ಕೇಂದ್ರ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ ? LBSNAA ಸಂಸ್ಥೆಯಲ್ಲಿ ಉದ್ಯೋಗಾವಕಾಶ; ತಿಂಗಳಿಗೆ ₹1.4 ಲಕ್ಷ ಸಂಬಳ
LBSNAA Recruitment 2026: ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ಆಡಳಿತಾಧಿಕಾರಿ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಸಲು ಆಪ್ಷನ್ ಲಿಂಕ್ ಇಲ್ಲಿದೆ

LBSNAA Job Notification 2026: ಭಾರತದ ನಾಗರಿಕ ಸೇವೆಗಳ (Civil Services) ಪ್ರಮುಖ ತರಬೇತಿ ಸಂಸ್ಥೆಯಾದ ಮಸ್ಸೂರಿಯ ‘ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ’ (LBSNAA) ಖಾಲಿ ಇರುವ ಪ್ರಮುಖ ಹುದ್ದೆಯ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಸೂಕ್ತ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಬಹುದು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿ (LBSNAA) ಉದ್ಯೋಗಾವಕಾಶ 2026
ಭಾರತ ಸರ್ಕಾರದ ಕಾರ್ಮಿಕ, ಲೋಕ ದೂರುಗಳು ಮತ್ತು ಪೆನ್ಷನ್ ಸಚಿವಾಲಯದ ಒಡೆತನದ, ಉತ್ತರಾಖಂಡದ ಮಸ್ಸೂಲಿಯಲ್ಲಿರುವ ಪ್ರಸಿದ್ಧ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (LBSNAA) ಖಾಲಿ ಇರುವ ಹುದ್ದೆಯನ್ನು ಪ್ರತಿನ್ಯುಕ್ತಿ (Deputation) ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಯ ಸಂಪೂರ್ಣ ವಿವರಗಳು:
ಹುದ್ದೆಯ ಹೆಸರು: ಆಡಳಿತಾಧಿಕಾರಿ (ಲೆಕ್ಕಪತ್ರ) –
Administrative Officer (Accounts)
- ಒಟ್ಟು ಹುದ್ದೆಗಳು: 1 (ಒಂದು). ನೇಮಕಾತಿ ವಿಧಾನ: ಅಲ್ಪಾವಧಿ ಒಪ್ಪಂದ
- ಹುದ್ದೆಯ ವರ್ಗೀಕರಣ: ಸಾಮಾನ್ಯ ಕೇಂದ್ರ ಸೇವೆಗಳು, [ಗ್ರೂಪ್ ‘ಬಿ’; ಗೆಜೆಟೆಡ್, ಮಿನಿಸ್ಟಿರಿಯಲ್].
- ವೇತನ ಶ್ರೇಣಿ (Salary): 7ನೇ ವೇತನ ಆಯೋಗದ ಪ್ರಕಾರ ಲೆವೆಲ್-7 (ರೂ. 44,900 ರಿಂದ ರೂ. 1,42,400) ರವರೆಗೆ ಮಾಸಿಕ ವೇತನ ಇರಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಭತ್ಯೆಗಳು ಸಿಗಲಿವೆ.
ಅರ್ಹತಾ ಮಾನದಂಡಗಳು (Eligibility Criteria):
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಸಾರ್ವಜನಿಕ ವಲಯದ ಉದ್ಯಮಗಳು (PSU) ಅಥವಾ ಸ್ವಾಯತ್ತ ಸಂಸ್ಥೆಗಳಲ್ಲಿ ಅಧಿಕಾರಿಯಾಗಿರಬೇಕು
ಮೂಲ ಕೇಡರ್ ಅಥವಾ ಇಲಾಖೆಯಲ್ಲಿ ನಿಯಮಿತ ಆಧಾರದ ಮೇಲೆ ಸಮಾನವಾದ ಹುದ್ದೆಯನ್ನು ಹೊಂದಿರಬೇಕು. ಅಥವಾ ಪೇ ಮ್ಯಾಟ್ರಿಕ್ಸ್‌ನ ಲೆವೆಲ್-6 ರಲ್ಲಿ ನಿಯಮಿತವಾಗಿ ಕನಿಷ್ಠ 5 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
ಶೈಕ್ಷಣಿಕ ಅರ್ಹತೆ: ಕೇಂದ್ರ ಸರ್ಕಾರದ ಸಂಘಟಿತ ಲೆಕ್ಕಪತ್ರ ಇಲಾಖೆ ನಡೆಸುವ ‘ಅಧೀನ ಲೆಕ್ಕಪತ್ರ ಸೇವಾ ಪರೀಕ್ಷೆ’ (SAS) ಉತ್ತೀರ್ಣರಾಗಿರಬೇಕು. ಅಥವಾ ಇನ್‌ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯಟ್ ಟ್ರೈನಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ನಗದು ಮತ್ತು ಲೆಕ್ಕಪತ್ರ ಕೆಲಸದಲ್ಲಿ ತರಬೇತಿ ಪಡೆದು 3 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ (Age Limit):
ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ಪ್ರತಿನ್ಯುಕ್ತಿಯ ಆರಂಭಿಕ ಅವಧಿಯು 3 ವರ್ಷಗಳಾಗಿರಲಿದ್ದು, ನಿಯಮಾನುಸಾರ ವಿಸ್ತರಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? (How to Apply):
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ಬಯೋಡೇಟಾ (Curriculum Vitae) ಪ್ರೊಫಾರ್ಮಾದಲ್ಲಿ (A-4 ಅಳತೆಯ ಪೇಪರ್‌ನಲ್ಲಿ ಪ್ರಿಂಟ್ ತೆಗೆದು) ಸ್ಪಷ್ಟವಾಗಿ ಟೈಪ್ ಮಾಡಬೇಕು. ಅರ್ಜಿಯೊಂದಿಗೆ ಕಳೆದ 5 ವರ್ಷಗಳ ಎಸಿಆರ್ (ACR/APAR) ದೃಢೀಕೃತ ಪ್ರತಿಗಳು, ವಿಜಿಲೆನ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ, ಮತ್ತು ಇಂಟೆಗ್ರಿಟಿ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಅರ್ಜಿಯನ್ನು ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ “ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ, ಮಸ್ಸೂರಿ-248179, ಜಿಲ್ಲಾ ಡೆಹ್ರಾಡೂನ್ (उत्तराखंड)” ಇಲ್ಲಿನ ಎಸ್ಟಾಬ್ಲಿಷ್ಮೆಂಟ್ ಇನ್-ಚಾರ್ಜ್ ಆದ ಶ್ರೀ ರೋಮಿಯೋ ವಿನ್ಸೆಂಟ್ ಟೇಟೆ ಅವರಿಗೆ ತಲುಪುವಂತೆ ಕಳುಹಿಸಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಎಪ್ರಿಲ್ 09 2026ರಂದು ಅಧಿಕೃತ ಆದೇಶ ಹೊರಬಿದ್ದಿದ್ದು, ಜೂನ್ 07 2026ರ ಒಳಗೆ ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ http://www.lbsnaa.gov.in ಮೂಲಕ ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಫಾರಂ ಅನ್ನು ಪಡೆಯಬಹುದು.
lbsnaa Mussoorie recruitment 2026 administrative officer accounts job notification



