ಕರ್ನಾಟಕದಲ್ಲಿ ಸಾಲ ಮನ್ನಾ : ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಬಂಪರ್ ಗಿಫ್ಟ್ ?

ಕರ್ನಾಟಕದಲ್ಲಿ ಸಣ್ಣ ರೈತರ ಸಾಲ ಮನ್ನಾ ಆಗುತ್ತಾ? ಡಿ.ಕೆ. ಶಿವಕುಮಾರ್ ಅವರ ಹೊಸ ಘೋಷಣೆ ಏನು? ಸಿದ್ದರಾಮಯ್ಯ, ಕುಮಾರಸ್ವಾಮಿ ಅವಧಿಯ ಸಾಲ ಮನ್ನಾ ವಿವರಗಳು ಇಲ್ಲಿವೆ.

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ 6ನೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರು. ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೌಕರ್ಯ ಒದಗಿಸಿದ ಬೆನ್ನಲ್ಲೇ ರೈತರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಲು ಡಿಕೆ ಶಿವಕುಮಾರ್‌ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಂಕಷ್ಟದಲ್ಲಿರುವ ಸಣ್ಣ ರೈತರ ಸಾಲ ಮನ್ನಾ ಮಾಡುವ ಕುರಿತು ಡಿಕೆ ಶಿವಕುಮಾರ್‌ ನೇತೃತ್ವದ ಸರಕಾರ ಗಂಭೀರ ಚಿಂತನೆ ನಡೆಸಿದೆಯಂತೆ.

ತಮಿಳುನಾಡಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸಿಎಂ ವಿಜಯ್‌ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಕರ್ನಾಟಕದಲ್ಲಿಯೂ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕೂಡ ರೈತರ ಸಾಲ ಮನ್ನಾ ಆಗಿರಲಿಲ್ಲ. ಇದೀಗ ಡಿಕೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರೈತರ ವಲಯದಲ್ಲಿ ನಿರೀಕ್ಷೆಗಳು ಗರಿಗದರಿವೆ.

ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ‘ರೈತ ಭಾಗ್ಯ’?

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿರುವ ಡಿ.ಕೆ. ಶಿವಕುಮಾರ್, ಮುಂಗಾರು ಹಂಗಾಮಿನ ಸಿದ್ದತೆಯಲ್ಲಿರುವ ರೈತರ ಸಾಲದ ಹೊರೆಯನ್ನು ಇಳಿಸುವ ಸಲುವಾಗಿ ಯೋಜನೆಯೊಂದನ್ನು ರೂಪಿಸಲಿದೆಯಂತೆ. ಹಾಗಾದ್ರೆ ಡಿಕೆ ಶಿವಕುಮಾರ್‌ ಸಾಲ ಮನ್ನಾ ಯೋಜನೆಗೆ ಜಾರಿಗೆ ತಂದ್ರೆ ಯಾರಿಗೆಲ್ಲ ಲಾಭವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸಾಲ ಮನ್ನಾ ಯೋಜನೆ ಯಾವ ರೈತರಿಗೆ ಲಾಭ ?

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (PACS) ಸಾಲ ಪಡೆದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡಲಾಗುತ್ತಿದ್ದು, ಪ್ರತೀ ರೈತರ ಕುಟುಂಬಳಿಗೆ ತಲಾ 1 ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಆಗುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ಜೊತೆಗೆ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ರೈತರಿಗೆ ಮರು ಸಾಲ ಪಡೆಯಲು ಅನುಕೂಲ ಕಲ್ಪಿಸುವುದು ಸರಕಾರದ ಉದ್ದೇಶವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಶುರು ವರುಣನ ಮಹಾಆರ್ಭಟ : ನಾಳೆಯಿಂದ ರಾಜಧಾನಿ ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳು ಯಾರ್ಯಾರು ?

ಕರ್ನಾಟಕ ರಾಜ್ಯದಲ್ಲಿ ಆರಂಭದಿಂದಲೂ ಸಾಲ ಮನ್ನಾ ಯೋಜನೆ ಜಾರಿಗೆ ತರಲಾಗುತ್ತಿದೆ. ಅದ್ರಲ್ಲೂ ಚುನಾವಣಾ ಪ್ರನಾಳಿಕೆಯಲ್ಲಿಯೇ ರೈತರ ಸಾಲ ಮನ್ನಾ ಅನ್ನೋದು ಪ್ರಮುಖ ಅಸ್ತ್ರವಾಗಿತ್ತು. ಕರ್ನಾಟಕದಲ್ಲಿ ಯಾವ ಸಿಎಂ ಎಷ್ಟು ಕೋಟಿ ಸಾಲ ಮನ್ನಾ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

  • ಎಸ್. ಬಂಗಾರಪ್ಪ ಅವರು 1990-92ರಲ್ಲಿ ₹2,500 ಕೋಟಿ ಸಾಲ ಮನ್ನ ಮಾಡಿದ್ದರು. ಇದು ಕರ್ನಾಟಕದ ಇತಿಹಾಸದ ಮೊಲದ ಸಾಲ ಮನ್ನಾ ಆಗಿತ್ತು.
  • ಎಸ್.ಎಂ. ಕೃಷ್ಣ ಅವರು 1999-2004 ರಲ್ಲಿ ₹550 ಕೋಟಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದರು. ಬರಗಾಲದ ಕಾರಣದಿಂದಾಗಿ ಬಡ್ಡಿ ಮನ್ನಾ ಮಾಡಲಾಗಿತ್ತು.
  • ಜಗದೀಶ್ ಶೆಟ್ಟರ್ ಅವರು 2012-13ರ ಸಾಲಿನಲ್ಲಿ ₹3,500 ಕೋಟಿ ಸಾಲ ಮನ್ನಾ ಮಾಡಿದ್ದು, ಇದರಲ್ಲಿ ₹25,000 ವರೆಗಿನ ಅಲ್ಪಾವಧಿ ಸಾಲ ಮನ್ನಾ ಆಗಿತ್ತು.
  • ಸಿದ್ದರಾಮಯ್ಯ ಅವರು 2017-18ರ ಸಾಲಿನಲ್ಲಿ 8,165 ಕೋಟಿ ಸಾಲ ಮನ್ನಾ ಮಾಡಿದ್ದು, ಇದರಲ್ಲಿ 22.27 ಲಕ್ಷ ರೈತರ ತಲಾ ₹50,000 ವರೆಗಿನ ಸಾಲ ಮನ್ನಾ ಆಗಿತ್ತು.
  • ಎಚ್.ಡಿ. ಕುಮಾರಸ್ವಾಮಿ ಅವರು 2018-19 ಅವರು ಬರೋಬ್ಬರಿ 45,000 ಕೋಟಿ ಸಾಲ ಮನ್ನಾ ಮಾಡಿದ್ದರು. ಇದರಲ್ಲಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಎರಡನ್ನೂ ಸೇರಿದಂತೆ ಒಟ್ಟು ₹2 ಲಕ್ಷ ರೂಪಾಯಿವರೆಗಿನ ರೈತರ ಸಾಲ ಮನ್ನಾ ಆಗಿತ್ತು.
  • ಬಿಎಸ್‌ ಯಡಿಯೂರಪ್ಪ ಅವರು 2019 -20ನೇ ಸಾಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಘೋಷಣೆ ಆಗಿದ್ದ ಬಾಕಿ ಇದ್ದ ಸಾಲ ಮನ್ನಾ ಮೊತ್ತಕ್ಕೆ ಅನುದಾನ ನೀಡುವ ಮೂಲಕ ಸಾಲ ಮನ್ನಾಕ್ಕೆ ಸಾಥ್‌ ಕೊಟ್ಟಿದ್ದರು.

2018ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಘೋಷಿಸಿದ ಸಾಲ ಮನ್ನಾ ಯೋಜನೆಯು ದೇಶದಲ್ಲೇ ಅತಿ ದೊಡ್ಡ ರಾಜ್ಯಮಟ್ಟದ ಸಾಲ ಮನ್ನಾ ಯೋಜನೆಗಳಲ್ಲಿ ಒಂದಾಗಿತ್ತು. ಕಳೆದ 15 ವರ್ಷಗಳಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರಗಳು ಬರೋಬ್ಬರಿ ₹65,000 ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡಿವೆ.

ಇದನ್ನೂ ಓದಿ : BK Hariprasad KPCC President: ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್‌ ನೇಮಕ : ಹೈಕಮಾಂಡ್ ಮಾಸ್ಟರ್ ಪ್ಲಾನ್ ಏನು?

ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿರುವ ಡಿ.ಕೆ. ಶಿವಕುಮಾರ್ ಅವರು ಸಣ್ಣ ರೈತರಿಗೆ ಕನಿಷ್ಠ ₹1 ಲಕ್ಷ ಸಾಲ ಮನ್ನಾ ಅಥವಾ ಬಡ್ಡಿ ರಹಿತ ಸಾಲದ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. 2026-27ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, “ಶೂನ್ಯ ಬಡ್ಡಿ ಸಾಲ” ಯೋಜನೆಯನ್ನು ಮತ್ತಷ್ಟು ಬಲ ಪಡಿಸುವ ಸಾಧ್ಯತೆಯಿದೆ.

  waiver CM dk shivakumar news

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories