ಉಚಿತ ಬಸ್ ಪ್ರಯಾಣ ಬೆನ್ನಲ್ಲೇ ವಿದ್ಯಾರ್ಥಿಗಳಿಂದ ಹೊಸ ಬೇಡಿಕೆ : ಮೆಟ್ರೋ ಪ್ರಯಾಣದಲ್ಲಿ ರಿಯಾಯಿತಿಗೆ ಸ್ಟೂಡೆಂಟ್ಸ್ ಮನವಿ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿ ಸಮೂಹಕ್ಕೆ ಉಚಿತ ಬಸ್ ಪಾಸ್ ಭರ್ಜರಿ ಕೊಡುಗೆ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ, ಇದೀಗ ಸಿಲಿಕಾನ್ ಸಿಟಿಯ ಕಾಲೇಜು ವಿದ್ಯಾರ್ಥಿಗಳು ಮತ್ತೊಂದು ಹೈಟೆಕ್ ಬೇಡಿಕೆಯನ್ನು ಇಟ್ಟಿದ್ದಾರೆ. ರಸ್ತೆ ಸಾರಿಗೆಯ ಉಚಿತ ಪ್ರಯಾಣದ ಬೆನ್ನಲ್ಲೇ, 'ನಮ್ಮ ಮೆಟ್ರೋ' ಸಾರಿಗೆಯಲ್ಲೂ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದ ಪಾಸ್ ವ್ಯವಸ್ಥೆ ತರಬೇಕು ಎಂಬ ಹೊಸದೊಂದು ಮನವಿ ಸಲ್ಲಿಕೆಯಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿ ಸಮೂಹಕ್ಕೆ ಉಚಿತ ಬಸ್ ಪಾಸ್ ಭರ್ಜರಿ ಕೊಡುಗೆ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ, ಇದೀಗ ಸಿಲಿಕಾನ್ ಸಿಟಿಯ ಕಾಲೇಜು ವಿದ್ಯಾರ್ಥಿಗಳು ಮತ್ತೊಂದು ಹೈಟೆಕ್ ಬೇಡಿಕೆಯನ್ನು ಇಟ್ಟಿದ್ದಾರೆ. ರಸ್ತೆ ಸಾರಿಗೆಯ ಉಚಿತ ಪ್ರಯಾಣದ ಬೆನ್ನಲ್ಲೇ, ‘ನಮ್ಮ ಮೆಟ್ರೋ’ ಸಾರಿಗೆಯಲ್ಲೂ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದ ಪಾಸ್ ವ್ಯವಸ್ಥೆ ತರಬೇಕು ಎಂಬ ಹೊಸದೊಂದು ಮನವಿ ಸಲ್ಲಿಕೆಯಾಗಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸಮಯದ ಉಳಿತಾಯಕ್ಕಾಗಿ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಮೆಟ್ರೋ ರೈಲುಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ದೈನಂದಿನ ಪ್ರಯಾಣದ ವೆಚ್ಚ ಪೋಷಕರಿಗೆ ಹೊರೆಯಾಗುತ್ತಿರುವುದರಿಂದ, ವಿದ್ಯಾರ್ಥಿ ಹಿತದೃಷ್ಟಿಯಿಂದ ಈ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗಿದೆ.
ಸಿಎಂ ಡಿ.ಕೆ ಶಿವಕುಮಾರ್ಗೆ ಬೆಂಗಳೂರಿನ ವಿದ್ಯಾರ್ಥಿಗಳು ಸಲ್ಲಿಕೆ ಮಾಡಿರುವ ಮನವಿ ಪತ್ರದಲ್ಲಿ, ಮೆಟ್ರೋ ಸಾರಿಗೆಗೆ ತಮಗೆ ಬಿಎಂಟಿಸಿಯಂತೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯ ಬೇಡ, ಬದಲಿಗೆ ಕನಿಷ್ಠ ದರದಲ್ಲಿ ಪ್ರಯಾಣಿಸಲು ವಿದ್ಯಾರ್ಥಿ ಪಾಸ್ ನೀಡಿದರೆ ಸಾಕು ಎಂದು ವಿದ್ಯಾರ್ಥಿಗಳು ಆಶಿಸಿದ್ದಾರೆ.
ಮೆಟ್ರೋದಲ್ಲಿ ರಿಯಾಯಿತಿ ಪಾಸ್ ಸಿಕ್ಕರೆ, ಬಹುತೇಕ ವಿದ್ಯಾರ್ಥಿಗಳು ತಮ್ಮ ಖಾಸಗಿ ದ್ವಿಚಕ್ರ ವಾಹನಗಳ ಬಳಕೆಯನ್ನು ಕೈಬಿಡುತ್ತಾರೆ. ಇದರಿಂದ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ಗಣನೀಯವಾಗಿ ತಗ್ಗಲಿದೆ. ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ ಮೆಟ್ರೋ ಸಂಚಾರ ಅತ್ಯಂತ ಸುರಕ್ಷಿತವಾಗಿದ್ದು, ವಿದ್ಯಾರ್ಥಿಗಳ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಬಹುದು. ಇದರೊಂದಿಗೆ, ಮೆಟ್ರೋ ಪ್ರಯಾಣವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗೆ ಪೂರಕವಾಗಿದೆ ಎಂಬ ಐಐಎಸ್‌ಸಿ ವರದಿಯನ್ನು ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸದ್ಯ ರಾಜ್ಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಸಿದ್ಧತೆಗಳು ಸಾರಿಗೆ ಇಲಾಖೆಯಲ್ಲಿ ಬಿರುಸಿನಿಂದ ಸಾಗುತ್ತಿವೆ. ಇದರ ಮಧ್ಯೆ ಬೆಂಗಳೂರಿನ ವಿದ್ಯಾರ್ಥಿಗಳ ಹಿತ ಕಾಯಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಮೆಟ್ರೋ ಪ್ರಯಾಣದಲ್ಲೂ ವಿನಾಯಿತಿ ನೀಡುವ ಈ ಮತ್ತೊಂದು “ಗುಡ್ ನ್ಯೂಸ್” ಪ್ರಕಟಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
New demand from students after free bus travel Students request for discount on metro travel



