IPL 2026 Vaibhav Sooryavanshi : ಐಪಿಎಲ್‌ನಲ್ಲಿ 15 ವರ್ಷದ ಬಾಲಕನ ಅಬ್ಬರ ! ಕೊಹ್ಲಿ, ರಾಹುಲ್‌, ದಾಖಲೆ ಉಡೀಸ್‌ ಮಾಡಿದ ವೈಭವ್‌ ಸೂರ್ಯವಂಶಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವೈಭವ್‌ ಸೂರ್ಯವಂಶಿ ಬೌಲರ್‌ಗಳನ್ನು ದೂಳಿಪಟ ಮಾಡಿದ್ದಾರೆ. ನ್‌ಕ್ಯಾಪ್ಡ್ ಪ್ಲೇಯರ್ ಆಗಿ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಹೊಸ ಇತಿಹಾಸವೇನು ಗೊತ್ತಾ ? ಸೂರ್ಯವಂಶಿ ಅವರು ಬಾರಿಸಿರುವ ದಾಖಲೆಗಳು ಇಲ್ಲಿದೆ ನೋಡಿ.

IPL 2026 Vaibhav Sooryavanshi :ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಕ್ರಿಕೆಟ್ ಜಗತ್ತಿಗೆ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವ ವೇದಿಕೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. (RR) ರಾಯಸ್ಥಾನ ರಾಯಲ್ಸ್‌ ತಂಡ ವೈಭವ್‌ ಸೂರ್ಯವಂಶಿ (Vaibhav Sooryavanshi) ಕೇವಲ 15 ವರ್ಷದಲ್ಲಿಯೇ ಯಾರೂ ಊಹಿಸದ ದಾಖಲೆ ಬರೆದಿದ್ದಾರೆ. ಅದ್ರಲ್ಲೂ ಐಪಿಎಲ್‌ 2026ರಲ್ಲಿ ‘ಅನ್‌ಕ್ಯಾಪ್ಡ್ ಪ್ಲೇಯರ್’ (Uncapped Player ಆಟಗಾರನಾಗಿ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್ 2026 ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ವೈಭವ್ ಸೂರ್ಯವಂಶಿ, ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಈ ಬಾರಿಯ ಐಪಿಎಲ್‌ ಆವೃತ್ತಿಯ 15 ಪಂದ್ಯಗಳಲ್ಲಿ ಬರೋಬ್ಬರಿ ಅವರು 680 ರನ್ ಚಚ್ಚಿದ್ದಾರೆ. ಇದರಲ್ಲಿ ಒಂದು ಭರ್ಜರಿ ಶತಕ (103 ರನ್) ಮತ್ತು 4 ಅರ್ಧಶತಕಗಳು ಸೇರಿವೆ. ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ, ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 232.27 ರಷ್ಟಿದೆ. ಅನ್‌ಕ್ಯಾಪ್ಡ್ ಆಟಗಾರನೊಬ್ಬ ಈ ಮಟ್ಟಿಗೆ ರನ್ ಮಳೆ ಹರಿಸುತ್ತಿರುವುದು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು.

ವೈಭವ್ ಸೂರ್ಯವಂಶಿ ಸಿಕ್ಸರ್‌ಗಳ ಸುನಾಮಿ ಹರಿಸಿದ್ದು ಮಾತ್ರವಲ್ಲ ಈ ಸೀಸನ್‌ನಲ್ಲಿ ಅವರು ಈಗಾಗಲೇ 53 ಸಿಕ್ಸರ್ ಹಾಗೂ 50 ಬೌಂಡರಿಗಳನ್ನು ಸಿಡಿಸಿದ್ದಾರೆ. ಈ ಮೂಲಕ ಒಂದೇ ಐಪಿಎಲ್ ಸೀಸನ್‌ನಲ್ಲಿ 65ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಕ್ರಿಸ್ ಗೇಲ್ (59 ಸಿಕ್ಸರ್, 2012) ಅವರ ಸಾರ್ವಕಾಲಿಕ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ ಅನ್‌ಕ್ಯಾಪ್ಡ್ ಆಟಗಾರರು ಯಾರು?

ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವು ಈ ಹಿಂದೆ ಅನ್‌ಕ್ಯಾಪ್ಡ್ ಆಟಗಾರರಾಗಿ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ದಿಗ್ಗಜರ ದಾಖಲೆಗಳನ್ನೇ ಅಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪ್ರಮುಖ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿ ಇಲ್ಲಿದೆ.

  • ವೈಭವ್‌ ಸೂರ್ಯವಂಶಿ – ರಾಜಸ್ಥಾನ ರಾಯಲ್ಸ್‌ 685 ರನ್ – ಐಪಿಎಲ್‌ 2026
  • ಯಶಸ್ವಿ ಜೈಸ್ವಾಲ್‌ – ರಾಜಸ್ಥಾನ ರಾಯಲ್ಸ್‌ – 625 ರನ್‌‌ ಐಪಿಎಲ್‌ 2023
  • ಶಾನ್‌ ಮಾರ್ಷ್‌ ಕಿಂಗ್ಸ್‌ 11 ಪಂಜಾಬ್‌ – 616 ರನ್‌ – ಐಪಿಎಲ್‌ 2008
  • ಇಶಾನ್‌ ಕಿಶನ್‌ – ಮುಂಬೈ ಇಂಡಿಯನ್ಸ್‌ – 516 – ಐಪಿಎಲ್‌ 2020
  • ಸೂರ್ಯಕುಮಾರ್‌ ಯಾದವ್‌ – ಮುಂಬೈ ಇಂಡಿಯನ್ಸ್‌ – 512 ರನ್‌ – ಐಪಿಎಲ್‌ 2018

ಯಶಸ್ವಿ ಜೈಸ್ವಾಲ್ ಮತ್ತು ಶಾನ್ ಮಾರ್ಷ್ ಈ ಹಿಂದೆ 600ಕ್ಕೂ ಹೆಚ್ಚು ರನ್ ಗಳಿಸಿ ಅನ್‌ಕ್ಯಾಪ್ಡ್ ಆಟಗಾರರಾಗಿ ಮಿಂಚಿದ್ದರು. ಆದರೆ ವೈಭವ್ ಕೇವಲ 15ನೇ ವಯಸ್ಸಿನಲ್ಲಿ, ಅತಿ ಕಡಿಮೆ ಎಸೆತಗಳನ್ನು ಎದುರಿಸಿ 230ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 600+ ರನ್ ಗಳಿಸುವ ಮೂಲಕ ಅತ್ಯಂತ ಸ್ಪೋಟಕ ಅನ್‌ಕ್ಯಾಪ್ಡ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

15 year old Vaibhav suryavanshi ipl 2026 records vs kohli rahul

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories