ಕರಾವಳಿಯಲ್ಲಿ ವಾಟರ್ ಮೆಟ್ರೋ ಕನಸು: CRZ ನಿಯಮ ಸಡಿಲಿಕೆ ಬಗ್ಗೆ ಎಂ.ಎ. ಗಫೂರ್ ಬಿಚ್ಚಿಟ್ಟ ಪ್ಲಾನ್

ಹಿರಿಯ ಕಾಂಗ್ರೆಸ್ ನಾಯಕ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್‌ ( M.A. Gafoor) ಅವರು 'ನ್ಯೂಸ್ ನೆಕ್ಸ್ಟ್ ಸುದ್ದಿ ಸಂಪಾದಕರಾದ ಪ್ರಣೂತ್‌ ಆರ್.ಗಾಣಿಗ ಅವರು ನಡೆಸಿದ ವಿಶೇಷ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಉಡುಪಿ: ಕರ್ನಾಟಕದ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡಲು ರಾಜ್ಯ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಇದರ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್‌ ( M.A. Gafoor) ಅವರು ‘ನ್ಯೂಸ್ ನೆಕ್ಸ್ಟ್ ಸುದ್ದಿ ಸಂಪಾದಕರಾದ ಪ್ರಣೂತ್‌ ಆರ್.ಗಾಣಿಗ ಅವರು ನಡೆಸಿದ ವಿಶೇಷ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಕರಾವಳಿಯಲ್ಲಿ ‘ವಾಟರ್ ಮೆಟ್ರೋ’ ಕ್ರಾಂತಿ ?

ಕೇರಳದ ಕೊಚ್ಚಿಯಲ್ಲಿ ಯಶಸ್ವಿಯಾಗಿರುವ ವಾಟರ್‌ ಮೆಟ್ರೋ (Water Metro) ಮಾದರಿಯನ್ನು ಕರ್ನಾಟಕದ ಕರಾವಳಿಯಲ್ಲೂ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಮಂಗಳೂರಿನ ನೇತ್ರಾವತಿ ನದಿಯ ಸುತ್ತಮುತ್ತ ಈ ಯೋಜನೆಯ ಸಾಧ್ಯಸಾಧ್ಯತೆಗಳ ಬಗ್ಗೆ ಈಗಾಗಲೇ ಪ್ರಾಥಮಿಕ ಸರ್ವೆ ನಡೆದಿದೆ ಎಂದಿದ್ದಾರೆ.

ನಾವು ಕೇರಳಕ್ಕೆ ಭೇಟಿ ನೀಡಿ ಅಲ್ಲಿನ ವಾಟರ್ ಮೆಟ್ರೋ ಕಾರ್ಯವೈಖರಿಯನ್ನು ಅಧ್ಯಯನ ಮಾಡಿದ್ದೇವೆ. ಕರ್ನಾಟಕದ ಕರಾವಳಿಯಲ್ಲೂ ಇಂತಹ ಯೋಜನೆ ಜಾರಿಗೆ ತಂದರೆ ಪ್ರವಾಸೋದ್ಯಮಕ್ಕೆ ದೊಡ್ಡ ಶಕ್ತಿ ಸಿಗಲಿದೆ. ಮುಂದಿನ ವಾರ ಕೊಚ್ಚಿಯ ತಜ್ಞರ ತಂಡ ಕರ್ನಾಟಕಕ್ಕೆ ಬರಲಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ ! ಶ್ವಾಸಕೋಶದ ಬಗ್ಗೆ ಇರಲಿ ಎಚ್ಚರ

CRZ ನಿಯಮ ಸಡಿಲಿಕೆ: ಜನಸಾಮಾನ್ಯರಿಗೆ ಸಿಗಲಿದೆ ನೆಮ್ಮದಿ

ಕರಾವಳಿ ನಿವಾಸಿಗಳಿಗೆ ದೊಡ್ಡ ತಲೆನೋವಾಗಿದ್ದ Coastal Regulation Zone (CRZ) ನಿಯಮಗಳ ಬಗ್ಗೆಯೂ ಗಫೂರ್ ಅವರು ಆಶಾದಾಯಕ ಮಾತುಗಳನ್ನಾಡಿದ್ದಾರೆ.

ಮೊದಲು ಸಮುದ್ರ ತೀರದಿಂದ 200 ಮೀಟರ್ ಇದ್ದ ನಿರ್ಬಂಧಿತ ಪ್ರದೇಶವನ್ನು ಈಗ 50 Meters ಗೆ ಇಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಅಂತಿಮ ಹಂತದಲ್ಲಿವೆ. ಇದರಿಂದ ಮನೆ ಕಟ್ಟುವವರಿಗೆ ಮತ್ತು ಸಣ್ಣ ಪ್ರಮಾಣದ ಪ್ರವಾಸೋದ್ಯಮ ಉದ್ಯಮಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ : ಬಡಾನಿಡಿಯೂರು ಏಕ ವಿನ್ಯಾಸ ಕಡತ ವಿಚಾರ : ರಘುಪತಿ ಭಟ್​ ಆರೋಪಗಳಿಗೆ ಯಶಪಾಲ್​ ಸುವರ್ಣ ತಿರುಗೇಟು

ಕರಾವಳಿ ಅಭಿವೃದ್ಧಿ ಮಂಡಳಿಯ ಹೊಸ ಪ್ಲಾನ್

ಹಿಂದೆ ಕೇವಲ ಕಿಂಡಿ ಅಣೆಕಟ್ಟು (Vented Dams) ನಿರ್ಮಾಣಕ್ಕೆ ಸೀಮಿತವಾಗಿದ್ದ ಪ್ರಾಧಿಕಾರ, ಈಗ ಮಂಡಳಿಯಾದ ನಂತರ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.

ಸಾಗರಮಾಲಾ ಯೋಜನೆ (Sagar Mala Project): ಕೇಂದ್ರ ಸರ್ಕಾರದ ಈ ಯೋಜನೆಯಡಿ ಕರ್ನಾಟಕಕ್ಕೆ ಬರಬೇಕಾದ ಅನುದಾನವನ್ನು ತರಲು ಸಂಸದರಾದ ಬ್ರಿಜೇಶ್ ಚೌಟ ಮತ್ತು ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ.

ಬಂದರುಗಳಿಗೆ ಮೂಲ ಸೌಕರ್ಯ (Infrastructure at Ports)

ಕರಾವಳಿಯ 13 ಬಂದರುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು.

ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ

ಪ್ರಮುಖ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು, ಧರ್ಮಸ್ಥಳ ಮತ್ತು ಸುಬ್ರಮಣ್ಯವನ್ನು ಜೋಡಿಸುವ ರಸ್ತೆ ಸಂಪರ್ಕ ಸುಧಾರಣೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 3 ಸ್ಥಾನ ಪಕ್ಕಾ

ತಮ್ಮ 35 ವರ್ಷಗಳ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸಿದ ಗಫೂರ್ ಅವರು, ಆಸ್ಕರ್ ಫರ್ನಾಂಡಿಸ್ ಅವರ ಗರಡಿಯಲ್ಲಿ ಬೆಳೆದವರು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಯ ಬಗ್ಗೆ ಮಾತನಾಡುತ್ತಾ, “ಹಿನ್ನಡೆ ತಾತ್ಕಾಲಿಕ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 2-3 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಇಕೋ ಟೂರಿಸಂ (Eco-Tourism): ಕರಾವಳಿಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಬೆಳೆಸುವುದು.
  • ಏಕಗವಾಕ್ಷಿ ವ್ಯವಸ್ಥೆ (Single Window System): ಉದ್ಯಮಿಗಳಿಗೆ ಸುಲಭವಾಗಿ ಪರವಾನಗಿ ಸಿಗುವಂತೆ ಏಕಗವಾಕ್ಷಿ ಪದ್ಧತಿ ಜಾರಿ.
  • ಮರಳುಗಾರಿಕೆಯಿಂದ ಉದ್ಯೋಗ : ಮರಳುಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ.

ವಿಶೇಷ ಸಂದರ್ಶನದಲ್ಲಿ ಎಂಎ ಗಫೂರ್‌ ಅವರು ಏನೆಲ್ಲಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಅನ್ನೋ ಕುರಿತು ನ್ಯೂಸ್‌ ನೆಕ್ಸ್ಟ್‌ ಡಿಜಿಟಲ್‌ ವಾಹಿನಿಯನ್ನು ವಿಕ್ಷಿಸಿ.

Karvali Development Board ma gafoor exclusive interview water metro plan CRZ Rules Change

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories