ಭಾರತದ ಬೆಳವಣಿಗೆಗೆ ಮತ್ತೊಂದು ಗರಿ : ಶೇ.7.7 ಜಿಡಿಪಿ ಸಾಧನೆಗೆ ಮೋದಿ ಹರ್ಷ

ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣ ಹಾಗೂ ಆರ್ಥಿಕ ಏರುಪೇರುಗಳಂತಹ ತೀವ್ರ ಸವಾಲುಗಳಿದ್ದಾಗ್ಯೂ ಭಾರತದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟು ದೇಶೀಯ ಉತ್ಪನ್ನದ ಪ್ರಗತಿ ದರವು 2025-26ರ ಹಣಕಾಸು ವರ್ಷದಲ್ಲಿ ಶೇ. 7.7ರಷ್ಟು ದಾಖಲೆಯ ಬೆಳವಣಿಗೆಯನ್ನು ಕಾಣುವ ಮೂಲಕ ವಿಶ್ವದ ಗಮನ ಸೆಳೆದಿದೆ.

ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣ ಹಾಗೂ ಆರ್ಥಿಕ ಏರುಪೇರುಗಳಂತಹ ತೀವ್ರ ಸವಾಲುಗಳಿದ್ದಾಗ್ಯೂ ಭಾರತದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟು ದೇಶೀಯ ಉತ್ಪನ್ನದ ಪ್ರಗತಿ ದರವು 2025-26ರ ಹಣಕಾಸು ವರ್ಷದಲ್ಲಿ ಶೇ. 7.7ರಷ್ಟು ದಾಖಲೆಯ ಬೆಳವಣಿಗೆಯನ್ನು ಕಾಣುವ ಮೂಲಕ ವಿಶ್ವದ ಗಮನ ಸೆಳೆದಿದೆ. ಕಳೆದ 2024-25ರ ಸಾಲಿನಲ್ಲಿ ದಾಖಲಾಗಿದ್ದ ಶೇ. 7.1ರ ಪ್ರಗತಿಗಿಂತ ಇದು ಗಣನೀಯವಾಗಿ ಹೆಚ್ಚಾಗಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶಗಳ ಪ್ರಕಾರ, 2025-26ರ ಹಣಕಾಸು ವರ್ಷದ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಬರೋಬ್ಬರಿ ಶೇ. 7.8ಕ್ಕೆ ತಲುಪಿದೆ. ಈ ಭರ್ಜರಿ ತ್ರೈಮಾಸಿಕ ಪ್ರಗತಿಯು ಇಡೀ ವರ್ಷದ ಒಟ್ಟಾರೆ ಆರ್ಥಿಕ ಮುನ್ನಡೆಗೆ ಪ್ರಮುಖ ಇಂಧನವಾಗಿ ಕೆಲಸ ಮಾಡಿದೆ. ದೇಶದ ಈ ಬಲಿಷ್ಠ ಆರ್ಥಿಕ ಮುನ್ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ಇದು ಭಾರತದ ಸದೃಢ ಆರ್ಥಿಕತೆಯ ಸಂಕೇತ ಎಂದಿದ್ದಾರೆ.

Also Read : ಕುಟುಂಬ ಕಲಹಕ್ಕೆ 7 ಜೀವ ಬಲಿ! ಅಮೆರಿಕದಲ್ಲಿ ನಡೆಯಿತು ಭೀಕರ ಶೂಟೌಟ್

ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ದೇಶದಲ್ಲಿ ‘ಪಾಲಿಮರ್’ ತಂತ್ರಜ್ಞಾನ ಆಧಾರಿತ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಮಹತ್ವದ ಪ್ರಸ್ತಾಪವೊಂದು ಕೇಂದ್ರ ಬ್ಯಾಂಕ್‌ನ ಮುಂದಿದೆ.

ಈ ಕುರಿತು ಮುಂಬೈನಲ್ಲಿ ಪ್ರತಿಕ್ರಿಯಿಸಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಪ್ಲಾಸ್ಟಿಕ್ ನೋಟುಗಳ ಚಲಾವಣೆಗೆ ತರುವ ಮುನ್ನ ಅದರ ಸಾಧಕ-ಬಾಧಕಗಳು ಹಾಗೂ ತಾಂತ್ರಿಕ ಸವಾಲುಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವ್ಯವಸ್ಥೆ ಜಾರಿಗೆ ಬಂದರೆ ನೋಟುಗಳ ಬಾಳಿಕೆ ಹೆಚ್ಚಲಿದ್ದು, ಖೋಟಾನೋಟು ದಂಧೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Another feather in Indias growth Modi happy with GDP achievement

 

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories