ಬಿಕೆ ಹರಿಪ್ರಸಾದ್‌ಗೆ ಖುಲಾಯಿಸಿದ ಲಕ್‌: ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಸಾರಥಿ ?

ಇಷ್ಟು ದಿನಗಳ ಕಾಲ ಡಿಕೆ ಶಿವಕುಮಾರ್‌ ಅವರು ಮುನ್ನೆಡೆಸಿದ್ದ ಕೆಪಿಸಿಸಿ ಪಟ್ಟ ಇನ್ಮುಂದೆ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ಅವರ ಪಾಲಾಗೋದು ಖಚಿತ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ಹೊಸ ಸರಕಾರ ರಚನೆ ಆಗಿದೆ . ಮೊದಲ ಹಂತದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಸಂಪುಟಕ್ಕೆ ಯಾರೆಲ್ಲಾ ಸೇರ್ತಾರೆ ಅನ್ನುವ ಕುತೂಹಲಕ್ಕೆ  ತೆರೆ ಬಿದ್ದಿದೆ. ಮತ್ತೊಂದೆಡೆ  ಕರ್ನಾಟಕ ಕಾಂಗ್ರೆಸ್‌ ಪಕ್ಷವನ್ನು ಮುನ್ನೆಡೆಸುವವರು ಯಾರು ಅನ್ನೋದು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗ್ತಿದೆ.

ಇಷ್ಟು ದಿನಗಳ ಕಾಲ ಡಿಕೆ ಶಿವಕುಮಾರ್‌ ಅವರು ಮುನ್ನೆಡೆಸಿದ್ದ ಕೆಪಿಸಿಸಿ ಪಟ್ಟ ಇನ್ಮುಂದೆ ಕಾಂಗ್ರೆಸ್‌ ಹಿರಿಯ ನಾಯಕ ಬಿಕೆ ಹರಿಪ್ರಸಾದ್‌ ಅವರ ಪಾಲಾಗೋದು ಖಚಿತ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ  ಶಿವಕುಮಾರ್‌ ನೂತನ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದರು.

ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ತ್ಯೆಜಿಸಲಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕ ಸತೀಶ್‌ ಜಾರಕಿಹೊಳಿ ಅವರ ಹೆಸರು ಕೇಳಿಬಂದಿತ್ತು. ಹೈಕಮಾಂಡ್‌ ಜಾರಕಿಹೊಳಿ ಅವರಿಗೆ ಪಟ್ಟ ಕಟ್ಟೋದಕ್ಕೂ ರೆಡಿ ಆಗಿತ್ತು. ಆದರೆ ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಅಲಂಕರಿಸಬೇಕಾದ್ರೆ ಮಂತ್ರಿ ಸ್ಥಾನವನ್ನೂ ನೀಡಬೇಕು ಅಂತಾ ಪಟ್ಟು ಹಿಡಿದಿದ್ರು.

ಕೇವಲ ಕೆಪಿಸಿಸಿ ಅಧ್ಯಕ್ಷರಾದ್ರೆ ಬೆಳಗಾವಿಯ ಹಿಡಿತ ತಪ್ಪಿ ಹೋಗುತ್ತೆ ಅನ್ನೋದು ಸತೀಶ್‌ ಜಾರಕಿಹೊಳಿ ಅವರ ಲೆಕ್ಕಾಚಾರ. ಇನ್ನು ಡಾ.ಜಿ ಪರಮೇಶ್ವರ್‌ ಅವರು ಡಿಸಿಎಂ ಹುದ್ದೆಗೆ ಡಿಮ್ಯಾಂಡ್‌ ಇಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಯತ್ತ ಹೆಚ್ಚು ಒಲವು ತೋರಲಿಲ್ಲ.

ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಹಿರಿಯ ಕಾಂಗ್ರೆಸ್‌ ನಾಯಕರಾದ ಬಿಕೆ ಹರಿಪ್ರಸಾದ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ನೀಡಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಬಿಕೆ ಹರಿಪ್ರಸಾದ್‌ ಅವರಿಗೆ ಸೂಚನೆ ನೀಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಬಿಕೆ ಹರಿಪ್ರಸಾದ್‌ ಅವರ ಹೆಸರು ರಾಜ್ಯಸಭೆಗೆ ಕೇಳಿಬಂದಿತ್ತು. ರಾಷ್ಟ್ರೀಯ ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಬಿಕೆ ಹರಿಪ್ರಸಾದ್‌ ಅವರು ರಾಜ್ಯಸಭೆಯಲ್ಲಿ ಇರಬೇಕು ಅನ್ನೋ ಮಾತು ಕೇಳಿಬಂದಿತ್ತು. ಆದರೆ ಈಗಾಗಲೇ ವಿಧಾನ ಪರಿಷತ್‌ ಸದಸ್ಯರಾಗಿ ಬಿಕೆ ಹರಿಪ್ರಸಾದ್‌ ಅವರನ್ನು ರಾಜ್ಯ ರಾಜಕಾರಣದಲ್ಲಿಯೇ ಉಳಿಸಬೇಕು ಅನ್ನೋದು ರಾಹುಲ್‌ ಗಾಂಧಿ ಅವರ ಲೆಕ್ಕಾಚಾರ.

Also Read: ಕರ್ನಾಟಕಕ್ಕೆ ಡಿಕೆ ಶಿವಕುಮಾರ್‌ ಸಿಎಂ : ವೀರ ಗಂಗಾಧರ ಅಜ್ಜನ ಹೆಸರಲ್ಲಿ ಪ್ರಮಾಣ ವಚನ

ಗಾಂಧಿ ಪರಿವಾರದ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿರುವ ಬಿಕೆ ಹರಿಪ್ರಸಾದ್‌ ರಾಜ್ಯ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರೂ ಹೌದು. ಅಷ್ಟೇ ಅಲ್ಲಾ ಕರಾವಳಿಯ ಬಿಲ್ಲವ, ಮಲೆನಾಡಿನ ಈಡಿಗ ಸಮುದಾಯ ಪ್ರಭಾವಿ ನಾಯಕರು ಕೂಡ ಆಗಿದ್ದಾರೆ.

ಡಿಕೆ ಶಿವಕುಮಾರ್‌ ಅವರ ಸಂಪುಟದಲ್ಲಿ ಬಿಕೆ ಹರಿಪ್ರಸಾದ್‌ ಅವರು ಗೃಹ ಸಚಿವರಾಗ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೀಗ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಫೈನಲ್‌ ಮಾಡಿದೆ. ಬಿಕೆ ಹರಿಪ್ರಸಾದ್‌ ಅವರು ಕೆಪಿಸಿಸಿ ಅಧ್ಯಕ್ಷರಾದ್ರೆ ಕರಾವಳಿ, ಮಲೆನಾಡು ಮಾತ್ರವಲ್ಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಿಡಿತ ಹೊಂದಿದ್ದಾರೆ.

ಅಷ್ಟೇ ಅಲ್ಲಾ ಕಾಂಗ್ರೆಸ್‌ ಹೈಕಮಾಂಡ್‌ ಜೊತೆಗೂ ಉತ್ತಮ ಒಡನಾಟ ಇರುವುದರಿಂದಲೇ ಕಾಂಗ್ರೆಸ್‌ ಪಕ್ಷ ಸಂಘಟನೆಗೂ ಹೆಚ್ಚು ಸಹಕಾರಿಯಾಗಬಹುದು ಅನ್ನೋದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ.

 

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories