ಭಾರತೀಯ ಹವಾಮಾನ ಇಲಾಖೆಯಿಂದ ಹೊಸ ಭವಿಷ್ಯ : ಮುಂದಿನ 3 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ
ಭಾರತೀಯ ಹವಾಮಾನ ಇಲಾಖೆಯು ಈ ಮೊದಲು ಕೇರಳಕ್ಕೆ ಮೇ 26ರಂದು ಮುಂಗಾರು ಮಾರುತಗಳು ಪ್ರವೇಶ ಪಡೆಯಲಿವೆ ಎಂದು ಮಾಹಿತಿ ನೀಡಿತ್ತು.
ಭಾರತೀಯ ಹವಾಮಾನ ಇಲಾಖೆಯು ಈ ಮೊದಲು ಕೇರಳಕ್ಕೆ ಮೇ 26ರಂದು ಮುಂಗಾರು ಮಾರುತಗಳು ಪ್ರವೇಶ ಪಡೆಯಲಿವೆ ಎಂದು ಮಾಹಿತಿ ನೀಡಿತ್ತು. ಇದಾದ ಬಳಿಕ ಜೂನ್ 1ರಂದು ಮುಂಗಾರು ಪ್ರವೇಶ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಐಎಂಡಿ ಹೊಸ ಭವಿಷ್ಯ ನುಡಿದಿದ್ದು, ಜೂನ್ 4 ಇಲ್ಲವೇ 5ರಂದು ಮುಂಗಾರಿನ ಪ್ರವೇಶವಾಗಲಿದೆ ಎನ್ನಲಾಗಿದೆ.
ಕೇರಳಕ್ಕೆ ಪ್ರವೇಶ ಪಡೆದ ಮುಂಗಾರು ಮಾರುತಗಳು ಕ್ರಮೇಣವಾಗಿ ತಮಿಳುನಾಡು, ಬಂಗಾಳಕೊಲ್ಲಿಯ ಕಡೆಗೆ ವಾಲಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಮುಂಗಾರು ಮಳೆಗಾಗಿ ಆಕಾಶ ನೋಡುತ್ತಿರುವ ರೈತರ, ಒನ್ನೂ ಮೂರ್ನಾಲ್ಕು ದಿನ ಈ ಕೆಲಸ ಮುಂದುವರಿಸಬೇಕಾಗಿ ಬರಲಿದೆ. ಇನ್ನು ಈ ಬಾರಿ ದೇಶದಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆ ಇರಲಿದೆ ಎನ್ನಲಾಗಿದೆ. ಬರಗಾಲದ ಪರಿಸ್ಥಿತಿ ಬಾರದೇ ಇದ್ದರೂ ಸಹ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ : ಮುಸುರೆ ತೊಳೆಯುತ್ತಿದ್ದಾಕೆಗೆ ಒಲಿದು ಬಂದ ಮಂತ್ರಿಗಿರಿ..ಬಿಜೆಪಿ ನಿರ್ಧಾರಕ್ಕೆ ದೇಶಾದ್ಯಂತ ಮೆಚ್ಚುಗೆ
ಮುಂಗಾರು ಮಾರುತಗಳ ವಿಳಂಬ ಮತ್ತು ಕಡಿಮೆ ಮಳೆಯ ಮುನ್ಸೂಚನೆಯು ಕೃಷಿ ವಲಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ವಾಡಿಕೆಗಿಂತ ತಡವಾಗಿ ಮಳೆ ಆರಂಭವಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚಟುವಟಿಕೆಗಳು ಕೂಡ ಹಿನ್ನಡೆ ಸಾಧಿಸಲಿದ್ದು, ರೈತರು ಮಳೆಯ ಹಂಚಿಕೆಗೆ ಅನುಗುಣವಾಗಿ ಅಲ್ಪಾವಧಿ ಬೆಳೆಗಳತ್ತ ಗಮನ ಹರಿಸುವುದು ಸೂಕ್ತ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಮಾರುತಗಳ ಚಲನೆ ಮತ್ತು ತೀವ್ರತೆಯನ್ನು ಸೂಕ್ಷ್ಮವಾಗಿ ಗಮನಿಸಿ, ಲಭ್ಯವಿರುವ ಜಲಮೂಲಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಸದ್ಯ ಎದುರಾಗಿದೆ.
New prediction from the Indian Meteorological Department Monsoon to arrive in Kerala in the next 3 days



