Udupi: ಉಡುಪಿಯ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯನಿಗೆ ಗೂಂಡಾ ಕಾಯ್ದೆ

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಸುದೀರ್ಘ ವರದಿ ಮತ್ತು ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸಿದ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು, ಏಪ್ರಿಲ್ 24ರಂದು ಅಲ್ಫಾಜ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಅಧಿಕೃತ ಆದೇಶ ಹೊರಡಿಸಿದ್ದಾರೆ

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಸರಣಿ ಅಪರಾಧ ಕೃತ್ಯಗಳ ಮೂಲಕ ಜನರಲ್ಲಿ ಭಯ ಹುಟ್ಟಿಸಿದ್ದ ಕುಖ್ಯಾತ ‘ಗರುಡ ಗ್ಯಾಂಗ್’ (Garuda Gang) ಸದಸ್ಯನಿಗೆ ಉಡುಪಿ ಜಿಲ್ಲಾಡಳಿತ ಶಾಕ್ ನೀಡಿದೆ. ಬೈಂದೂರು ಮೂಲದ ರೌಡಿ ಶೀಟರ್ ಮಹಮ್ಮದ್ ಅಲ್ಫಾಜ್ (25) ಎಂಬಾತನ ವಿರುದ್ಧಗೂಂಡಾ ಕಾಯ್ದೆ(Goonda Act) ಜಾರಿಗೊಳಿಸಿ ಬಂಧಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಸುದೀರ್ಘ ವರದಿ ಮತ್ತು ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸಿದ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು, ಏಪ್ರಿಲ್ 24ರಂದು ಅಲ್ಫಾಜ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸಮಾಜದ ಶಾಂತಿ ಮತ್ತು ಸುಸ್ಥಿತಿಗೆ ಭಂಗ ತರುತ್ತಿದ್ದ ಈತನನ್ನು ಈಗ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಯಾರು ಈ ಮಹಮ್ಮದ್ ಅಲ್ಫಾಜ್ ?

ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ ಮೂಲದವನಾದ ಮಹಮ್ಮದ್ ಅಲ್ಫಾಜ್, ಪ್ರಸ್ತುತ ಕುಂದಾಪುರದ ಕಸಬಾ ಗ್ರಾಮದಲ್ಲಿ ವಾಸವಿದ್ದ. ಈತ ಕೇವಲ 25 ವರ್ಷ ವಯಸ್ಸಿನಲ್ಲೇ ಅತೀ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಿರಾತಕ. ಗರುಡ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿ ಜಿಲ್ಲೆಯಾದ್ಯಂತ ದೌರ್ಜನ್ಯ ಎಸಗುತ್ತಿದ್ದ ಆರೋಪ ಈತನ ಮೇಲಿದೆ.

ಇದನ್ನೂ ಓದಿ : Manipal: ಮಣಿಪಾಲದ ರಸ್ತೆಯಲ್ಲೇ ಯುವಜೋಡಿಯ ಅಸಭ್ಯ ವರ್ತನೆ; ಸಾರ್ವಜನಿಕರ ತರಾಟೆ

ಮಹಮ್ಮದ್ ಅಲ್ಫಾಜ್ ವಿರುದ್ದ ಎಲ್ಲೆಲ್ಲಿ ಕೇಸ್ ದಾಖಲಾಗಿದೆ?

ಅಲ್ಫಾಜ್ ವಿರುದ್ಧ ಉಡುಪಿ ಜಿಲ್ಲೆ ಮಾತ್ರವಲ್ಲದೆ ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಕರಣಗಳು ದಾಖಲಾಗಿವೆ:

  • ಉಡುಪಿ ಜಿಲ್ಲೆ: ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ ಮತ್ತು ಕುಂದಾಪುರ ನಗರ ಠಾಣೆಗಳು.
  • ಉತ್ತರ ಕನ್ನಡ: ಭಟ್ಕಳ ನಗರ ಪೊಲೀಸ್ ಠಾಣೆ.

ಇದನ್ನೂ ಓದಿ : ಕೋಟ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪತ್ತೆ – ಓರ್ವನ ಬಂಧನ

ಮಹಮ್ಮದ್ ಅಲ್ಫಾಜ್ ವಿರುದ್ದ 10ಕ್ಕೂ ಹೆಚ್ಚು ಗಂಭೀರ ಪ್ರಕರಣ

ಆರೋಪಿ ಮಹಮ್ಮದ್ ಅಲ್ಫಾಜ್ ವಿರುದ್ದ ಕೊಲೆಯತ್ನ, ದರೋಡೆ ಸಂಚು, ಮಾರಣಾಂತಿಕ ಹಲ್ಲೆ, ಅಕ್ರಮ ಕೂಟ ರಚನೆ, ಅಪಹರಣ ಮತ್ತು ಮಾದಕ ವಸ್ತು (Drugs) ಮಾರಾಟದಂತಹ ಬರೋಬ್ಬರಿ 10 ಗಂಭೀರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ಪ್ರಕರಣಗಳು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಒಂದು ಪ್ರಕರಣ ತನಿಖಾ ಹಂತದಲ್ಲಿದೆ. ಈತನ ನಿರಂತರ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರು ಈಗ ಗೂಂಡಾ ಕಾಯ್ದೆಯ ಅಸ್ತ್ರ ಪ್ರಯೋಗಿಸಿದ್ದಾರೆ.

garuda gang member mohammed alphaz arrested under goonda act Udupi crime news

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories