ಪರಪ್ಪನ ಅಗ್ರಹಾರದ ಅಧಿಕಾರಿಗಳನ್ನೇ ಯಾಮಾರಿಸಿದ ಕೈದಿ: ಖದೀಮನ ಮಾಸ್ಟರ್ ಪ್ಲಾನ್ ಬಯಲು
ಪರಪ್ಪನ ಅಗ್ರಹಾರದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ನಕಲಿ ದಾಖಲೆಗಳನ್ನು ಸೃಷ್ಠಿಸಿ ಜೈಲಾಧಿಕಾರಿಗಳನ್ನೇ ವಂಚಿಸಿದ ಘಟನೆಯೊಂದು ಬರೋಬ್ಬರಿ 8 ವರ್ಷಗಳ ಬಳಿಕ ಬಟಾಬಯಲಾಗಿದೆ. ಸುಪ್ರೀಂ ಕೋರ್ಟ್ನ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ಈತ ಜೈಲಾಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಜೈಲಿಂದ ರಿಲೀಸ್ ಆಗಿ ಹೊರನಡೆದಿದ್ದ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ನಕಲಿ ದಾಖಲೆಗಳನ್ನು ಸೃಷ್ಠಿಸಿ ಜೈಲಾಧಿಕಾರಿಗಳನ್ನೇ ವಂಚಿಸಿದ ಘಟನೆಯೊಂದು ಬರೋಬ್ಬರಿ 8 ವರ್ಷಗಳ ಬಳಿಕ ಬಟಾಬಯಲಾಗಿದೆ. ಸುಪ್ರೀಂ ಕೋರ್ಟ್ನ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ಈತ ಜೈಲಾಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಜೈಲಿಂದ ರಿಲೀಸ್ ಆಗಿ ಹೊರನಡೆದಿದ್ದ ಎನ್ನಲಾಗಿದೆ.
ಈ ಐನಾತಿ ಕೈದಿಯನ್ನು ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂದು ಗುರುತಿಸಲಾಗಿದೆ. 2001ರಲ್ಲಿ ಈತ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ಟ್ಯಾಕ್ ನ್ಯಾಯಾಲಯ, ಶಂಕರ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಪರಪ್ಪನ ಅಗ್ರಹಾರದಲ್ಲಿರಿಸಿತ್ತು.
ಜೈಲಿನಲ್ಲಿದ್ದ ಶಂಕರ್ ಹೇಗಾದರೂ ಮಾಡಿ ಇಲ್ಲಿಂದ ಪಾರಾಗಬೇಕೆಂದು ಮಾಸ್ಟರ್ ಪ್ಲಾನ್ ರೂಪಿಸಿದ್ದ. ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ಈತ ಸುಪ್ರೀಂ ಕೋರ್ಟ್ ತನಗೆ ಬಿಡುಗಡೆ ಆದೇಶ ನೀಡಿದೆ ಎಂದು ಪರಪ್ಪನ ಅಗ್ರಹಾರದ ಜೈಲಾಧಿಕಾರಿಯನ್ನು ನಂಬಿಸಿದ್ದಾರೆ. ಸುಪ್ರೀಂ ಕೋರ್ಟ್ ಮುದ್ರೆ ಹಾಗೂ ನ್ಯಾಯಮೂರ್ತಿಗಳ ಸಹಿ ಎಲ್ಲವನ್ನೂ ನಕಲು ಮಾಡಿದ್ದ ಶಂಕರ್, ಜೈಲಾಧಿಕಾರಿಗಳಿಗೆ ಮೋಸ ಮಾಡಿ ಜೈಲಿನಿಂದ ರಿಲೀಸ್ ಕೂಡ ಆಗಿದ್ದ.
Also Read: ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ: 10 ದಿನದಲ್ಲಿ 4ನೇ ಬಾರಿ ಬೆಲೆ ಶಾಕ್
ಜೈಲಾಧಿಕಾರಿಗಳು ಕೂಡ ಈ ಆದೇಶ ಪ್ರತಿಯನ್ನು ಮರುಪರಿಶೀಲನೆಗೆ ಒಳಪಡಿಸಿರಲಿಲ್ಲ. ಶಂಕರ್ ಪರವಾಗಿ ಬಂದ ವಕೀಲರು ಈ ಆದೇಶ ಪ್ರತಿ ನೀಡುತ್ತಿದ್ದಂತೆಯೇ, ಅದರಲ್ಲಿ ನಮೂದಾದಂತೆ 10 ಸಾವಿರ ರೂಪಾಯಿ ದಂಡ ಸ್ವೀಕರಿಸಿ 2018ರ ನವೆಂಬರ್ 13ರಂದು ಶಂಕರ್ನನ್ನು ಬಿಡುಗಡೆಗೊಳಿಸಿದ್ದರು.
8 ವರ್ಷಗಳ ಬಳಿಕ ಆರಾಮಾಗಿ ಜೈಲಿಂದ ಹೊರಗಿದ್ದ ಶಂಕರ್ ಕಳ್ಳಾಟ ಅನಾಮಧೇಯ ಪತ್ರವೊಂದರಿಂದ ಬಯಲಾಗಿದೆ , ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಅನಾಮಧೇಯ ಪತ್ರವೊಂದು ಬಂದಿದ್ದು, ಅದರಲ್ಲಿ ಎಲ್ಲವನ್ನೂ ನಮೂದಿಸಲಾಗಿತ್ತು. ಇದಾದ ಬಳಿಕ ಪರಿಶೀಲನೆ ನಡೆಸಿದ ಪೊಲೀಸರಿಗೆ ಸುಪ್ರೀಂ ಆದೇಶ ನಕಲಿ ಎಂದು ಗೊತ್ತಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ, ವಂಚನೆ ಹಾಗೂ ಇತರ ಕಾನೂನುಬದ್ಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಶಂಕರ್ ಪತ್ತೆಗೆ ಬಲೆ ಬೀಸಿದ್ದಾರೆ.
The prisoner who fooled the officials of Parappana Agrahara Khadeema master plan exposed



