ಸಿಎಂ ಕುರ್ಚಿ ಕೈ ತಪ್ಪುತ್ತಾ ಸಿದ್ದರಾಮಯ್ಯಗೆ? ರಾಷ್ಟ್ರ ರಾಜಕಾರಣಕ್ಕೆ ಟಗರು ಎಂಟ್ರಿ!
ಕಳೆದ ಅನೇಕ ತಿಂಗಳಿನಿಂದ ನಡೆಯುತ್ತಲೇ ಇದ್ದ ಸಿಎಂ ಸ್ಥಾನ ಬದಲಾವಣೆ ಫೈಟ್ ಇದೀಗ ರೋಚಕ ಹಂತ ತಲುಪಿದೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸರಣಿ ಸಭೆಯನ್ನು ನಡೆಸಿದ್ದು ,ಈ ವೇಳೆ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಅನೇಕ ತಿಂಗಳಿನಿಂದ ನಡೆಯುತ್ತಲೇ ಇದ್ದ ಸಿಎಂ ಸ್ಥಾನ ಬದಲಾವಣೆ ಫೈಟ್ ಇದೀಗ ರೋಚಕ ಹಂತ ತಲುಪಿದೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸರಣಿ ಸಭೆಯನ್ನು ನಡೆಸಿದ್ದು ,ಈ ವೇಳೆ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯರ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಉನ್ನತ ಮೂಲಗಳ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವ ಭರವಸೆ ನೀಡಿದ್ದು ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪುತ್ರ ಯತೀಂದ್ರ ಸಿದ್ದರಾಮಯ್ಯರಿಗೆ ಡಿಸಿಎಂ ಸ್ಥಾನದ ಅಭಯ ಕೂಡ ಸಿಕ್ಕಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ರಾಹುಲ್ ಗಾಂಧಿಯವರ ಈ ಎಲ್ಲಾ ಆಫರ್ಗಳಿಗೆ ಪ್ರತಿಯಾಗಿ ಮರು ಆಫರ್ ನೀಡಿದ ಸಿಎಂ ಸಿದ್ದರಾಮಯ್ಯ, ನನ್ನನ್ನೇ ಸಿಎಂ ಆಗಿ ಮುಂದುವರಿಸಿದರೆ 2028ರಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನೇ ಅಧಿಕಾರಕ್ಕೆ ತರುವೆ ಎಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜ್ಯದಲ್ಲಿ ಮುಂದಿನ ನಾಯಕತ್ವ ಯಾರಿಗೆ ವಹಿಸಲಿದ್ದೀರಿ ಎಂಬ ಪ್ರಶ್ನೆಯನ್ನೂ ಇರಿಸಿದ್ದಾರೆ ಎನ್ನಲಾಗಿದೆ. ರಾಜ್ಯ ರಾಜಕಾರಣದಲ್ಲಿ ನಡೆಯುವ ಯಾವುದೇ ಬದಲಾವಣೆಯ ಸಂದರ್ಭದಲ್ಲಿ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ರಾಷ್ಟ್ರ ರಾಜಕಾರಣ ಪ್ರವೇಶದತ್ತ ಮನಸ್ಸು ಮಾಡದ ಸಿಎಂ ಸಿದ್ದರಾಮಯ್ಯ ಅಲ್ಲಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತರ ಬಳಿಯಲ್ಲಿ ನಾಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಇದಕ್ಕೆ ಸಿಎಂ ಆಪ್ತರು ನಿರಾಕರಿಸಿದ್ದು ನೀವೇ ಸಿಎಂ ಆಗಿ ಮುಂದುವರಿಯಬೇಕು ಎಂದು ಮನವಿ ಮಾಡಿದ್ದಾರೆ.
Also Read: ದ್ರಾವಿಡರ ನಾಡಿನಲ್ಲಿ ವಿಜಯ್ ಬಿಗ್ ಅನೌನ್ಸ್‌ಮೆಂಟ್ : 14 ಲಕ್ಷ ರೈತರ ಸಾಲಮನ್ನಾಗೆ ಟಿವಿಕೆ ಸರ್ಕಾರ ಸಜ್ಜು!
ಆದರೆ ಇದಕ್ಕೆ ಪ್ರತ್ಯುತ್ತರಿಸಿದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರ ಮಾತನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ. ಬೇಕಿದ್ದರೆ ನೀವೇ ಎಲ್ಲ ಮಾತನಾಡಿ ಎಂದು ಆಪ್ತರಲ್ಲಿ ಹೇಳಿದ್ದಾರಂತೆ..! ಒಟ್ನಲ್ಲಿ ರಾಜ್ಯ ರಾಜಕಾರಣದಲ್ಲಿ ನಾಳೆ ಬಲವಾದ ಬದಲಾವಣೆ ಬೀಸಲಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ಗೆ ಸಿಎಂ ಪಟ್ಟಕ್ಕೇರುವ ಸಮಯ ಹತ್ತಿರ ಬರುತ್ತಿರುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.
Siddaramaiah loses CMs chair Tagaru entry into national politics



