ರಜತ ಪ್ರಿಯರಿಗೆ ಕೇಂದ್ರದ ಶಾಕ್: ಬೆಳ್ಳಿ ಬಾರ್ ಆಮದಿಗೆ ನಿರ್ಬಂಧ – 99.9% ಶುದ್ಧ ಸಿಲ್ವರ್‌ಗೆ ಲೈಸೆನ್ಸ್ ಕಡ್ಡಾಯ!
ದೇಶದಲ್ಲಿ ಬೆಳ್ಳಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರಜತ ಪ್ರಿಯರಿಗೆ ಬಿಗ್ಶಾಕ್ ನೀಡಿದೆ. ಬೆಳ್ಳಿ ಬಾರ್ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧ ಈವರೆಗೆ ಇರಲಿಲ್ಲ. ಆದರೆ ಹೊಸ ನಿಯಮಾವಳಿಯ ಪ್ರಕಾರ, ಇನ್ಮುಂದೆ 99.9% ಶುದ್ಧತೆಯ ಸಿಲ್ವರ್ ಬಾರ್ಗಳನ್ನು ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯದಿಂದ ವಿಶೇಷ ಪರವಾನಿಗೆ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ದೇಶದಲ್ಲಿ ಬೆಳ್ಳಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರಜತ ಪ್ರಿಯರಿಗೆ ಬಿಗ್ಶಾಕ್ ನೀಡಿದೆ. ಬೆಳ್ಳಿ ಬಾರ್ ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧ ಈವರೆಗೆ ಇರಲಿಲ್ಲ. ಆದರೆ ಹೊಸ ನಿಯಮಾವಳಿಯ ಪ್ರಕಾರ, ಇನ್ಮುಂದೆ 99.9% ಶುದ್ಧತೆಯ ಸಿಲ್ವರ್ ಬಾರ್ ಗಳನ್ನು ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯದಿಂದ ವಿಶೇಷ ಪರವಾನಿಗೆ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷ ಹಾಗೂ ಭೌಗೋಳಿಕ ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಳ್ಳಿ ಬಾರ್ ಗಳ ಮೇಲೆ ಈ ರೀತಿಯ ನಿಯಮಾವಳಿ ರೂಪಿಸಿದೆ. ಆಮದು ಅವಲಂಬನೆ ಕಡಿಮೆಯಾದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸಬಹುದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ನೂತನ ನಿಯಮ ಹೊರಡಿಸಿದ್ದು, 99.9 ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಶುದ್ಧ ಬೆಳ್ಳಿಯ ಬಾರ್ ಗಳ ಆಮದು ನೀತಿಯನ್ನು ಈವರೆಗೆ ಇದ್ದ ಮುಕ್ತ ವರ್ಗದಿಂದ ನಿರ್ಬಂಧಿತ ವರ್ಗಕ್ಕೆ ಪರಿಷ್ಕರಿಸಿದೆ. ಹೀಗಾಗಿ ಬೆಳ್ಳಿ ಆಮದಿಗೆ ಇನ್ಮುಂದೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ.
Also Read: 10 ಲಕ್ಷಕ್ಕೆ ನೀಟ್ ಪೇಪರ್ ಖರೀದಿ: ಮಗನಿಗೆ ಬಂದದ್ದು ಕೇವಲ 107 ಅಂಕ – ತಂದೆ ಜೈಲು ಪಾಲು, ಪುತ್ರ ಎಸ್ಕೇಪ್..!
ಆದರೆ ಈಗಾಗಲೇ ಬೆಳ್ಳಿ ಗಟ್ಟಿಗಳ ಬೆಲೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ಇದೀಗ ವಿದೇಶದಿಂದ ಬೆಳ್ಳಿ ಆಮದಿಗೂ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದರಿಂದ ಭವಿಷ್ಯದಲ್ಲಿ ಬೆಳ್ಳಿಯ ದರದಲ್ಲಿ ಮತ್ತಷ್ಟು ಏರಿಕೆ ಕಂಡು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.
Centers shock to silver lovers Ban on import of silver bars – License mandatory for 99 percent pure silver



