ಆರ್‌ಸಿಬಿ ಸೇರ್ತಾರಾ ವೈಭವ್ ಸೂರ್ಯವಂಶಿ ? IPL 2027 ಹರಾಜಿನ ನಿಯಮಗಳೇನು?

ಐಪಿಎಲ್‌ ಒಂದೇ ಸೀಸನ್‌ನಲ್ಲಿ 776ರನ್‌ ಬಾರಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದಾನೆ. ಇಂತಹ ಆಟಗಾರ ಮುಂದಿನ ವರ್ಷರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಬಹುದೇ ? ಆರ್‌ಸಿಬಿ ಇವರನ್ನು ಖರೀದಿಸೋದಕ್ಕೆ ಸಾಧ್ಯವೇ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ.

IPL 2027 Vaibhav suryavanshi : ಬೆಂಗಳೂರು: ಭಾರತೀಯ ಕ್ರಿಕೆಟ್‌ನ ವಂಡರ್‌ ಕಿಡ್, ಬಿಹಾರದ ಯುವ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್‌ ಜಗತ್ತಿನಲ್ಲೇ ಹೊಸ ಟ್ರೆಂಡ್‌ ಸೃಷ್ಟಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಈತ ಅಬ್ಬರಿಸಿದ ಪರಿಗೆ ಇಡೀ ಕ್ರಿಕೆಟ್‌ ಲೋಕ ನಿಬ್ಬೆರಗಾಗಿದೆ.

ಐಪಿಎಲ್‌ ಒಂದೇ ಸೀಸನ್‌ನಲ್ಲಿ 776ರನ್‌ ಬಾರಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದಾನೆ. ಇಂತಹ ಆಟಗಾರ ಮುಂದಿನ ವರ್ಷರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಬಹುದೇ ? ಆರ್‌ಸಿಬಿ ಇವರನ್ನು ಖರೀದಿಸೋದಕ್ಕೆ ಸಾಧ್ಯವೇ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಐಪಿಎಲ್‌ 2027ರ ನಿಮಯ ಸೂರ್ಯವಂಶಿ ಆರ್‌ಸಿಬಿ ಸೇರೋದಕ್ಕೆ ತೊಡಕಾಗುತ್ತಾ ಅನ್ನೋ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ವೈಭವ್‌ ಸೂರ್ಯವಂಶಿ ಆರ್‌ಸಿಬಿ ಸೇರುವುದಕ್ಕೆ ಸಾಧ್ಯವೇ ?

ಸತತ ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಮುಡುಗೇರಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಪರ ಕಣಕ್ಕೆ ಇಳಿದು ರನ್‌ ಹೊಳೆಯನ್ನೇ ಹರಿಸಿರುವ ಸ್ಪೋಟಕ ಯುವ ಆಟಗಾರ ವೈಭವ್‌ ಸೂರ್ಯವಂಶಿ ಬೆಂಗಳೂರು ಜನರ ಅಭಿಮಾನಕ್ಕೆ ಫಿದಾ ಆಗಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2027ರಲ್ಲಿ ವೈಭವ್‌ ಆರ್‌ಸಿಬಿ ತಂಡದ ಪರವಾಗಿ ಆಡಬೇಕು ಅನ್ನೋ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಐಪಿಎಲ್‌ 2027ರಲ್ಲಿ ವೈಭವ್‌ ಸೂರ್ಯವಂಶಿ ಆರ್‌ಸಿಬಿ ತಂಡದ ಪರವಾಗಿ ಆಡುವುದು ಅಷ್ಟು ಸುಲಭವಲ್ಲ. ಯಾಕೆಂದ್ರೆ ವೈಭವ್‌ ಸೂರ್ಯವಂಶಿ ಸದ್ಯ ರಾಜಸ್ಥಾನ್‌ ರಾಯಲ್ಸ್‌ ತಂಡ ಭಾಗವಾಗಿದ್ದಾರೆ. 2025ರ ಐಪಿಎಲ್‌ ಹರಾಜಿನಲ್ಲಿ ವೈಭವ್‌ ಸೂರ್ಯವಂಶಿ 1.10 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

ಅದ್ರಲ್ಲೂ ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ಸ್ ಪರ ಅವರು ನೀಡಿದ‌ ಅವರ ಆಟದ (237ಕ್ಕೂ ಹೆಚ್ಚು ಸ್ಟ್ರೈಕ್ ರೇಟ್, 72 ಸಿಕ್ಸರ್ಸ್) ಬಳಿಕ, ರಾಜಸ್ಥಾನ ರಾಯಲ್ಸ್‌ ತಂಡ ಇವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಯಾವುದೇ ಸಾಧ್ಯತೆ ಇಲ್ಲ. ಒಂದೊಮ್ಮೆ ಆರ್‌ಸಿಬಿಗೆ ವೈಭವ್‌ ಸೂರ್ಯವಂಶಿ ಅವರನ್ನು ಖರೀದಿಸುವ ಆಸೆ ಇದ್ದರೂ ಕೂಡ ರಾಜಸ್ಥಾನ ಪ್ರಾಂಚೈಸಿ ಇವರನ್ನು ರಿಲೀಸ್‌ ಮಾಡಬೇಕಾಗಿದೆ. ಮುಂದಿನ ವರ್ಷದ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡ್ರೆ ಮಾತ್ರವೇ ಇವರನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿದೆ.

ಐಪಿಎಲ್‌ 2027ರ ನಿಯಮಗಳೇನು ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಂದಿನ ವರ್ಷ ಮೆಗಾ ಹರಾಜು (Mega Auction) ಇರುವುದಿಲ್ಲ, ಬದಲಾಗಿ ಮಿನಿ ಹರಾಜು (Mini Auction) ಮಾತ್ರ ನಡೆಯುತ್ತದೆ. ತಂಡಗಳು ತಮಗೆ ಸರಿ ಹೊಂದದ ಆಟಗಾರರನ್ನು ರಿಲೀಸ್‌ ಮಾಡುವುದಕ್ಕೆ ಅವಕಾಶವಿದೆ. ಆದರೆ ವೈಭವ್‌ ಸೂರ್ಯವಂಶಿ ರಾಯಸ್ಥಾನ ರಾಯಲ್ಸ್‌ ತಂಡ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

  • ರಾಜಸ್ಥಾನ್ ರಾಯಲ್ಸ್ ರಿಲೀಸ್‌ ಮಾಡುತ್ತಾ ? : ಫ್ರಾಂಚೈಸಿಯೇ ಇವರನ್ನು ತಂಡದಿಂದ ಕೈಬಿಟ್ಟರೆ ಮಾತ್ರ ಇವರು ಹರಾಜಿಗೆ ಬರಬಹುದು (ಆದರೆ ಈ ಸಾಧ್ಯತೆ ಶೂನ್ಯ).
  • ಆಟಗಾರನೇ ಬಯಸಿದ್ರೆ ಮಾತ್ರವೇ ಹರಾಜು : ಸ್ವತಃ ವೈಭವ್ ಸೂರ್ಯವಂಶಿ ಅವರೇ ತಮಗೆ ಹೆಚ್ಚಿನ ಸಂಭಾವನೆ ಬೇಕು ಅಥವಾ ಬೇರೆ ತಂಡಕ್ಕೆ ಹೋಗಬೇಕು ಎಂದು ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಿ ಒಪ್ಪಂದದಿಂದ ಹೊರಬಂದರೆ ಮಾತ್ರ ಮಿನಿ ಹರಾಜಿಗೆ ಹೆಸರು ನೋಂದಾಯಿಸಬಹುದು.
  • ಟ್ರೇಡಿಂಗ್ ವಿಂಡೋ (Trading Window): ಹರಾಜಿನ ಹೊರತಾಗಿ, ಆರ್‌ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ಜೊತೆ ನೇರವಾಗಿ ಮಾತುಕತೆ ನಡೆಸಿ ಹಣ ಅಥವಾ ಬೇರೆ ಆಟಗಾರನ ಬದಲಿಗೆ (Player Swap) ಸೂರ್ಯವಂಶಿಯನ್ನು ಟ್ರೇಡ್ ಮಾಡಿಕೊಳ್ಳಬಹುದು.

ಆರ್‌ಸಿಬಿ ಸೂರ್ಯವಂಶಿ ಖರೀದಿ ಮಾಡುವುದಕ್ಕೆ ಸಾಧ್ಯತೆ ಇದೆಯಾ?

ಐಪಿಎಲ್‌ 2027ರ ಸೀಸನ್‌ನಲ್ಲೇ ಆರ್‌ಸಿಬಿ ಇವರನ್ನು ಖರೀದಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಯಾಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಸೂರ್ಯವಂಶಿಯನ್ನು ತಮ್ಮ ತಂಡದ ಭವಿಷ್ಯದ “ಪೋಸ್ಟರ್ ಬಾಯ್” (Poster Boy) ಆಗಿ ನೋಡುತ್ತಿದೆ. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹೇಗೆಯೋ, ರಾಜಸ್ಥಾನ್‌ಗೆ ಸೂರ್ಯವಂಶಿ ಹಾಗೆ ದೀರ್ಘಕಾಲ ಉಳಿಯುವ ಎಲ್ಲ ಲಕ್ಷಣಗಳಿವೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅವರು ಹರಾಜಿಗೆ ಬಂದರೆ, ಅವರ ಮೇಲಿನ ಬಿಡ್ಡಿಂಗ್ ವಾರ್ 30 ರಿಂದ 40 ಕೋಟಿ ದಾಟಿದರೂ ಅಚ್ಚರಿಯಿಲ್ಲ. ಅಂತಹ ಸಂದರ್ಭದಲ್ಲಿ ಆರ್‌ಸಿಬಿ ದೊಡ್ಡ ಮೊತ್ತದ ಹಣವನ್ನು ಇವರಿಗಾಗಿ ಎತ್ತಿಡಬೇಕಾಗುತ್ತದೆ.

ಸದ್ಯಕ್ಕಂತೂ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ನಲ್ಲೇ ಮುಂದುವರಿಯಲಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಇವರನ್ನು ನಮ್ಮ ತಂಡದಲ್ಲಿ ನೋಡಬೇಕು ಎಂದು ಆಸೆಪಡುತ್ತಿರುವುದು ನಿಜವಾದರೂ, ಅದಕ್ಕೆ ಇನ್ನೂ ಕೆಲವು ವರ್ಷಗಳು ಕಾಯಬೇಕಾಗಬಹುದು ಅಥವಾ ಅದ್ಭುತ ಟ್ರೇಡಿಂಗ್ ನಡೆಯಬೇಕಾಗುತ್ತದೆ.

rcb target Vaibhav suryavanshi ipl 2027 auction rules

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories