ಈ ಸಲವೂ ಕಪ್​ ನಮ್ಮದೇ: ಸೆಹ್ವಾಗ್ ಭವಿಷ್ಯವಾಣಿ ಕೇಳಿ ಫ್ಯಾನ್ಸ್ ಫುಲ್ ಖುಷ್!

ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಈ ಬಾರಿಯೂ ತನ್ನ ವಿಜಯಯಾತ್ರೆ ಮುಂದುವರಿಸಿದೆ.

ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್​ ಚಾಂಪಿಯನ್​ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಈ ಬಾರಿಯೂ ತನ್ನ ವಿಜಯಯಾತ್ರೆ ಮುಂದುವರಿಸಿದೆ. ಈ ಭಾರಿಯ ಐಪಿಎಲ್​ ಸೀಸನ್​ನಲ್ಲಿ ಪ್ಲೇ ಆಫ್​ ಹಂತಕ್ಕೆ ಅಧಿಕೃತ ಎಂಟ್ರಿ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆ ಕೂಡ ಆರ್​ಸಿಬಿಯದ್ದಾಗಿದೆ. ಈ ಎಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೇಟಿಗ ವಿರೇಂದ್ರ ಸೆಹ್ವಾಗ್​ ಭರ್ಜರಿ ಭವಿಷ್ಯವೊಂದನ್ನು ನುಡಿದಿದ್ದು ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಇದನ್ನೂ ಓದಿ : ಮೇ 21ರವರೆಗೂ ಮಳೆ ಅಬ್ಬರ: ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಹೌದು..! ಕ್ರಿಕ್​ಬಝ್​ ಶೋನಲ್ಲಿ ಭಾಗವಹಿಸಿದ ವಿರೇಂದ್ರ ಸೆಹ್ವಾಗ್​ ಈ ಬಾರಿಯೂ ಆರ್​ಸಿಬಿ ಕಪ್​ ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಯಾವುದೇ ಒಂದು ಚಾಂಪಿಯನ್ ತಂಡವು ಅಗ್ರ ಎರಡು ಸ್ಥಾನಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕು. ಆರ್‌ಸಿಬಿ ಪ್ರಸ್ತುತ ಆಡುತ್ತಿರುವ ಶೈಲಿಯನ್ನು ನೋಡಿದರೆ, ಈ ವರ್ಷವೂ ಅವರೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಲಿದ್ದಾರೆ ಎಂದು ಸ್ಪಷ್ಟವಾಗಿ ತೋರುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ ಪ್ರಸಕ್ತ ಸೀಸನ್​ನಲ್ಲಿ ಆರ್​ಸಿಬಿಗೆ ಕಠಿಣ ಸ್ಪರ್ಧೆ ನೀಡಬಲ್ಲ ಯಾವುದಾದರೂ ತಂಡವಿದ್ದರೆ ಅದು ಗುಜರಾತ್​ ಟೈಟನ್ಸ್​ ಮಾತ್ರ ಎಂದಿದ್ದಾರೆ .ಹೀಗಾಗಿ ಒಂದು ವೇಳೆ ಪ್ಲೇ ಆಫ್​ನ ಟಾಪ್​ 2 ಸ್ಥಾನದಲ್ಲಿ ಗುಜರಾತ್ ಟೈಟನ್​ಗೂ ಸ್ಥಾನ ದೊರಕಿದರೆ ಆಗ ಆರ್​ಸಿಬಿ ಗೆಲುವಿನ ಹಾದಿ ಕೊಂಚ ಕಠಿಣವಾಗಲಿದೆ. ಈ ಎರಡೂ ತಂಡಗಳ ನಡುವೆ ಈ ಬಾರಿ ಚಾಂಪಿಯನ್​ ಟ್ರೋಫಿಗೆ ಭರ್ಜರಿ ಪೈಪೋಟಿ ನಡೆಯುತ್ತಿದೆ.

ಎರಡೂ ತಂಡಗಳ ಬೌಲಿಂಗ್​ ಹಾಗೂ ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಆರ್​ಸಿಬಿಗೆ ಸವಾಲು ಎಸಗಬಲ್ಲ ಏಕೈಕ ತಂಡವೆಂದರೆ ಅದು ಗುಜರಾತ್​ ಟೈಟನ್ಸ್​ ಮಾತ್ರ ಎಂದಿದ್ದಾರೆ. ಆರ್​ಸಿಬಿ ತಂಡವು ಟೂರ್ನಿಯಲ್ಲಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 9 ಜಯ ಹಾಗೂ 4 ಸೋಲುಗಳೊಂದಿಗೆ ಒಟ್ಟು 18 ಅಂಕಗಳನ್ನು ಕಲೆಹಾಕಿರುವ ಆರ್​ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories