Manipal: ಮಣಿಪಾಲದ ರಸ್ತೆಯಲ್ಲೇ ಯುವಜೋಡಿಯ ಅಸಭ್ಯ ವರ್ತನೆ; ಸಾರ್ವಜನಿಕರ ತರಾಟೆ
ಮಣಿಪಾಲದ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಯುವಕ ಮತ್ತು ಯುವತಿಯೊಬ್ಬರು ಸಾರ್ವಜನಿಕರ ಸಂಚಾರ ಇರುವಾಗಲೇ ಪ್ರಣಯ ಸಲ್ಲಾಪದಲ್ಲಿ ತೊಡಗಿದ್ದರು. ವಿದೇಶಗಳಲ್ಲಿ ಕಾಣಿಸಿಕೊಳ್ಳುವ ಪ್ರೇಮಿಗಳಂತೆ ಯಾವುದೇ ಮುಜುಗರವಿಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದ ಈ ಜೋಡಿಯನ್ನು ಕಂಡ ಸ್ಥಳೀಯರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಉಡುಪಿ : ವಿದ್ಯಾನಗರಿ ಎಂದೇ ಖ್ಯಾತಿಯಾಗಿರುವ ಉಡುಪಿಯ ಮಣಿಪಾಲ (Manipal ) ದಲ್ಲಿ ತಡರಾತ್ರಿ ಯುವಜೋಡಿಯೊಂದು ಸಾರ್ವಜನಿಕ ರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಣಿಪಾಲದ ಹೈಟೆಕ್ ವ್ಯವಸ್ಥೆ ಕಂಡು ವಿದೇಶದಂತೆ ಭಾವಿಸಿ ವರ್ತಿಸುತ್ತಿರುವ ಕೆಲವು ಯುವಕ-ಯುವತಿಯರ ಈ ‘ವಿಕೃತಿ’ ಈಗ ಕೃಷ್ಣನಗರಿಯ ಜನರನ್ನು ಕೆರಳಿಸಿದೆ.
ಮಣಿಪಾಲದ ರಸ್ತೆಯಲ್ಲೇ ನಡೆದಿದ್ದೇನು ?
ಮಣಿಪಾಲದ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಯುವಕ ಮತ್ತು ಯುವತಿಯೊಬ್ಬರು ಸಾರ್ವಜನಿಕರ ಸಂಚಾರ ಇರುವಾಗಲೇ ಪ್ರಣಯ ಸಲ್ಲಾಪದಲ್ಲಿ ತೊಡಗಿದ್ದರು. ವಿದೇಶಗಳಲ್ಲಿ ಕಾಣಿಸಿಕೊಳ್ಳುವ ಪ್ರೇಮಿಗಳಂತೆ ಯಾವುದೇ ಮುಜುಗರವಿಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದ ಈ ಜೋಡಿಯನ್ನು ಕಂಡ ಸ್ಥಳೀಯರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಸಂಚಾರವಿರುವ ರಸ್ತೆಯಲ್ಲಿ ಇಂತಹ ವರ್ತನೆ ಸರಿಯಲ್ಲ ಎಂದು ಬುದ್ಧಿ ಹೇಳಿದರೂ, ಜೋಡಿಯು ಅದನ್ನು ಲೆಕ್ಕಿಸದೆ ಹಾರಿಕೆ ಉತ್ತ ನೀಡಿದ್ದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ.
Also Read : ಉಡುಪಿ ಕರಾವಳಿಯಲ್ಲಿ ಮುಂಗಾರು ಪೂರ್ವ ಆತಂಕ: ಕಡಲ್ಕೊರೆತ, ಭೀಕರ ಸಿಡಿಲಿನ ಆರ್ಭಟಕ್ಕೆ ಸಿಗುತ್ತಾ ಮುಕ್ತಿ ?
ವಿದ್ಯಾನಗರಿಯ ಘನತೆಗೆ ಧಕ್ಕೆ ?
ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಮಣಿಪಾಲಕ್ಕೆ ಆಗಮಿಸುತ್ತಾರೆ. ಮಣಿಪಾಲವು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿ ಮತ್ತು ಹೈಟೆಕ್ ಸೌಲಭ್ಯಗಳಿಗೆ ಹೆಸರಾಗಿದೆ. ಆದರೆ, ಈ ಆಧುನಿಕತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವ ಕೆಲವು ಯುವಜನರು, ಸಾರ್ವಜನಿಕ ಸ್ಥಳಗಳಲ್ಲಿ ಸಂಸ್ಕೃತಿ ಮತ್ತು ಕನಿಷ್ಠ ಮರ್ಯಾದೆಯನ್ನು ಮರೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹೊಸ ವರ್ಷ ಅಥವಾ ವ್ಯಾಲೆಂಟೈನ್ಸ್ ಡೇ ಅಂತಹ ವಿಶೇಷ ದಿನಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗುತ್ತಿದ್ದವು. ಆದರೆ ಈಗ ಸಾಧಾರಣ ದಿನಗಳಲ್ಲೂ ತಡರಾತ್ರಿ ರಸ್ತೆಗಳಲ್ಲಿ ಇಂತಹ ಅಸಭ್ಯ ವರ್ತನೆಗಳು ಹೆಚ್ಚುತ್ತಿರುವುದು ಉಡುಪಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Also Read : ಉಡುಪಿ: ಲಂಡನ್ ಸುಂದರಿಯ ಹೆಸರಲ್ಲಿ ಭಾರಿ ವಂಚನೆ; ಕಾಸ್ಮೆಟಿಕ್ ಬಿಸಿನೆಸ್ ಆಸೆಗೆ ಬಿದ್ದ ಶೆಫ್ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ
ಸ್ಥಳೀಯರ ಆಗ್ರಹವೇನು ?
ಮಣಿಪಾಲಕ್ಕೆ ಓದಲು ಬರುವ ವಿದ್ಯಾರ್ಥಿಗಳು ಇಲ್ಲಿನ ಶಿಸ್ತು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಹೈಟೆಕ್ ವ್ಯವಸ್ಥೆ ಇದೆ ಎಂದಾಕ್ಷಣ ರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ಇಂತಹ ವರ್ತನೆಗಳಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ಕುಟುಂಬ ಸಮೇತ ಸಂಚರಿಸುವವರಿಗೆ ಮುಜುಗುರ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯು ರಾತ್ರಿ ಗಸ್ತನ್ನು ಚುರುಕುಗೊಳಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
manipal Udupi youth couple misbehaviour on public road local residents outrage kannada news



