10 ಲಕ್ಷಕ್ಕೆ ನೀಟ್ ಪೇಪರ್ ಖರೀದಿ: ಮಗನಿಗೆ ಬಂದದ್ದು ಕೇವಲ 107 ಅಂಕ – ತಂದೆ ಜೈಲು ಪಾಲು, ಪುತ್ರ ಎಸ್ಕೇಪ್..!
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಅತ್ಯಂತ ಆಳದಿಂದ ತನಿಖೆ ನಡೆಸುತ್ತಿದೆ. ಸಿಬಿಐ ತನಿಖಾ ಅಸ್ತ್ರಕ್ಕೆ ಹಗರಣದಲ್ಲಿ ಭಾಗಿಯಾದ ಒಬ್ಬೊಬ್ಬರದ್ದೇ ಮುಖವಾಡ ಹೊರಬರುತ್ತಿದೆ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಅತ್ಯಂತ ಆಳದಿಂದ ತನಿಖೆ ನಡೆಸುತ್ತಿದೆ. ಸಿಬಿಐ ತನಿಖಾ ಅಸ್ತ್ರಕ್ಕೆ ಹಗರಣದಲ್ಲಿ ಭಾಗಿಯಾದ ಒಬ್ಬೊಬ್ಬರದ್ದೇ ಮುಖವಾಡ ಹೊರಬರುತ್ತಿದೆ.
ಈ ಎಲ್ಲದರ ನಡುವೆ ಸಿಬಿಐ ತನಿಖೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಯೂ ಸಹ ಆರೋಪಿ ನೀಟ್ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿರುವ ದಿನೇಶ್ ಬಿವಾಲ್, ಮಂಗಿಲಾಲ್ ಬಿವಾಲ್ ಹಾಗೂ ಹಿರಿಯ ಪುತ್ರ ವಿಕಾಸ್ ಬಿವಾಲ್ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿ ತರಬೇತಿ ಕೇಂದ್ರಗಳಿಗೆ ವಿತರಣೆ ಮಾಡಿದ್ದರಂತೆ. ಆರೋಪಿ ದಿನೇಶ್ ಬಿವಾಲ್ ಪುತ್ರ ಈ ಬಾರಿ ನೀಟ್ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದ , ಈತನಿಗಾಗಿಯೇ ದಿನೇಶ್ ಬಿವಾಲ್ 10 ಲಕ್ಷ ರೂಪಾಯಿಗಳನ್ನು ನೀಡಿ ನೀಟ್ ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದರು ಎನ್ನಲಾಗಿದೆ.
ಆದರೆ ದುರಂತ ಏನಂದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಯೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ದಿನೇಶ್ ಬಿವಾಲ್ ಪುತ್ರ ರಿಷಿ ಬಿವಾಲ್ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ ಕೇವಲ 107 ಅಂಕಗಳನ್ನು ಗಳಿಸಲು ಮಾತ್ರ ಯಶಸ್ವಿಯಾಗಿದ್ದಾನೆ . 10 ಲಕ್ಷ ರೂಪಾಯಿ ಕೊಟ್ಟು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೂ ಸಹ ರಿಷಿ ಗ್ರೇಸ್ ಮಾರ್ಕ್ ಪಡೆಯುವಲ್ಲಿ ಸೋತಿದ್ದಾನೆ.
Also Read: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದುರಂತ: ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ
ಶೈಕ್ಷಣಿಕ ಜೀವನದಲ್ಲಿ ಕಳಪೆ ಪ್ರದರ್ಶನವನ್ನೇ ತೋರುತ್ತಿದ್ದ ರಿಷಿ 10ನೇ ತರಗತಿಯಲ್ಲಿ 44 ಪರ್ಸೆಂಟ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕೇವಲ 50.88 ಪರ್ಸೆಂಟ್ ಫಲಿತಾಂಶ ದಾಖಲಿಸಲಷ್ಟೇ ಯಶಸ್ವಿಯಾಗಿದ್ದ. ಇಂತಾ ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂದು ಹೊರಟ್ಟಿದ್ದ ತಂದೆ ನೀಟ್ ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದರು ಎನ್ನುವುದು ತನಿಖೆ ವೇಳೆ ಬಟಾಬಯಲಾಗಿದೆ .
Buy NEET paper for 10 lakhs son got only 107 marks-father jail share son escape



