ರಾಹುಲ್ ಗಾಂಧಿ 70 ರ ಫಾರ್ಮುಲ: ಕರಾವಳಿಯಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರ ನಿವೃತ್ತಿ!
ಇದರೊಂದಿಗೆ 70 ವರ್ಷವಾಗಿರುವ ಹಲವಾರು ಹಿರಿಯ ನಾಯಕರುಗಳು ಭವಿಷ್ಯದ ಚುನಾವಣಾ ರಾಜಕಾರಣದಿಂದ ಕರ್ನಾಟಕದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಹೈಕಮಾಂಡ್ ಮೂಲಗಳಿಂದ ತಿಳಿದು ಬಂದಿದೆ .
ಬೆಂಗಳೂರು: ಎಲ್ಲ ರಾಜ್ಯಗಳಲ್ಲಿ ಕೇರಳ ಮಾದರಿಯ ಹೊಸ ಜನರೇಶನ್ ಶಿಫ್ಟ್ ರಾಜಕಾರಣಕ್ಕೆ ರಾಹುಲ್ ಗಾಂಧಿ (Rahul Gandhi) ಮುಂದಾಗಿದ್ದಾರೆ. ಇದರ ಭಾಗವಾಗಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯರವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ತರಲಾಗಿದೆ.
ಇದರೊಂದಿಗೆ 70 ವರ್ಷವಾಗಿರುವ ಹಲವಾರು ಹಿರಿಯ ನಾಯಕರುಗಳು ಭವಿಷ್ಯದ ಚುನಾವಣಾ ರಾಜಕಾರಣದಿಂದ ಕರ್ನಾಟಕದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಹೈಕಮಾಂಡ್ ಮೂಲಗಳಿಂದ ತಿಳಿದು ಬಂದಿದೆ .
ಇದರೊಂದಿಗೆ ಕರಾವಳಿಯಲ್ಲಿ ಹಲವು ಹಿರಿಯ ನಾಯಕರುಗಳು ಮುಂದಿನ ದಿನಗಳಲ್ಲಿ ನೇರ ಚುನಾವಣಾ ರಾಜಕೀಯದಲ್ಲಿ ನಿವೃತ್ತಿಗೊಳ್ಳಬೇಕಾದ ಅನಿವಾರ್ಯ ಸಂದರ್ಭ ಒದಗಿ ಬಂದಿದೆ.
ರಾಹುಲ್ ಗಾಂಧಿಯವರ ಈ 70 ವರ್ಷದ ವಯಸ್ಸಿನ ಷರತ್ತು ಅನ್ವಯವಾದರೆ ಕರಾವಳಿ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಸಚಿವ ಬಿ. ರಮಾನಾಥ್ ರೈ, ವಿನಯ್ ಕುಮಾರ್ ಸೊರಕ್ , ಕೆ ಜಯಪ್ರಕಾಶ್ ಹೆಗ್ಡೆ ಹಾಗೂ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಮುಳುವಾಗೋದು ಖಂಡಿತ.
ಆದರೆ ರಾಜ್ಯಸಭೆ ಮತ್ತು ಎಂಎಲ್ಸಿ ಗಳಿಗೆ ಈ ಷರತ್ತು ಅನ್ವಯ ಆಗುವುದಿಲ್ಲ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಯೋಮಾನದ ಬಗ್ಗೆ ರಾಹುಲ್ ಗಾಂಧಿ ಕಟ್ಟುನಿಟ್ಟಾಗಿದ್ದಾರೆ ಹಾಗೂ ಎಲ್ಲಿಯೂ ಯಾರಿಗೂ ಅವಕಾಶ ನೀಡದೆ ಇರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಬದಲಿಗೆ ಪ್ರಿಯಾಂಕ ಖರ್ಗೆ, ಸಿದ್ದರಾಮಯ್ಯನವರ ಬದಲಿಗೆ ಯತೀಂದ್ರ ಸಿದ್ದರಾಮಯ್ಯ ಈ ರೀತಿಯಾಗಿ ಹಿರಿಯ ನಾಯಕರುಗಳನ್ನೇ ಬದಲಾಯಿಸಿ ಮುಂದಿನ ಜನರೇಶನ್ ನಾಯಕರುಗಳಿಗೆ ಹಾಗೂ ಜನರೇಶನ್ ಶಿಫ್ಟ್ ಕಾರ್ಯಕ್ರಮಕ್ಕೆ (Generation shift)ಮಣೆ ಹಾಕಲು ಕಾಂಗ್ರೆಸ್ ಸ್ಪಷ್ಟ ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಹಿರಿಯ ನಾಯಕರುಗಳನ್ನು ರಾಜ್ಯಸಭೆ, ಎಂಎಲ್ಸಿ, ಹಾಗೂ ಪಕ್ಷದ ಇತರ ಕೆಲಸಗಳಿಗೆ ನಿಯೋಜಿಸಲು ಪಕ್ಷ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಹೊಸ ಚುನಾವನೆಯನ್ನು ಎದುರಿಸಲು ಕಿರಿಯ ಪ್ರತಿಭಾವಂತ ಯುವ ನಾಯಕರುಗಳ ಅಗತ್ಯ ಹೆಚ್ಚಿದೆ ಎಂದು ಹೈಕಮಾಂಡಿಗೆ ಈಗ ಮನವರಿಕೆಯಾಗಿದ್ದು ಅದರ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಯುವ ನಾಯಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ವಿಧಾನಸಭೆಯಲ್ಲಿ ಹಾಗೂ ತಮಿಳುನಾಡಿನ ವಿಧಾನಸಭೆಯಲ್ಲಿ ಜಯಗಳಿಸಿದ್ದೆ ಈ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.



