Mobile screen replacement : ನಿಮ್ಮ ಫೋನ್‌ನಲ್ಲಿ ಹಸಿರು ಗೆರೆ ಇದೆಯೇ? ಫ್ರೀಯಾಗಿ ಬದಲಾಯಿಸಲು ಬಂದಿದೆ ಹೊಸ ರೂಲ್ಸ್
ಸ್ಯಾಮ್‌ಸಂಗ್ (Samsung), ಒನ್‌ಪ್ಲಸ್ (OnePlus) ಅಥವಾ ವಿವೋ (Vivo) ಫೋನ್ ನಿಮ್ಮ ಕೈಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದ ಬೆನ್ನಲ್ಲೇ ಫೋನ್ ಸ್ಕ್ರೀನ್ ಮೇಲೆ 'ಹಸಿರು ಗೆರೆ' (Green Line Issue) ಕಾಣಿಸಿಕೊಳ್ಳುವ ಸಮಸ್ಯೆ ಕಾಳ್ಗಿಚ್ಚಿನಂತೆ ಹರಡುತ್ತಿದೆ.

Mobile screen replacement : ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಅದರಲ್ಲೂ ಮುಖ್ಯವಾಗಿ ಸ್ಯಾಮ್‌ಸಂಗ್ (Samsung), ಒನ್‌ಪ್ಲಸ್ (OnePlus) ಅಥವಾ ವಿವೋ (Vivo) ಫೋನ್ ನಿಮ್ಮ ಕೈಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದ ಬೆನ್ನಲ್ಲೇ ಫೋನ್ ಸ್ಕ್ರೀನ್ ಮೇಲೆ ‘ಹಸಿರು ಗೆರೆ’ (Green Line Issue) ಕಾಣಿಸಿಕೊಳ್ಳುವ ಸಮಸ್ಯೆ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಮೊದಮೊದಲು ಕೇವಲ ದುಬಾರಿ ಫೋನ್‌ಗಳಲ್ಲಿ ಕಾಣಿಸುತ್ತಿದ್ದ ಈ ತೊಂದರೆ ಈಗ ಅಗ್ಗದ ಬೆಲೆಯ ಫೋನ್‌ಗಳಿಗೂ ವ್ಯಾಪಿಸಿದೆ.
ಏನಿದು ಸ್ಮಾರ್ಟ್‌ಫೋನ್ ಗ್ರೀನ್ ಲೈನ್ ಸಂಕಷ್ಟ?
ಸ್ಮಾರ್ಟ್‌ಫೋನ್ ಅಪ್‌ಡೇಟ್ ಆದ ಕೆಲವು ಗಂಟೆಗಳಲ್ಲೇ ಮೊಬೈಲ್ ಡಿಸ್ಪ್ಲೇ ಮೇಲೆ ಮೇಲಿನಿಂದ ಕೆಳಕ್ಕೆ ಸಣ್ಣದೊಂದು ಹಸಿರು ಬಣ್ಣದ ಗೆರೆ ಮೂಡುತ್ತದೆ. ಆರಂಭದಲ್ಲಿ ಇದು ಸಾಮಾನ್ಯ ಎನಿಸಿದರೂ, ದಿನ ಕಳೆದಂತೆ ಸ್ಕ್ರೀನ್ ಪೂರ್ತಿ ಗೆರೆಗಳಿಂದ ತುಂಬಿ ಫೋನ್ ಬಳಸಲಾಗದ ಸ್ಥಿತಿಗೆ ತಲುಪುತ್ತಿದೆ. ಯಾವುದೇ ದೈಹಿಕ ಹಾನಿ (Physical Damage) ಇಲ್ಲದಿದ್ದರೂ ಬರುವ ಈ ಸಮಸ್ಯೆಗೆ ಡಿಸ್ಪ್ಲೇ ಬದಲಾವಣೆಯೇ ಏಕೈಕ ದಾರಿ. ಇದಕ್ಕೆ ಕನಿಷ್ಠ 8,000 ದಿಂದ 15,000 ರೂಪಾಯಿ ವೆಚ್ಚವಾಗುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
Also Read : DSLR ಕ್ಯಾಮೆರಾಗಳಿಗೂ ನಡುಕ ಹುಟ್ಟಿಸಿದ Oppo Find X9 Ultra
ಕಂಪನಿಗಳಿಂದ ಬಿಗ್ ರಿಲೀಫ್: ಉಚಿತ ಡಿಸ್ಪ್ಲೇ ಬದಲಾವಣೆಗೆ ಅವಕಾಶ
ಗ್ರಾಹಕರ ಆಕ್ರೋಶಕ್ಕೆ ಮಣಿದಿರುವ ಪ್ರಮುಖ ಕಂಪನಿಗಳು ಈಗ ಕೆಲವು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಉಚಿತವಾಗಿ ಡಿಸ್ಪ್ಲೇ ಬದಲಾಯಿಸಿಕೊಡಲು (Free Display Replacement) ಮುಂದಾಗಿವೆ.
ಸ್ಯಾಮ್‌ಸಂಗ್ (Samsung): ಸ್ಯಾಮ್‌ಸಂಗ್ ಇಂಡಿಯಾ ತನ್ನ ಆಯ್ದ ಮಾಡೆಲ್‌ಗಳಾದ S21 ಸರಣಿ, S21 FE ಮತ್ತು S22 ಅಲ್ಟ್ರಾ ಫೋನ್‌ಗಳಿಗೆ ಉಚಿತ ಸ್ಕ್ರೀನ್ ಬದಲಾವಣೆ ಅವಧಿಯನ್ನು ಸೆಪ್ಟೆಂಬರ್ 2025ರವರೆಗೆ ವಿಸ್ತರಿಸಿದೆ. ಅಲ್ಲದೆ ಕೆಲವು ಮಾಡೆಲ್‌ಗಳಿಗೆ 2026ರ ಏಪ್ರಿಲ್ ವರೆಗೂ ಈ ಸೌಲಭ್ಯ ಸಿಗುವ ಸಾಧ್ಯತೆ ಇದೆ.
ಒನ್‌ಪ್ಲಸ್ (OnePlus): ಒನ್‌ಪ್ಲಸ್ ಕಂಪನಿಯು ತನ್ನ ಬಳಕೆದಾರರಿಗೆ ‘ಜೀವಿತಾವಧಿ ಡಿಸ್ಪ್ಲೇ ವಾರಂಟಿ’ (Lifetime Display Warranty) ಘೋಷಿಸಿದೆ. OnePlus 8, 9 ಮತ್ತು 11 ಸರಣಿಯ ಫೋನ್‌ಗಳಲ್ಲಿ ಗ್ರೀನ್ ಲೈನ್ ಬಂದರೆ ಯಾವುದೇ ಶುಲ್ಕವಿಲ್ಲದೆ ಸರ್ವಿಸ್ ಸೆಂಟರ್‌ನಲ್ಲಿ ಸರಿಪಡಿಸಿಕೊಳ್ಳಬಹುದು.
ವಿವೋ (Vivo): ವಿವೋ ಕೂಡ ತನ್ನ X ಸರಣಿಯ ದುಬಾರಿ ಫೋನ್‌ಗಳಿಗೆ ವಾರಂಟಿ ಮುಗಿದಿದ್ದರೂ ವಿಶೇಷ ರಿಯಾಯಿತಿ ಅಥವಾ ಉಚಿತ ರಿಪೇರಿ ನೀಡುತ್ತಿದೆ.
Also Read : 10 ಸಾವಿರ ರೂಪಾಯಿ ಒಳಗೆ ಖರೀದಿಗೆ ಯಾವ ಸ್ಮಾರ್ಟ್‌ಪೋನ್ ಬೆಸ್ಟ್ : Poco, Samsung, Moto ಬಿಗ್ ಫೈಟ್
ಫ್ರೀ ಸರ್ವಿಸ್ ಪಡೆಯಲು ನೀವು ಪಾಲಿಸಬೇಕಾದ ನಿಯಮಗಳು
- ಉಚಿತವಾಗಿ ಡಿಸ್ಪ್ಲೇ ಬದಲಿಸಿಕೊಳ್ಳಲು ಕಂಪನಿಗಳು ಕೆಲವು ಕಂಡಿಷನ್ ಹಾಕುತ್ತಿವೆ:
- ಸ್ಕ್ರೀನ್ ಒಡೆದಿರಬಾರದು: ಫೋನ್ ಮೇಲೆ ಯಾವುದೇ ರೀತಿಯ ಡೆಂಟ್ ಅಥವಾ ಗೀರುಗಳು (Physical Damage) ಇರಬಾರದು.
- ವಾಟರ್ ಡ್ಯಾಮೇಜ್ ಇರಬಾರದು: ಫೋನ್ ನೀರಿನಲ್ಲಿ ಬಿದ್ದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.
- ಅಧಿಕೃತ ಸರ್ವಿಸ್ ಸೆಂಟರ್: ಮೊದಲು ಬೇರೆಲ್ಲೂ ಲೋಕಲ್ ಶಾಪ್‌ಗಳಲ್ಲಿ ಫೋನ್ ರಿಪೇರಿ ಮಾಡಿಸಿರಬಾರದು.
- ಬಿಲ್ ಇರಲಿ: ಫೋನ್ ಖರೀದಿಸಿದ ಅಸಲಿ ಬಿಲ್ ಇರುವುದು ಕಡ್ಡಾಯ.
ಸ್ಮಾರ್ಟ್‌ಫೋನ್ ಬಳಕೆದಾರರೇನು ಮಾಡಬೇಕು ?
ಒಂದು ವೇಳೆ ನಿಮ್ಮ ಫೋನ್ ಅಪ್‌ಡೇಟ್ ಮಾಡಿದ ನಂತರ ಇಂತಹ ಸಮಸ್ಯೆ ಕಂಡುಬಂದರೆ, ತಕ್ಷಣವೇ ಮೊಬೈಲ್ ಕಂಪನಿಯ ಅಧಿಕೃತ ಸರ್ವಿಸ್ ಸೆಂಟರ್‌ಗೆ ಭೇಟಿ ನೀಡಿ. ಸದ್ಯಕ್ಕೆ ಈ ಆಫರ್‌ಗಳು ಸೀಮಿತ ಅವಧಿಯವರೆಗೆ ಮಾತ್ರ ಇರುವುದರಿಂದ ತಡ ಮಾಡಬೇಡಿ. ಫೋನ್ ಅಪ್‌ಡೇಟ್ ಮಾಡುವ ಮುನ್ನ ಬ್ಯಾಕ್-ಅಪ್ ಇಟ್ಟುಕೊಳ್ಳುವುದು ಮತ್ತು ಫೋನ್ ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳುವುದು ಒಳಿತು.
Samsung oneplus vivo free mobile screen replacement kannada News


