ಎನ್‌ಸಿಎಲ್‌ನಲ್ಲಿ 1607 ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆ ಈ ದಿನದಿಂದ ಪ್ರಾರಂಭ
ಎನ್‌ಸಿಎಲ್ 1,607 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಪದವೀಧರ, ಡಿಪ್ಲೊಮಾ ಮತ್ತು ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಎನ್‌ಸಿಎಲ್ 1,607 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎನ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 1 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 15. ಈ ನೇಮಕಾತಿಯಲ್ಲಿ ಇರಬೇಕಾದ ವಿದ್ಯಾರ್ಹತೆ, ವಯೋಮಿತಿ, ಸ್ಟೈಫಂಡ್ ಎಷ್ಟು ಎಂದು ನೋಡೋಣ.
ವಿದ್ಯಾರ್ಹತೆ
ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಪದವಿ, ಡಿಪ್ಲೊಮಾ ಅಥವಾ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 26 ವರ್ಷಗಳು. ವಿಶೇಷ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಸ್ಟೈಫಂಡ್
ಅಪ್ರೆಂಟಿಸ್‌ಶಿಪ್‌ಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ಸಹ ಸಿಗುತ್ತದೆ: ಪದವೀಧರ ಅಪ್ರೆಂಟಿಸ್‌ಗಳು ತಿಂಗಳಿಗೆ ₹12,300, ಡಿಪ್ಲೊಮಾ ಅಪ್ರೆಂಟಿಸ್‌ಗಳು ತಿಂಗಳಿಗೆ ₹10,900 ಮತ್ತು ಐಟಿಐ ಅಪ್ರೆಂಟಿಸ್‌ಗಳು ತಿಂಗಳಿಗೆ ₹10,560 ಸ್ಟೈಫಂಡ್ ಪಡೆಯುತ್ತಾರೆ.
ಇದನ್ನೂ ಓದಿ: ಐಟಿಐ ಆದವರಿಗೆ ದೇಶಸೇವೆ ಮಾಡುವ ಸೌಭಾಗ್ಯ : ಬಿಡಿಎಲ್‌ನಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗೆ ಇಂದೇ ಅರ್ಜಿ ಹಾಕಿ
ಅರ್ಜಿ ಸಲ್ಲಿಕೆ ಹೇಗೆ?
ಎನ್‌ಸಿಎಲ್ ಅಪ್ರೆಂಟಿಸ್‌ಶಿಪ್ ಹುದ್ದೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈಗ ಮುಖಪುಟದಲ್ಲಿರುವ ಆನ್‌ಲೈನ್ ನೋಂದಣಿ ಮೇಲೆ ಕ್ಲಿಕ್ಕಿಸಿ.
ಅಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ.
ನಂತರ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ಅಂತಿಮವಾಗಿ ಎಲ್ಲಾ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಅರ್ಜಿ ಸಲ್ಲಿಸಿ. ಪ್ರಿಂಟ್‌ಔಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.



