ದ್ರಾವಿಡರ ನಾಡಿನಲ್ಲಿ ವಿಜಯ್ ಬಿಗ್ ಅನೌನ್ಸ್ಮೆಂಟ್ : 14 ಲಕ್ಷ ರೈತರ ಸಾಲಮನ್ನಾಗೆ ಟಿವಿಕೆ ಸರ್ಕಾರ ಸಜ್ಜು!
ಭಾರೀ ಭರವಸೆಗಳೊಂದಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೇ ಏರಿರುವ ಮುಖ್ಯಮಂತ್ರಿ ವಿಜಯ್ ಇದೀಗ ತಮ್ಮ ರಾಜ್ಯದ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ರಾಜ್ಯದ ಬರೋಬ್ಬರಿ 14 ಲಕ್ಷ ರೈತರ ಸಾಲ ಮನ್ನಾ ಮಾಡುತ್ತಿರುವುದಾಗಿ ತಮಿಳುನಾಡು ಸಿಎಂ ವಿಜಯ್ ಘೋಷಿಸಿದ್ದು, ಅನ್ನದಾತರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ತೆಗೆದುಕೊಂಡ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಸಣ್ಣ ಮತ್ತು ಅಲ್ಪಸಂಖ್ಯಾತ ರೈತರ 50 ಸಾವಿರ ರೂಪಾಯಿವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಇನ್ನು ದೊಡ್ಡ ರೈತರಿಗೆ 5 ಸಾವಿರ ರೂಪಾಯಿವರೆಗೆ ಸಾಲ ಪರಿಹಾರ ನೀಡಲಾಗುವುದು ಎಂದು ತಮಿಳುನಾಡು ಟಿವಿಕೆ ಸರ್ಕಾರ ಘೋಷಣೆ ಮಾಡಿದೆ.
ಈ ಯೋಜನೆಯ ಲಾಭವನ್ನು ತಮಿಳುನಾಡಿನ 14.22 ಲಕ್ಷ ರೈತರು ಪಡೆಯಲಿದ್ದಾರೆ. ಈ ಘೋಷಣೆಯ ಬಳಿಕ ತಮಿಳುನಾಡು ಸರ್ಕಾರದ ಖಜಾನೆಗೆ 2044 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ರೈತರಿಗೆ ಒತ್ತಡವನ್ನು ಕಡಿಮೆ ಮಾಡಲು, ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಸಾಲಮನ್ನಾ ಘೋಷಣೆ ಮಾಡಿದ್ದೇವೆ ಎಂದು ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಹೇಳಿಕೆ ನೀಡಿದ್ದಾರೆ.
Vijays big announcement in the Dravidian land TVK government is ready to waive off loans of 14 lakh farmers