15ಆರ್ ಮೊಬೈಲ್ ಕಂಪನ ಸೃಷ್ಟಿಸಿದೆ. ಅತ್ಯಂತ ಕಡಿಮೆ ಬೆಲೆ ಗೇಮಿಂಗ್ ಮೊಬೈಲ್ ಲಭ್ಯವಾಗ್ತಾ ಇದೆ. ಹಾಗಾದ್ರೆ ಈ iQOO 15R ಮೊಬೈಲ್ ಬೆಲೆ ಏಷ್ಟು ? ಇದರಲ್ಲಿ ಇರುವ ಫೀಚರ್ಸ್ ಏನು ಅನ್ನೋ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಐಕ್ಯೂ 15ಆರ್ ಬೆಲೆ ಎಷ್ಟು ? (iQOO 15R Price in India)
ಭಾರತದಲ್ಲಿ iQOO 15R ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ:
- 8GB + 256GB: ₹44,999
- 12GB + 256GB: ₹47,999
- 12GB + 512GB: ₹52,999

iQOO 15R : ಕ್ರೆಡಿಟ್ ಕಾರ್ಡ್ ಗಳ ಮೇಲೆ ಭರ್ಜರಿ ಕೊಡುಗೆ
HDFC ಅಥವಾ Axis ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ ₹4,000 ಇನ್ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಅಂದರೆ, ನೀವು ಈ ಫೋನ್ ಅನ್ನು ಕೇವಲ ₹40,999 ಕ್ಕೆ ಖರೀದಿಸಬಹುದು! ಇದರೊಂದಿಗೆ ಉಚಿತವಾಗಿ ₹1,899 ಮೌಲ್ಯದ TWS ಇಯರ್ಬಡ್ಸ್ ಕೂಡ ಲಭ್ಯವಿದೆ.
ಐಕ್ಯೂ 15ಆರ್ ಪ್ರಮುಖ ಫೀಚರ್ಸ್ Specifications):
- ಪವರ್ಫುಲ್ ಪ್ರೊಸೆಸರ್: ಈ ಫೋನ್ನಲ್ಲಿ ಕ್ವಾಲ್ಕಾಮ್ನ ಅತ್ಯಂತ ವೇಗದ Snapdragon 8 Gen 5 ಚಿಪ್ಸೆಟ್ ಬಳಸಲಾಗಿದೆ. ಇದು ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ಗೆ ಹೇಳಿ ಮಾಡಿಸಿದಂತಿದೆ.
- ಬೃಹತ್ ಬ್ಯಾಟರಿ: ಅಚ್ಚರಿಯೆಂದರೆ, ಈ ಫೋನ್ 7,600mAh ಸಾಮರ್ಥ್ಯದ ಸಿಲಿಕಾನ್ ಆನೋಡ್ ಬ್ಯಾಟರಿ ಹೊಂದಿದೆ. ಇದು ಇಡೀ ದಿನ ಹೆವಿ ಬಳಕೆಗೂ ಸಾಟಿಯಿಲ್ಲದ ಬ್ಯಾಕಪ್ ನೀಡುತ್ತದೆ.
- ಸೂಪರ್ ಫಾಸ್ಟ್ ಚಾರ್ಜಿಂಗ್: ಇಷ್ಟು ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು 100W FlashCharge ಬೆಂಬಲ ನೀಡಲಾಗಿದೆ. ಕೇವಲ 33 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗಲಿದೆ.
- ಡಿಸ್ಪ್ಲೇ: 6.59-ಇಂಚಿನ 1.5K AMOLED ಸ್ಕ್ರೀನ್ ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿದೆ.
- ಕ್ಯಾಮೆರಾ: ಹಿಂಭಾಗದಲ್ಲಿ 50MP Sony LYT-700V ಪ್ರೈಮರಿ ಕ್ಯಾಮೆರಾ (OIS ಜೊತೆಗೆ) ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಇದೆ. ಸೆಲ್ಫಿಗಾಗಿ 32MP ಕ್ಯಾಮೆರಾ ನೀಡಲಾಗಿದೆ.
ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ? (Sale Date)
ಈ ಫೋನ್ನ ಮಾರಾಟ ಮಾರ್ಚ್ 3 ರಿಂದ ಅಮೆಜಾನ್ (Amazon) ಮತ್ತು ಐಕೂ ಅಧಿಕೃತ ವೆಬ್ಸೈಟ್ನಲ್ಲಿ ಆರಂಭವಾಗಲಿದೆ. ಮಾರ್ಚ್ 2 ರಂದು ಮಧ್ಯಾಹ್ನ 1 ಗಂಟೆಗೆ ಅರ್ಲಿ ಸೇಲ್ (Early Sale) ನಡೆಯಲಿದೆ. ಇದು ‘Triumph Silver’ ಮತ್ತು ‘Dark Knight’ ಬಣ್ಣಗಳಲ್ಲಿ ಲಭ್ಯವಿದೆ.
iQOO 15R Launched The Ultimate Budget Gaming Phone with a Massive 7600mAh Battery See iQOO 15R Price & Specs



