ಐಟಿಐ ಉತ್ತೀರ್ಣರಾದವರಿಗೆ ಸರ್ಕಾರಿ ನೌಕರಿ : CSIR-CIMFR ನಲ್ಲಿ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳಿಗೆ ಅರ್ಜಿ ಹಾಕಿ
ಸಿಎಸ್ಐಆರ್–ಸಿಐಎಮ್ಎಫ್ಆರ್ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಜೂನ್ 19 ಕೊನೆಯ ದಿನವಾಗಿದೆ.
ಭಾರತದಲ್ಲಿ ವೈಜ್ಞಾನಿಕ, ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಇರುವ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾದ ಸಿಎಸ್ಐಆರ್–ಸಿಐಎಮ್ಎಫ್ಆರ್ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನೇಮಕಾತಿ ಪ್ರಕಟಣೆಯ ಪ್ರಕಾರ ಸಿಎಸ್ಐಆರ್–ಸಿಐಎಮ್ಎಫ್ಆರ್ ವಿವಿಧ ಟೆಕ್ನಿಷಿಯನ್ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಸಲಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 20 ರಿಂದ ಪ್ರಾರಂಭವಾಗಿದ್ದು ಜೂನ್ 19 ಕೊನೆಯ ದಿನವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸಿಎಸ್ಐಆರ್–ಸಿಐಎಮ್ಎಫ್ಆರ್ ನ ಅಧಿಕೃತ ವೆಬ್ಸೈಟ್ cimfr.res.in/vacancies ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳೇನು ಎಂಬುದನ್ನು ತಿಳಿದುಕೊಳ್ಳಿ.
ಶೈಕ್ಷಣಿಕ ಅರ್ಹತೆ
CSIR-CIMFR ನ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಎಸ್ಎಲ್ಸಿ ಅಥವಾ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು ಜೂನ್ 19, 2026 ಕ್ಕೆ ಲೆಕ್ಕಹಾಕಿ 18 ವರ್ಷಗಳಾಗಿರಬೇಕು ಹಾಗೂ ಗರಿಷ್ಠ ವಯಸ್ಸು 28 ವರ್ಷಗಳಿಗಿಂತ ಹೆಚ್ಚಿರಬಾರದು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ವೇತನ
ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು 7ನೇ ಪೇ ಪ್ರಕಾರ ತಿಂಗಳಿಗೆ ₹19,900 ರಿಂದ ₹63,200 ಗಳವರೆಗೆ ಪಡೆಯುತ್ತಾರೆ.
ಇದನ್ನೂ ಓದಿ: ಪದವೀಧರರಿಗೊಂದು ಸುವರ್ಣಾವಕಾಶ ! ಎಸ್ಬಿಐನ 7150 ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ
ಟೆಕ್ನಿಷಿಯನ್ ಗ್ರೇಡ್ 2 ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕಾಗುತ್ತದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ₹500 ಶುಲ್ಕವನ್ನು ಪಾವತಿಸಿದರೆ, ಎಸ್ಸಿ, ಎಸ್ಟಿ ಮತ್ತು ಪಿಎಚ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಫಾರ್ಮ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಭರ್ತಿ ಮಾಡಬಹುದು.
ಆಯ್ಕೆ ವಿಧಾನ
ಈ ನೇಮಕಾತಿಯಲ್ಲಿ ಮೊದಲಿಗೆ ಟ್ರೇಡ್ ಟೆಸ್ಟ್ ನಡೆಸಲಾಗುತ್ತದೆ. ಇದರಲ್ಲಿ ಪಾಸಾದಲ್ಲಿ ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೇಲೆ ಮೆರಿಟ್ ಲಿಸ್ಟ್ ಪ್ರಕಟಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಮೊದಲು ಮಾಡಬೇಕಾದ ಕೆಲಸ ಸಿಎಸ್ಐಆರ್–ಸಿಐಎಮ್ಎಫ್ಆರ್ ನ ಅಧಿಕೃತ ವೆಬ್ಸೈಟ್ cimfr.res.in/vacancies ಗೆ ಭೇಟಿ ನೀಡಬೇಕು. ಅಲ್ಲಿ ಸಂಬಂಧಿತ ಅಧಿಸೂಚನೆಯ ಮೇಲೆ ಕ್ಲಿಕ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಬಳಿಕ ಅರ್ಜಿ ಶುಲ್ಕ ಪಾವತಿಸಿ ಇನ್ನೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ಔಟ್ ತೆಗದುಕೊಳ್ಳಬೇಕು.



