ಗುರು ಸಂಚಾರ 2026: ಇನ್ನು ಕೇವಲ 5 ದಿನದ ನಂತರ ಈ 6 ರಾಶಿಯವರಿಗೆ ಬರಲಿದೆ ಅದೃಷ್ಟವೋ ಅದೃಷ್ಟ
ಗುರು ಗ್ರಹವು ಚಂದ್ರನ ರಾಶಿಯಾದ ಕಟಕ ರಾಶಿಗೆ ಜೂನ್ 2 ರಂದು ಪ್ರವೇಶಿಸಲಿದ್ದಾನೆ. ಇದರಿಂದ 6 ರಾಶಿಯವರ ಜೀವನದಲ್ಲಿ ಅದೃಷ್ಟದ ಹೊಳೆಯೇ ಹರಿಯಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷದ ಜೂನ್ ತಿಂಗಳು ಬಹಳ ಮುಖ್ಯವಾಗಲಿದೆ. ಗುರು ಗ್ರಹವು ಚಂದ್ರನ ರಾಶಿಯಾದ ಕಟಕ ರಾಶಿಗೆ ಸಾಗಲಿದ್ದಾನೆ. ಬರೋಬ್ಬರಿ 12 ವರ್ಷಗಳ ನಂತರ ಗುರು ತನ್ನಉಚ್ಛ ರಾಶಿಯಾದ ಕಟಕ ರಾಶಿಗೆ ಸಾಗುತ್ತಾನೆ. ಗುರುವಿನ ಈ ಸಂಕ್ರಮಣವು ಜೂನ್ 2ರ ಬೆಳಗಿನ ಜಾವ 2:25 ಕ್ಕೆ ಸಂಭವಿಸಲಿದೆ. ಗುರುವು ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಅಂದರೆ ಸಂಪೂರ್ಣ 5 ತಿಂಗಳುಗಳ ಕಾಲ ಅದೇ ರಾಶಿಯಲ್ಲಿ ನೆಲೆಸಲಿದ್ದಾನೆ. ಇದರಿಂದ 12 ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿದೆ. ಆದರೆ ಅವುಗಳಲ್ಲಿ ಈ 6 ರಾಶಿಯವರ ಮೇಲೆ ಅದೃಷ್ಟದ ಹೊಳೆಯನ್ನೇ ಹರಿಸಲಿದ್ದಾನೆ. ಆ ರಾಶಿಗಳು ಯಾವುವು ಇಲ್ಲಿದೆ ಓದಿ.
ಮೇಷ ರಾಶಿ
ಜೂನ್ 2 ರಂದು ಸಂಭವಿಸಲಿರುವ ಗುರು ಸಂಚಾರವು ಮೇಷ ರಾಶಿಯವರಿಗೆ ಹೆಚ್ಚಿನ ಲಾಭ ತರಲಿದೆ. ಆರ್ಥಿಕ ಸಮಸ್ಯೆ ದೂರವಾಗಿ, ಧನ ಪ್ರಾಪ್ತಿಯಾಗಲಿದೆ. ಗುರು ಮತ್ತು ಚಂದ್ರನ ಕಾರಣದಿಂದ ಐಷಾರಾಮದ ಜೀವನ ನಿಮ್ಮದಾಗುತ್ತದೆ. ಇಲ್ಲಿಯವರೆಗಿನ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ಕಟಕ ರಾಶಿ
ಗುರುವಿನ ಸಂಚಾರವು ಕಟಕ ರಾಶಿಯಲ್ಲೇ ನಡೆಯುವುದರಿಂದ ಈ ರಾಶಿಯವರಿಗೆ ಸಂಕ್ರಮಣದ ಸಮಯವು ಅನುಕೂಲಕರವಾಗಲಿದೆ. ಉದ್ಯೋಗ ಬದಲಾವಣೆಗೆ ಅಥವಾ ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ಆಸ್ತಿ ಖರೀದಿಯ ಸಾಧ್ಯತೆಯಿದೆ.
ಸಿಂಹ ರಾಶಿ
ಈ ಸಂಚಾರವು ಸಿಂಹ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹೊಸ ವೃತ್ತಿ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ವ್ಯಾಪಾರಸ್ತರಿಗೆ ಲಾಭವಾಗಲಿದೆ. ಬಹುನಿರೀಕ್ಷಿತ ಒಪ್ಪಂದವೊಂದು ನಿಮ್ಮ ಜೀವನದಲ್ಲಿ ಆಗುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆಯಾಗುವ ಎಲ್ಲ ಸಾಧ್ಯತೆಗಳಿವೆ.
ಇದನ್ನೂ ಓದಿ : ಅಡುಗೆಮನೆಯಲ್ಲಿ ದೇವರಮನೆಯಿರುವುದು ಸರಿನಾ ಅಥವಾ ತಪ್ಪಾ? ವಾಸ್ತು ನಂಬಿಕೆ ಏನು ಹೇಳುತ್ತದೆ?
ತುಲಾ ರಾಶಿ
ಜೂನ್ 2 ರ ನಂತರ ತುಲಾ ರಾಶಿಯವರು ಪ್ರಗತಿಯ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಿದ್ದಾರೆ. ಕೆಲಸದಲ್ಲಿ ಹೊಸ ಮತ್ತು ಪ್ರಮುಖ ಜವಾಬ್ದಾರಿಗಳು ಸಿಗಬಹುದು. ಅಪೂರ್ಣವಾಗಿ ಉಳಿದಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳುವು ಸಾಧ್ಯತೆಗಳಿವೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ವೇಗವಾಗಿ ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ವೃಶ್ಚಿಕ ರಾಶಿ
ಉದ್ಯೋಗ ಮತ್ತು ವ್ಯಾಪಾರದಲ್ಲಿ ತೊಡಗಿರುವವರಿಗೆ ಗುರುವಿನ ಸಂಚಾರವು ಲಾಭವನ್ನು ತರಲಿದೆ. ಅಪೂರ್ಣವಾಗಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವತ್ತ ಸಾಗಲಿದೆ. ಕುಟುಂಬ ಮತ್ತು ಸ್ನೇಹಿತರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ ಮತ್ತು ನಿಮ್ಮ ಮನಸ್ಸು ಮೊದಲಿಗಿಂತ ಹೆಚ್ಚು ಶಾಂತವಾಗಿರುತ್ತದೆ.
ಮೀನ ರಾಶಿ
ರಾಶಿ ಚಕ್ರದ ಕೊನೆಯ ಮನೆಯಾದ ಮೀನ ರಾಶಿಯವರಿಗೆ ಗುರು ಸಂಚಾರದಿಂದ ಹೆಚ್ಚು ಪ್ರಯೋಜನವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಕೆಲಸ ಮತ್ತು ಹೊಸ ವೃತ್ತಿ ಅವಕಾಶಗಳು ಬರಲಿದೆ. ಕ್ರಮೇಣ ಹಣಕಾಸಿನ ಸಮಸ್ಯೆ ದೂರವಾಗಲಿದೆ. ಹಳೆ ಹೂಡಿಕೆಗಳ್ಲಲಿ ಲಾಭವಾಗಲಿದೆ.



