ಯುಪಿಎಸ್‌ಸಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ 2 ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ : ದೇಶಸೇವೆ ಮಾಡಲು ಸುವರ್ಣಾವಕಾಶ
ಯುಪಿಎಸ್‌ಸಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ 2 (UPSC CDS 2) ಪರೀಕ್ಷೆಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ದೇಶ ಸೇವೆಯ ಕನಸು ಕಾಣುವ ಯುವಕರಿಗೆ ಸುವರ್ಣಾವಕಾಶ. ಯುಪಿಎಸ್‌ಸಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ 2 (CDS) 2026 ಎಕ್ಸಾಮಿನೇಷನ್ ಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಯುಪಿಎಸ್‌ಸಿ ಸಕ್ರೀಯಗೊಳಿಸಿರುವ ವೈಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಿಡಿಎಸ್ 2 ಪರೀಕ್ಷೆಯು ರಕ್ಷಣಾ ಸೇವೆಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಪಾಲ್ಗೊಳ್ಳಲೇಬೇಕಾದ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ಅಭ್ಯರ್ಥಿಗಳಿಗೆ ಭಾರತೀಯ ಮಿಲಿಟರಿ ಅಕಾಡೆಮಿ (IMA), ಭಾರತೀಯ ನೌಕಾ ಅಕಾಡೆಮಿ (INA), ಅಧಿಕಾರಿ ತರಬೇತಿ ಅಕಾಡೆಮಿ (OTA), ಮತ್ತು ವಾಯುಪಡೆ ಅಕಾಡೆಮಿ (AFA) ನಂತಹ ರಕ್ಷಣಾ ಅಕಾಡೆಮಿಗಳಿಗೆ ಸೇರಲು ಇರುವ ಅವಕಾಶದ ಬಾಗಿಲು ಆಗಿದೆ. ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಬಹುದಾಗಿದೆ.
ಏನಿದು ಸಿಡಿಎಸ್ 2 ಪರೀಕ್ಷೆ
ಸಶಸ್ತ್ರ ಪಡೆಗಳ ಕೆಡೆಟ್‌ಗಳನ್ನು ಸೇನೆಗೆ ನೇಮಿಸಿಕೊಳ್ಳಲು ದೇಶಾದ್ಯಂತ ವಾರ್ಷಿಕವಾಗಿ ನಡೆಸುವ ಪರೀಕ್ಷೆಯಾಗಿದೆ. ಇದರಲ್ಲಿ ಅಭ್ಯರ್ಥಿಗಳು ತಮ್ಮ ಇಷ್ಟದ ಆಯೋಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 20, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 09, 2026
ಪರೀಕ್ಷಾ ದಿನಾಂಕ: ಸೆಪ್ಟೆಂಬರ್ 13, 2026
ಅರ್ಜಿ ಸಲ್ಲಿಕೆ : ಆನ್‌ಲೈನ್ ಮೂಲಕ
ಅಧಿಕೃತ ವೆಬ್‌ಸೈಟ್ : upsc.gov.in
ಪರೀಕ್ಷಾ ವಿಧಾನ : ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ಎಸ್‌ಎಸ್‌ಬಿ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ.
ಇದನ್ನೂ ಓದಿ: ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಟಂಟಿಸ್‌ಶಿಪ್ ನೇಮಕಾತಿ ಪ್ರಕಟ : ITI, SSLC ಆದವರು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಿ
ವಯೋಮಿತಿ
CDS 2 2026 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿವಿಧ ಸಂಸ್ಥೆಗಳು ನಿಗದಿಪಡಿಸಿದ ವಯಸ್ಸಿನ ಮಿತಿಯೊಳಗೆ ಇರಬೇಕು.
ಭಾರತೀಯ ಮಿಲಿಟರಿ ಅಕಾಡೆಮಿ (IMA) – 19 ರಿಂದ 24 ವರ್ಷಗಳು
ಭಾರತೀಯ ನೌಕಾ ಅಕಾಡೆಮಿ (INA) – 19 ರಿಂದ 24 ವರ್ಷಗಳು
ವಾಯುಪಡೆ ಅಕಾಡೆಮಿ (AFA) – 20 ರಿಂದ 24 ವರ್ಷಗಳು
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) – 19 ರಿಂದ 25 ವರ್ಷಗಳು
ಪರೀಕ್ಷಾ ಮಾದರಿ
ಸಿಡಿಎಸ್ 2 ಲಿಖಿತ ಪರೀಕ್ಷೆಯು ಮೂರು ವಿಭಾಗಗಳನ್ನು ಒಳಗೊಂಡಿದೆ. ಇಂಗ್ಲಿಷ್, ಸಾಮಾನ್ಯ ಜ್ಞಾನ ಮತ್ತು ಗಣಿತ. ಅಭ್ಯರ್ಥಿಗಳಿಗೆ ಪ್ರತಿ ವಿಷಯಕ್ಕೆ ಎರಡು ಗಂಟೆಗಳ ಸಮಯವನ್ನು ನೀಡಲಾಗುತ್ತದೆ. ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ವಿಭಾಗಗಳಲ್ಲಿ 120 ಪ್ರಶ್ನೆಗಳು ಮತ್ತು ಗಣಿತ ವಿಭಾಗಕ್ಕೆ 100 ಪ್ರಶ್ನೆಗಳು ಇರುತ್ತವೆ. ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳು ಇದನ್ನು ನೆನಪಿನಲ್ಲಿಟ್ಟುಕೊಂಡು ಅದಕ್ಕೆ ಸೂಕ್ತ ತಯಾರಿ ನಡೆಸುವುದು ಅಗತ್ಯವಾಗಿದೆ.



