PUC Result : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಹೊರಬಿತ್ತು 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ, ರಿಸಲ್ಟ್ ನೋಡಲು ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.

PUC Result : ಬೆಂಗಳೂರು : ಕರ್ನಾಟಕ ದ್ವಿತೀಯ ಪಿಯುಸಿ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 7,10,363 ವಿದ್ಯಾರ್ಥಿಗಳ ಭವಿಷ್ಯ ಹೊರಬಿದ್ದಿದೆ.
ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆದಿದ್ದ ಈ ಪರೀಕ್ಷೆಯ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಈಗ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
Also Read : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ : ಇಂದು ಫಲಿತಾಂಶದೊಂದಿಗೆ ದೊರೆಯಲಿದೆ ಅಂಕಪಟ್ಟಿ
ಫಲಿತಾಂಶ ನೋಡುವುದು ಹೇಗೆ ? (How to Check Results)
ಸರ್ವರ್ ಸಮಸ್ಯೆಯಾಗದಂತೆ ತಡೆಯಲು ಮಂಡಳಿಯು ಹಲವು ಲಿಂಕ್‌ಗಳನ್ನು ನೀಡಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಫಲಿತಾಂಶ ಪಡೆಯಿರಿ:
- ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘2nd PUC Examination 1 Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
- ನಿಮ್ಮ ವಿಷಯಗಳನ್ನು (Science/Commerce/Arts) ಆಯ್ಕೆ ಮಾಡಿ ‘Submit’ ಬಟನ್ ಒತ್ತಿರಿ.
- ಪರದೆಯ ಮೇಲೆ ಫಲಿತಾಂಶ ಕಾಣಿಸುತ್ತದೆ, ಇದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
DigiLocker ಅಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ
ಈ ವರ್ಷದ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಿಂದ ಅತಿ ಹೆಚ್ಚು ಅಂದರೆ 2.92 ಲಕ್ಷ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಿಂದ 2.11 ಲಕ್ಷ ಮತ್ತು ಕಲಾ ವಿಭಾಗದಿಂದ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಮೊದಲ ಬಾರಿಗೆ ಡಿಜಿಲಾಕರ್ (DigiLocker) ಮೂಲಕವೂ ಅಂಕಪಟ್ಟಿಗಳನ್ನು ಲಭ್ಯವಾಗುವಂತೆ ಮಾಡಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಿದೆ.
Also Read : PUC Result 2026 : ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸುವ ಮುನ್ನ ಈ 3 ವಿಷಯ ತಿಳಿದಿರಲಿ; ಲಿಂಕ್ ಇಲ್ಲಿದೆ
SMS ಮೂಲಕವೂ ಸಿಗಲಿದೆ ರಿಸಲ್ಟ್
ಒಂದು ವೇಳೆ ವೆಬ್‌ಸೈಟ್ ಲೋಡ್ ಆಗದಿದ್ದರೆ, ವಿದ್ಯಾರ್ಥಿಗಳು ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಮೂಲಕವೂ ತಮ್ಮ ಅಂಕಗಳನ್ನು ಪಡೆಯಲಿದ್ದಾರೆ. ಸಂಜೆ 6:15ಕ್ಕೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಜಿಲ್ಲಾವಾರು ಪಾಸಿಂಗ್ ಶೇಕಡಾವಾರು ಮತ್ತು ಟಾಪರ್‌ಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
ಫಲಿತಾಂಶದಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು. ಒಂದು ವೇಳೆ ನಿರೀಕ್ಷಿತ ಅಂಕ ಬರದಿದ್ದರೆ ಅಥವಾ ಅನುತ್ತೀರ್ಣರಾಗಿದ್ದರೆ ಧೃತಿಗೆಡಬೇಡಿ, ಮಂಡಳಿಯು ಶೀಘ್ರದಲ್ಲೇ ದ್ವಿತೀಯ ಪರೀಕ್ಷೆಯ (Exam-2) ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
karnataka 2nd puc result 2026 announced Click here



