ಮೊದಲ ಬಾರಿಗೆ ಮಗುವನ್ನು ಕೈಗೆತ್ತಿಕೊಳ್ಳಲು ನಡುಗಿದ ತಂದೆ : ನೆಟ್ಟಿಗರ ಮನಗೆದ್ದಿದೆ ಈ ಭಾವನಾತ್ಮಕ ವಿಡಿಯೋ

ಮೊದಲನೇ ಬಾರಿಗೆ ತಂದೆಯ ಸ್ಥಾನ ಪಡೆದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ತನ್ನ ನವಜಾತ ಶಿಶುವನ್ನು ಎತ್ತಿಕೊಳ್ಳುವ ಸಂದರ್ಭದಲ್ಲಿ ತೋರಿದ ಭಯ ಹಾಗೂ ಭಾವನಾತ್ಮಕ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.

ತಂದೆ ಎಂಬ ಪದವಿ ಜಗತ್ತಿನ ಸರ್ವಶ್ರೇಷ್ಠ ಸ್ಥಾನಗಳಲ್ಲೊಂದು. ಅದರಲ್ಲೂ ಮೊದಲನೇ ಬಾರಿ ತಂದೆಯಾಗುವ ಅನುಭವ ವರ್ಣನಾತೀತ. ಇದೇ ರೀತಿ ಮೊದಲನೇ ಬಾರಿಗೆ ತಂದೆಯ ಸ್ಥಾನ ಪಡೆದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ತನ್ನ ನವಜಾತ ಶಿಶುವನ್ನು ಎತ್ತಿಕೊಳ್ಳುವ ಸಂದರ್ಭದಲ್ಲಿ ತೋರಿದ ಭಯ ಹಾಗೂ ಭಾವನಾತ್ಮಕ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.

ಡಾ. ಸುಗನ್ಯಾ ಸರವಣಕುಮಾರ್​ ಎಂಬವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು 200 ಮಿಲಿಯನ್​ಗೂ ಅಧಿಕ ವೀವ್ಸ್​ ಪಡೆದದೆ. ಚೆನ್ನೈನ ಸುಗನ್​ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದ್ದು, ವೈದ್ಯರು ಮಗುವನ್ನು ತಂದು ತೋರಿಸಿದಾಗ , ತಂದೆಯ ಮುಖದಲ್ಲಿದ್ದ ಭಯ ಹಾಗೂ ಸಂತೋಷ ಮಿಶ್ರಿತ ಭಾವನೆ ಎಲ್ಲರ ಮನಗೆದ್ದಿದೆ. ಕಂದಮ್ಮನನ್ನು ಸ್ಪರ್ಶಿಸುವ ಸಂದರ್ಭದಲ್ಲಿ ನಡುಗುತ್ತಿರುವ ತಂದೆಯ ಕೈಯನ್ನು ನೋಡಿ ನೆಟ್ಟಿಗರು ಭಾವನಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಂಡ ಮುಖ್ಯೋಪಾಧ್ಯಾಯಿನಿ: ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್!

‘‘ಬಲಿಷ್ಠ ವ್ಯಕ್ತಿಯೊಬ್ಬರಿಗೆ ಸಣ್ಣ ಸಂತೋಷವನ್ನು ಹಿಡಿದುಕೊಳ್ಳಲು ಕೈ ನಡುಗುತ್ತಿದೆ. ನಾವು ಪ್ರತಿಯೊಂದು ಕ್ಷಣವನ್ನೂ ಜೀವಿಸಬೇಕು. ಹೊಸ ಸಂತೋಷವೊಂದು ಇವರ ಕುಟುಂಬ ಸೇರಿದೆ’’ ಎಂದು ಈ ವಿಡಿಯೋ ಕ್ಯಾಪ್ಶನ್​ ನೀಡಲಾಗಿದೆ .

ಮಾರ್ಚ್ 7ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇನ್​ಸ್ಟಾಗ್ರಾಂನಲ್ಲಿ 207 ಮಿಲಿಯನ್​ ವೀಕ್ಷಣೆ ಹಾಗೂ 9.9 ಮಿಲಿಯನ್​ ಲೈಕ್​ಗಳನ್ನು ಸಂಪಾದಿಸಿದೆ. ವೈದ್ಯರ ತಾಳ್ಮೆ ಹಾಗೂ ತಂದೆಯ ಪರಿಶುದ್ಧ ಪ್ರೀತಿ ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಂದೆಯ ಪ್ರೀತಿ ಎಂದರೆ ಹೀಗೆಯೇ ಇರುತ್ತದೆ ಎಂದು ಹೊಗಳಿದ್ದಾರೆ.

ತಂದೆ ಇಂದು ತನ್ನ ಹೆಗಲ ಮೇಲೆ ತನ್ನ ಜಗತ್ತನ್ನೇ ಹೊತ್ತುಕೊಂಡಿದ್ದಾರೆ ಎಂದು ಬರೆದರೆ ಮತ್ತೊಬ್ಬ ನೆಟ್ಟಿಗರು ಇದು ಪ್ರೀತಿಯ ಶುದ್ಧ ರೂಪ ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬರು ನಡುಗುವ ಕೈಗಳು ತಿಳಿಯದೆ ಮಗುವನ್ನು ನಾನು ನೋಯಿಸಿಬಿಟ್ಟರೆ ಎಂಬ ಭಾವನೆ ಹೊರಹಾಕುತ್ತಿದೆ ಎಂದು ಹೇಳಿದ್ದಾರೆ/ ಅಂದಹಾಗೆ ಈ ವಿಡಿಯೋ ನೋಡಿ ನಿಮಗೆ ಏನೆನ್ನಿಸಿತು ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories