ಟಾಟಾ ಕರ್ವ್‌ ಇವಿ ಖರೀದಿಗೆ ಬಂಪರ್‌ ಆಫರ್‌ : ಜೂನ್‌ನಲ್ಲಿ ಬುಕ್‌ ಮಾಡಿದ್ರೆ ಮೂರುವರೆ ಲಕ್ಷದವರೆಗೆ ಉಳಿತಾಯ

ಟಾಟಾ ಮೋಟಾರ್ಸ್‌ ತನ್ನ ಇವಿ ವಾಹನಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. ಅದರಲ್ಲೂ ಕರ್ವ್‌ ಇವಿ ಮೇಲೆ ಮೂರುವರೆ ಲಕ್ಷದವರೆಗೆ ರಿಯಾಯಿತಿ ಘೋಷಿಸಿದೆ. ನೀವು ಇವಿ ಖರೀದಿಸುವ ಯೋಜನೆಯಿದ್ದರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ.

ಭಾರತದ ರಸ್ತೆಗಳ ಮೇಲೆ ಎಲೆಕ್ಟ್ರಿಕ್‌ ವಾಹನಗಳ ಪ್ರಾಬಲ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಸಿದ್ಧ ಆಟೊಮೊಬೈಲ್‌ ಕಂಪನಿಗಳೆಲ್ಲ ಶಕ್ತಿಶಾಲಿ ಇವಿಗಳನ್ನು ಬಿಡುಗಡೆ ಮಾಡುತ್ತಿವೆ. ಅವುಗಳಲ್ಲಿ ದೇಶಿ ಕಾರುತಯಾರಕ ಕಂಪನಿ ಟಾಟಾ ಮೋಟಾರ್ಸ್‌ ಕೂಡಾ ಹಿಂದೆ ಬಿದ್ದಿಲ್ಲ. ಅದು ಕೂಡಾ ಆಟೋ ಮಾರುಕಟ್ಟೆಯಲ್ಲಿ ತನ್ನ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಟಾಟಾದ ಪಂಚ್‌, ಟಿಯಾಗೊ, ನೆಕ್ಸಾನ್‌, ಹ್ಯಾರಿಯರ್‌ ಮತ್ತು ಕರ್ವ್‌ ಹೀಗೆ ಜನಪ್ರಿಯ ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದೆ. ಇದೀಗ ಟಾಟಾ ಜೂನ್‌ ತಿಂಗಳ ಖರೀದಿಗೆ ಅವುಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. ಇದು ತನ್ನ ಎಲ್ಲ ಮಾದರಿಯ ಕಾರುಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಅವುಗಳಲ್ಲಿ ಟಾಟಾ ಕರ್ವ್‌ಗೆ ಅತಿ ಹೆಚ್ಚಿನ ರಿಯಾಯಿತಿ ನೀಡಿದೆ. ನೀವು ಇವಿ ಕಾರು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಟಾಟಾ ಕರ್ವ್‌ ಇವಿ ನಿಮಗೆ ಹೆಚ್ಚಿನ ಪ್ರಯೋಜನ ನೀಡುವ ಸಾಧ್ಯತೆಯಿದೆ.

ಟಾಟಾ ಕರ್ವ್‌ ಇವಿಗೆ ಇಷ್ಟೆಲ್ಲಾ ರಿಯಾಯಿತಿ ಹೇಗೆ?

ಟಾಟಾ ಜೂನ್‌ 2026 ರಲ್ಲಿ ತನ್ನ ಎಲೆಕ್ಟ್ರಿಕ್‌ ವಾಹನಗಳ ಮೇಲೆ 65,000 ರೂ. ದಿಂದ 3.50 ಲಕ್ಷ ರೂ.ಗಳವರೆಗಿನ ಆಫರ್‌ ನೀಡಿದೆ. ಹೇಗೆಂದರೆ ವಿತರಕರ ಪ್ರಕಾರ ಈ ಕೊಡುಗೆಗಳಲ್ಲಿ ಗ್ರೀನ್‌ ಬೋನಸ್‌, ವಿನಿಮಯ ಬೋನಸ್‌ ಸ್ಕ್ರ್ಯಾಪೇಜ್‌ ಬೋನಸ್‌, ಲಾಯಲ್ಟಿ ಬೋನಸ್‌ ಮತ್ತು ಇತರೆ ವಿಶೇಷ ಪ್ರಯೋಜನಗಳು ಸೇರಿವೆ. ಸದ್ಯ ಜೂನ್‌ ತಿಂಗಳ ಖರೀದಿಯಲ್ಲಿ ಟಾಟಾ ಕರ್ವ್‌ ಇವಿಗೆ ಹೆಚ್ಚಿನ ರಿಯಾಯಿತಿ ಘೋಷಿಸಿದೆ.

ಇದನ್ನೂ ಓದಿ: ಹೊಂಡಾದಿಂದ ಹೊಸ ಅಡ್ವೆಂಚರ್ ಸ್ಕೂಟರ್; ಫೀಚರ್ಸ್ ನೋಡಿ ಫಿದಾ ಆಗ್ತೀರಾ!

ವಾಹನ ಮಾರುಕಟ್ಟೆಯಲ್ಲಿ ಟಾಟಾ ಇವಿ ಪ್ರಾಬಲ್ಯ

ಇವಿ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿರುವ ಸಮಯದಲ್ಲಿ ನೀಡಿರುವ ಆಫರ್‌ಗಳು ಅದಕ್ಕೆ ಹೆಚ್ಚಿನ ಲಾಭ ತಂದುಕೊಡುವ ನಿರೀಕ್ಷೆಯಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FDA) ದ ಮಾಹಿತಿಯ ಪ್ರಕಾರ, ಟಾಟಾ 2026 ರ ಆರ್ಥಿಕ ವರ್ಷದಲ್ಲಿ ಭಾರತದ ಪ್ರಯಾಣಿಕ ಇವಿ ಮಾರುಕಟ್ಟೆಯಲ್ಲಿ 39.42% ಪಾಲನ್ನು ಹೊಂದಿದೆ. ಕಂಪನಿಯ ಎಲೆಕ್ಟ್ರಿಕ್ ವಾಹನಗಳ (ಇವಿ) ಚಿಲ್ಲರೆ ಮಾರಾಟವು ಹಣಕಾಸು ವರ್ಷ 2025 ರಲ್ಲಿ 57,994 ಯುನಿಟ್‌ಗಳಿಂದ ಹಣಕಾಸು ವರ್ಷ 2026 ರಲ್ಲಿ 35.9% ರಷ್ಟು ಹೆಚ್ಚಾಗಿ 78,811 ಯುನಿಟ್‌ಗಳಿಗೆ ತಲುಪಿದೆ. ಅಂದರೆ ಗ್ರಾಹಕರು ಇವಿಗಳತ್ತು ಮುಖ ಮಾಡಿರುವುದು ಕಾಣಿಸುತ್ತದೆ. ಟಾಟಾ ಮೋಟಾರ್ಸ್ ಪ್ರಸ್ತುತ ಭಾರತದಲ್ಲಿ ಟಿಯಾಗೊ ಇವಿ ಹ್ಯಾಚ್‌ಬ್ಯಾಕ್, ಟಿಯಾಗೊ ಇವಿ ಸೆಡಾನ್, ಪಂಚ್‌ ಇವಿ ಎಸ್‌ಯುವಿ, ನೆಕ್ಸಾನ್‌ಇವಿ SUV, ಕರ್ವ್‌ ಇವಿ SUV, ಮತ್ತು ಹ್ಯಾರಿಯರ್‌ ಇವಿ SUV ಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಈ ವರ್ಷದ ಕೊನೆಯಲ್ಲಿ ಸಿಯಾರ ಇವಿಯನ ಅನ್ನು ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಸಹ ಇದು ಕೆಲಸ ಮಾಡುತ್ತಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories