ಭಾರತಕ್ಕೆ ಬಂದ ಮೊಟೊರೊಲಾದ 2 ಪವರ್‌ಫುಲ್‌ 5ಜಿ ಫೋನ್‌ಗಳು! ಬೆಲೆ ಕೇಳಿದ್ರೆ ಇಷ್ಟೇನಾ ಅನ್ನೋದು ಗ್ಯಾರಂಟಿ!

ಮೊಟೊರೊಲಾ ಇಂದು ಭಾರತದಲ್ಲಿ ಮೋಟೋ G37 ಮತ್ತು ಮೋಟೋ G37 ಪವರ್ 5G ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಮೊಬೈಲ್‌ ಜಗತ್ತಿನಲ್ಲಿ ಮೊಟೊರೊಲಾ ತನ್ನನ್ನು ವಿಶೇಷ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೈಗೆಟಕುವ ದರದ ಫೋನ್‌ಗಳ ಸಾಲಿನಲ್ಲಿ ಸೇರಿರುವ ಮೊಟೊರೊಲಾ ಇದೀಗ ತನ್ನ ಮತ್ತೆರಡು ಅಗ್ಗದ ಬೆಲೆಯ ಫೋನ್‌ಗಳನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಮೋಟೋ G37 ಮತ್ತು ಮೋಟೋ G37 ಪವರ್ ಎಂಬ ಎರಡು ಫೋನ್‌ ಇಂದು ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ. ಕಂಪನಿಯು ಈ ಎರಡು ಜಿ-ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ದೃಢಪಡಿಸಿದೆ. ಇದೇ ವೇಳೆ ಫ್ಲಿಪ್‌ಕಾರ್ಟ್ ವಿಶೇಷ ಮೈಕ್ರೋಸೈಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಅವುಗಳ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಎರಡೂ ಸಾಧನಗಳು ಜಾಗತಿಕ ರೂಪಾಂತರಗಳಿಗಿಂತ ಅಪ್‌ಗ್ರೇಡ್ ಆಗಿ ಬರಲಿದೆ ಎಂದು ಕಂಪನಿ ದೃಢಪಡಿಸಿದೆ. ಇಂದು ಬಿಡುಗಡೆಯಾಗುತ್ತಿರುವ ಎರಡು ಮೊಬೈಲ್‌ಗಳ ವೈಶಿಷ್ಟ್ಯ ಮತ್ತು ಬೆಲೆಗಳ ಬಗ್ಗೆ ತಿಳಿಯೋಣ.

ಮೋಟೋ G37 ಮತ್ತು ಮೋಟೋ G37 ಪವರ್ ವೈಶಿಷ್ಟ್ಯ

ಮೊಟೊರೊಲಾದ ಮೋಟೋ G37 ಮತ್ತು ಮೋಟೋ G37 ಪವರ್ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್‌ ಡೈಮೆನ್ಸಿಟಿ 6400 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಇದು ಡೈಮೆನ್ಸಿಟಿ 6300 ಚಿಪ್‌ಸೆಟ್ ಒಳಗೊಂಡಿರುವ ಜಾಗತಿಕ ಆವೃತ್ತಿಗಿಂತ ಭಿನ್ನವಾಗಿರಲಿದೆ. ಈ ಎರಡೂ ಫೋನ್‌ ಆಂಡ್ರಾಯ್ಡ್‌ 16 ನಲ್ಲಿ ಕಾರ್ಯ ನಿರ್ವಹಿಸುತ್ತವೆ. ಇನ್ನು ಈ ಮೊಬೈಲ್‌ನ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ ಈ ಎರಡೂ ಸಾಧನವು 6.67-ಇಂಚಿನ HD+ LCD ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಫೋನ್ 12GB ವರೆಗೆ RAM ಅನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Royal Pop Watch Launch : ‘ರಾಯಲ್ ಪಾಪ್’ ವಾಚ್‌ ಬಿಡುಗಡೆ ವೇಳೆ ನೂಕು ನುಗ್ಗಲು : ಬೆಂಗಳೂರಲ್ಲೂ ಬಾರೀ ಡಿಮ್ಯಾಂಡ್‌

ಕ್ಯಾಮೆರಾ ಹೇಗಿದೆ?

ಕ್ಯಾಮೆರಾದ ವಿಷಯದಲ್ಲಿ, ಮೋಟೋ G37 ಸರಣಿಯು ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಕ್ಯಾಮೆರಾವನ್ನು ಹೊಂದಿರಲಿದೆ. ಈ ಫೋನ್ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೊವನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಫೋನ್ MIL-STD-810H ಬಾಳಿಕೆಯನ್ನು ಸಹ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮೋಟೋ G37 ಪವರ್‌ 30W ವೈಡ್‌ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 7,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಒಂದೇ ಚಾರ್ಜ್‌ನಲ್ಲಿ ಮೂರು ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ಮೋಟೋ G37 ಸಹ 5,200mAh ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ.

ಬೆಲೆ ಇಷ್ಟು?

ಇಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಮೋಟೋ G37 ಮತ್ತು ಮೋಟೋ G37 ಪವರ್ ಸ್ಮಾರ್ಟ್‌ಪೋನ್ ಬೆಲೆ 20,000 ರೂ. ಗಿಂತ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಎರಡೂ ಸಾಧನಗಳು ಬಿಡುಗಡೆಯಾದ ನಂತರ ಫ್ಲಿಪ್‌ಕಾರ್ಟ್, ಮೊಟೊರೊಲಾ ಚಾನೆಲ್‌ಗಳು ಮತ್ತು ದೇಶಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories