ದ್ರಾವಿಡರ ನಾಡಿನಲ್ಲಿ ವಿಜಯ್‌ ಬಿಗ್ ಅನೌನ್ಸ್‌ಮೆಂಟ್‌ : 14 ಲಕ್ಷ ರೈತರ ಸಾಲಮನ್ನಾಗೆ ಟಿವಿಕೆ ಸರ್ಕಾರ ಸಜ್ಜು!

ಭಾರೀ ಭರವಸೆಗಳೊಂದಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೇ ಏರಿರುವ ಮುಖ್ಯಮಂತ್ರಿ ವಿಜಯ್​ ಇದೀಗ ತಮ್ಮ ರಾಜ್ಯದ ರೈತರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ರಾಜ್ಯದ ಬರೋಬ್ಬರಿ 14 ಲಕ್ಷ ರೈತರ ಸಾಲ ಮನ್ನಾ ಮಾಡುತ್ತಿರುವುದಾಗಿ ತಮಿಳುನಾಡು ಸಿಎಂ ವಿಜಯ್​ ಘೋಷಿಸಿದ್ದು, ಅನ್ನದಾತರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಭಾರೀ ಭರವಸೆಗಳೊಂದಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೇ ಏರಿರುವ ಮುಖ್ಯಮಂತ್ರಿ ವಿಜಯ್​ ಇದೀಗ ತಮ್ಮ ರಾಜ್ಯದ ರೈತರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ರಾಜ್ಯದ ಬರೋಬ್ಬರಿ 14 ಲಕ್ಷ ರೈತರ ಸಾಲ ಮನ್ನಾ ಮಾಡುತ್ತಿರುವುದಾಗಿ ತಮಿಳುನಾಡು ಸಿಎಂ ವಿಜಯ್​ ಘೋಷಿಸಿದ್ದು, ಅನ್ನದಾತರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಸಹಕಾರಿ ಬ್ಯಾಂಕ್​ಗಳಲ್ಲಿ ರೈತರು ತೆಗೆದುಕೊಂಡ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಸಣ್ಣ ಮತ್ತು ಅಲ್ಪಸಂಖ್ಯಾತ ರೈತರ 50 ಸಾವಿರ ರೂಪಾಯಿವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಇನ್ನು ದೊಡ್ಡ ರೈತರಿಗೆ 5 ಸಾವಿರ ರೂಪಾಯಿವರೆಗೆ ಸಾಲ ಪರಿಹಾರ ನೀಡಲಾಗುವುದು ಎಂದು ತಮಿಳುನಾಡು ಟಿವಿಕೆ ಸರ್ಕಾರ ಘೋಷಣೆ ಮಾಡಿದೆ.

Also Read: ರಾಜ್ಯಸಭೆಗೆ ಕರಾವಳಿಯಿಂದ ಎರಡು ಆಕಾಂಕ್ಷಿಗಳ ಹೆಸರು: ಮಂಗಳೂರಿನ ನವೀನ್ ಡಿಸೋಜ, ಕುಮುಟಾದ ನಿವೇದಿತಾ ಆಳ್ವ ನಡುವೆ ಪೈಪೋಟಿ!

ಈ ಯೋಜನೆಯ ಲಾಭವನ್ನು ತಮಿಳುನಾಡಿನ 14.22 ಲಕ್ಷ ರೈತರು ಪಡೆಯಲಿದ್ದಾರೆ. ಈ ಘೋಷಣೆಯ ಬಳಿಕ ತಮಿಳುನಾಡು ಸರ್ಕಾರದ ಖಜಾನೆಗೆ 2044 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ರೈತರಿಗೆ ಒತ್ತಡವನ್ನು ಕಡಿಮೆ ಮಾಡಲು, ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಸಾಲಮನ್ನಾ ಘೋಷಣೆ ಮಾಡಿದ್ದೇವೆ ಎಂದು ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್​ ಹೇಳಿಕೆ ನೀಡಿದ್ದಾರೆ.

Vijays big announcement in the Dravidian land TVK government is ready to waive off loans of 14 lakh farmers

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories