Gautam Gambhir : ಐರ್ಲೆಂಡ್ ಎದುರು ಸೋತ ಬೆನ್ನಲ್ಲೇ ಟೀಮ್ ಇಂಡಿಯಾಗೆ ಹೊಸ ಕೋಚ್? ಗಂಭೀರ್‌ಗೆ ಬಿಗ್ ಶಾಕ್ !

ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅದ್ರಲ್ಲೂ ಗೌತಮ್‌ ಗಂಭೀರ್‌ ಕೋಚ್‌ ಆಗಿದ್ದ ಅವಧಿಯಲ್ಲಿ ಭಾರತ ಕಂಡಿರುವ ಸೋಲುಗಳ ಲೆಕ್ಕಾಚಾರವನ್ನೂ ನಡೆಸಲಾಗುತ್ತಿದೆ.

ಕ್ರಿಕೆಟ್‌ ಶಿಶು ಐರ್ಲೆಂಡ್‌ ವಿರುದ್ದ ಭಾರತ ಕ್ರಿಕೆಟ್‌ ತಂಡದ ಸೋಲಿನ ಬೆನ್ನಲ್ಲೇ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅದ್ರಲ್ಲೂ ಗೌತಮ್‌ ಗಂಭೀರ್‌ ಕೋಚ್‌ ಆಗಿದ್ದ ಅವಧಿಯಲ್ಲಿ ಭಾರತ ಕಂಡಿರುವ ಸೋಲುಗಳ ಲೆಕ್ಕಾಚಾರವನ್ನೂ ನಡೆಸಲಾಗುತ್ತಿದೆ. ಐರ್ಲೆಂಡ್‌ ವಿರುದ್ದ ಸರಣಿಯ ಬೆನ್ನಲ್ಲೇ ಗೌತಮ್‌ ಗಂಭೀರ್‌ ತಲೆದಂಡವಾಗುತ್ತಾ ಅನ್ನೋ ಬಗ್ಗೆಯೂ ಚರ್ಚೆಯಾಗ್ತಿದೆ

ಶ್ರೀಲಂಕಾ, ನ್ಯೂಜಿಲೆಂಡ್ ಸರಣಿ ಸೋಲಿನ ಬೆನ್ನಲ್ಲೇ ಇದೀಗ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧವೂ ಟಿ20 ಕ್ರಿಕೆಟ್‌ ಸರಣಿಯನ್ನು ಸೋತಿರುವುದು ಕ್ರಿಕೆಟ್ ಪ್ರೇಮಿಗಳ ಕೆರಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, “ಕೋಚ್ ಸ್ಥಾನದಿಂದ ಗಂಭೀರ್ ಮುಕ್ತಿ ಎಂದು?” ಎಂಬ ಚರ್ಚೆಗಳು ಗಂಭೀರವಾಗಿ ಆರಂಭವಾಗಿವೆ.

ಅಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಗೆ ಸಿಕ್ಕಿತೇ ಶಿಕ್ಷೆ?

ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ್‌ ಅವರನ್ನು ಏಕೆ ದ್ವೇಷಿಸುತ್ತಿರಿ ? ಅನ್ನೋ ಪ್ರಶ್ನೆಗೆ ನೆಟ್ಟಿಗರು ಸೋಲು ಹಾಗೂ ಗೆಲುವಿನ ಲೆಕ್ಕಾಚಾರ ಅಂಕಿ ಅಂಶಗಳ ಸಮೇತವಾಗಿ ಉತ್ತರ ಕೊಡುತ್ತಿದ್ದಾರೆ. ಇದು ವೈಯಕ್ತಿಕವಾದ ದ್ವೇಷವಲ್ಲ, ಬದಲಾಗಿ ಕೋಚ್‌ ಆಗಿ ಗೌತಮ್‌ ಗಂಭೀರ ಅವರ ತಪ್ಪುಗಳನ್ನು ಎತ್ತಿ ಹೇಳಲಾಗುತ್ತಿದೆ. ತಂತ್ರಗಾರಿಕೆ, ಹಿರಿಯ ಆಟಗಾರರನ್ನು ನಡೆಸಿಕೊಳ್ತಾ ಇರುವ ಸರ್ವಾಧಿಕಾರಿ ಧೋರಣೆಯ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಟೀಮ್‌ ಇಂಡಿಯಾದ ಕೋಚ್‌ ಆದ ಬೆನ್ನಲ್ಲೇ ಗೌತಮ್‌ ಗಂಭೀರ್‌ ಅವರ ಅತಿರೇಕದ ಪ್ರಯೋಗ, ಅತಿಯಾದ ಆತ್ಮವಿಶ್ವಾಸ, ಬಲಿಷ್ಟ ಭಾರತ ಕ್ರಿಕೆಟ್‌ ತಂಡ ಇಂದು ಐರ್ಲೆಂಡ್‌ ವಿರುದ್ದ ಮಂಡಿಯೂರುವಂತೆ ಮಾಡಿದೆ ಅನ್ನೋ ಕ್ರಿಕೆಟ್‌ ವಿಶ್ಲೇಷಕರ ವಾದ.

ಕೋಚ್‌ ಗೌತಮ್ ಗಂಭೀರ್ ತಲೆದಂಡವಾಗುತ್ತಾ ?

ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಷ್ಟೇ ಅಲ್ಲಾ ಬಿಸಿಸಿಐ ವಲಯದಲ್ಲಿಯೂ ಬಾರೀ ಚರ್ಚೆಗಳು ನಡೆಯುತ್ತಿದೆ. ಸಾಲು ಸಾಲು ಸೋಲುಗಳ ಬೆನ್ನಲ್ಲೇ ಗೌತಮ್‌ ಗಂಭೀರ್‌ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗಿಸಲಾಗುತ್ತಾ, ಅವರ ಅಧಿಕಾರಾವಧಿಗೆ ಕತ್ತರಿ ಬೀಳುತ್ತಾ ಅನ್ನೋ ಮಾತುಗಳು ಕೇಳಿಬರ್ತಿದೆ.

ಬಿಸಿಸಿಐ ಮೂಲಗಳ ಪ್ರಕಾರ ಮುಂದಿನ ಸರಣಿಯಲ್ಲಿ ಗೌತಮ್‌ ಗಂಭೀರ್‌ ಅವರ ಕಾರ್ಯವೈಖರಿಯನ್ನು ಪರಿಶೀಲನೆಗೆ ಒಳಪಡಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರಂತೆ. ಗಂಭೀರ್‌ ಅವರು ಆಟಗಾರರಿಗೆ ನೀಡುವ ಕೋಚಿಂಗ್‌ ಶೈಲಿ ಬದಲಾಗದೇ ಇದ್ದಲ್ಲಿ, ಅವರ ತಲೆದಂಡ ಫಿಕ್ಸ್‌ ಅನ್ನುವ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿಬರ್ತಿದೆ.

ಕೋಚ್‌ ಗೌತಮ್‌ ಗಂಭೀರ್‌ ಅವಧಿಯ ದುರಂತ ಸೋಲುಗಳು

ಗೌತಮ್‌ ಗಂಭೀರ್‌ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಭಾರತ ಐತಿಹಾಸಿಕವಾಗಿ ಮುಖಭಂಗವನ್ನು ಎದುರಿಸುತ್ತಲೇ ಇದೆ. ಗೌತಮ್‌ ಕೋಚ್‌ ಆದ ನಂತರ ಭಾರತ ಸೋತಿರುವ ಸರಣಿಗಳು ಯಾವುವು ಎಂದು ನೋಡೋಣಾ

  1. 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು.
  2. 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲೇ ಟೆಸ್ಟ್ ಸರಣಿ ಮುಖಭಂಗ.
  3. 12 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಸೋಲು ಹಾಗೂ ಇತಿಹಾಸದಲ್ಲೇ ಮೊದಲ ಬಾರಿ ಹೋಮ್ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ (3-0)
  4. 47 ವರ್ಷಗಳ ನಂತರ ತವರು ನೆಲದಲ್ಲಿ ಸತತ 3 ಟೆಸ್ಟ್ ಪಂದ್ಯಗಳ ಸೋಲು
  5. ಗಾರ್ಡನ್ಸ್ (8 ವರ್ಷ) ಮೈದಾನಗಳಲ್ಲಿ ಐತಿಹಾಸಿಕ ಸೋಲು
  6. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲು (10 ವರ್ಷಗಳ ಬಳಿಕ) ಮತ್ತು ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ (WTC) ಫೈನಲ್ ತಲುಪಲು ಮೊದಲ ಬಾರಿ ವೈಫಲ್ಯ
  7. ಭಾರತದಲ್ಲಿ ಮೊದಲ ಬಾರಿ 50 ರನ್‌ಗಳ ಒಳಗೆ ಆಲೌಟ್ & ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತೀ ದೊಡ್ಡ ಸೋಲು (408 ರನ್)
  8. ಇತಿಹಾಸದಲ್ಲೇ ಮೊದಲ ಬಾರಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು, ಐತಿಹಾಸಿಕ ಮುಖಭಂಗ

Gautam Gambhir removed as team india coach after Ireland series loss kannada news

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »