ಕಾರ್ಕಳ: ವಾಟ್ಸಾಪ್‌ನಲ್ಲಿ ಆರ್‌ಟಿಒ ಪಿಡಿಎಫ್‌ ಓಪನ್, ಬ್ಯಾಂಕ್‌ ಖಾತೆಯಿಂದ ₹5.63 ಲಕ್ಷ ಕನ್ನ

ಆರ್‌ಟಿಒ (RTO) ಹೆಸರಿನಲ್ಲಿ ವಾಟ್ಸಾಪ್‌ಗೆ ಬಂದ ನಕಲಿ ಪಿಡಿಎಫ್ ಸಂದೇಶವೊಂದನ್ನು ಓಪನ್‌ ಮಾಡಿದ ತಪ್ಪಿಗೆ ಬರೋಬ್ಬರಿ 5.63 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

  • ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು
  • ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಹಣ ಲೂಟಿ
  • ಸಾರ್ವಜನಿಕರೇ, ವಾಟ್ಸಾಪ್‌ಗೆ ಬರುವ ಅಪರಿಚಿತ ಲಿಂಕ್, PDF ಗಳ ಬಗ್ಗೆ ಇರಲಿ ಎಚ್ಚರ!

ಕಾರ್ಕಳ: ಆರ್‌ಟಿಒ (RTO) ಹೆಸರಿನಲ್ಲಿ ವಾಟ್ಸಾಪ್‌ಗೆ ಬಂದ ನಕಲಿ ಪಿಡಿಎಫ್ ಸಂದೇಶವೊಂದನ್ನು ಓಪನ್‌ ಮಾಡಿದ ತಪ್ಪಿಗೆ ಬರೋಬ್ಬರಿ 5.63 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ ವಾಸುದೇವ ಎಂಬುವವರ ವಾಟ್ಸಾಪ್‌ ಸಂಖ್ಯೆಗೆ ಜೂನ್ 4 ರಂದು ಅಪರಿಚಿತ ಸಂಖ್ಯೆಯಿಂದ ಆರ್‌ಟಿಒ ಹೆಸರಿನ ಪಿಡಿಎಫ್‌ (PDF) ಫೈಲ್ ಒಂದು ಬಂದಿತ್ತು. ಆರ್‌ಟಿಒ ಅಧಿಕಾರಿಗಳು ಕಳುಹಿಸಿದ ಸಂದೇಶ ಇರಬೇಕು ಎಂದು ವಾಸುದೇವ ಅವರು ಮೆಸೇಜ್‌ ಓಪನ್‌ ಮಾಡಲು ಯತ್ನಿಸಿದ್ದಾರೆ. ಆದರೆ ಪಿಡಿಎಫ್‌ ಓಪನ್‌ ಆಗಿಲ್ಲ, ಬದಲಾಗಿ ವಾಸುದೇವ ಅವರ ಮೊಬೈಲ್‌ ಸಂಖ್ಯೆಗೆ ಸರಣಿ ಒಟಿಪಿಗಳು ಬರಲಾರಂಭಿಸಿತ್ತು.

Also Read : ಕಾಪು: ಹೆಂಡತಿಯನ್ನು ರೂಮಿನಲ್ಲಿ ಕೂಡಿ ಹಾಕಿ ನಾದಿನಿಯಿಂದ ಚೂರಿ ಇರಿತ ! ಗಂಡನಿಂದಲೂ ಕ್ರೌರ್ಯ

ಇದಾದ ಕೆಲವೇ ನಿಮಿಷಗಳಲ್ಲಿ ವಾಸುದೇವ ಅವರ ಕಾರ್ಕಳದ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ 5,63,117/- (ಐದು ಲಕ್ಷದ ಅರವತ್ತಮೂರು ಸಾವಿರದ ನೂರ ಹದಿನೇಳು) ಹಣ ವಂಚಕರ ಖಾತೆಗೆ ವರ್ಗಾವಣೆಗೊಂಡಿತ್ತು. ವಾಸುದೇವ ಅವರು ತಾವು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರ್ಕಳ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read : ಕುಂದಾಪುರ: ಸತ್ತವರು ಬಂದು ಸಹಿ ಹಾಕಿದ್ರಾ ? ನಕಲಿ ಪಾನ್ ಕಾರ್ಡ್ ಸೃಷ್ಟಿಸಿ GPA ವಂಚನೆ; 6 ಮಂದಿ ವಿರುದ್ದ ಕ್ರಿಮಿನಲ್ ಪ್ರಕರಣ

News Next ಜಾಗೃತಿ – ಮೊಬೈಲ್ ಬಳಕೆದಾರರೇ ಎಚ್ಚರ

ಇತ್ತೀಚಿನ ದಿನಗಳಲ್ಲಿ ಆರ್‌ಟಿಒ ಚಲನ್, ಎಲೆಕ್ಟ್ರಿಸಿಟಿ ಬಿಲ್ ಬಾಕಿ ಅಥವಾ ಕೊರಿಯರ್ ಪಾರ್ಸೆಲ್ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ನಕಲಿ ಪಿಡಿಎಫ್ (.pdf) ಅಥವಾ ಅಪ್ಲಿಕೇಶನ್ ಫೈಲ್‌ಗಳನ್ನು (.apk) ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದೆ. ಅಪರಿಚಿತ ನಂಬರ್‌ಗಳಿಂದ ಬರುವ ಇಂತಹ ಯಾವುದೇ ಫೈಲ್‌ಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಸೈಬರ್ ವಂಚನೆ ಸಂಭವಿಸಿದರೆ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿ.

karkala union bank Krto WhatsApp pdf scam Udupi crime news

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories