ಶಕ್ತಿಶಾಲಿ ಎಂಜಿನ್, ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಸಿದ್ಧತೆ ! ನೆಕ್ಸ್ಟ್ ಜನರೇಷನ್ ಟೊಯೋಟಾ ಹೈಲಕ್ಸ್ ವೈಶಿಷ್ಟ್ಯ ಏನಿರಬಹುದು?
ಟೊಯೋಟಾ ತನ್ನ ನೆಕ್ಸ್ಟ್ ಜನರೇಷನ್ ಕಾರು ಹೈಲಕ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಎಸ್‌ಯುವಿ ಬೆಲೆ ಎಷ್ಟಿರಬಹುದು?
ಕಾರು ನಿರ್ಮಾತೃ ಕಂಪನಿ ಟೊಯೋಟಾ ಹೊಸ ಕಾರೊಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಎಲ್ಲ ತಯಾರಿ ನಡೆಸಿದೆ. ಮಾಧ್ಯಮ ವರದಿಗಳ ಪ್ರಕಾರ ಟೊಯೋಟಾ ತನ್ನ ಶಕ್ತಿಶಾಲಿ ಪಿಕಪ್ ವಾಹನದ ಇತ್ತೀಚಿನ ಆವೃತ್ತಿ ಹೈಲಕ್ಸ್ ಅನ್ನು ಜುಲೈ ಅಂತ್ಯದೊಳಗೆ ಪರಿಚಯಿಸುವ ಸಾಧ್ಯತೆಯಿದೆ. ನೆಕ್ಸ್ ಜನರೇಷನ್ ಕಾರು ಎಂದೇ ಹೆಸರುವಾಸಿಯಾಗಿರುವ ಹೈಲಕ್ಸ್ ಅನ್ನು ಕಳೆದ ವರ್ಷ ಕಂಪನಿ ಜಾಗತಿಕವಾಗಿ ಬಿಡುಗಡೆ ಮಾಡಿತ್ತು. ಈಗ ಅದರ ಹೊಸ ಆವೃತ್ತಿ ಭಾರತಕ್ಕೆ ಬರಲಿದೆ.
ಬೆಲೆ ಎಷ್ಟಿರಬಹುದು?
ಹಲವಾರು ಮ್ಯಾಕಾನಿಕಲ್ ಮತ್ತು ಫೀಚರ್‌ಗಳಲ್ಲಿ ನವೀಕರಣಗೊಂಡು ಬಿಡುಗಡೆಯಾಗುತ್ತಿರುವ ಟೊಯೋಟಾದ ಈ ಕಾರು ಭಾರತದಲ್ಲಿ ₹28.52 ಲಕ್ಷದಿಂದ ₹36 ಲಕ್ಷದ ಎಕ್ಸ್-ಶೋರೂಂ ಬೆಲೆಯಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಸದ್ಯದ ಹೈಲಕ್ಸ್‌ಗಿಂತ ಸ್ವಲ್ಪ ದುಬಾರಿ ಎನಿಸಲಿದೆ.
ಟೊಯೋಟಾ ಹೈಲಕ್ಸ್ ವೈಶಿಷ್ಟ್ಯ
* ಟೊಯೋಟಾದ ಹೊಸ ಆವೃತ್ತಿಯ ಹೈಲಕ್ಸ್ ಹೊಸ ವಿನ್ಯಾಸ ಹೊಂದಿದೆ. ಟೊಯೋಟಾ ಲೋಗೋ ಹೊಂದಿರುವ ಅಕ್ಕ ಪಕ್ಕದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಇದರ ಕೆಳಗೆ ಹನಿಕೋಮ್ ಶೈಲಿಯ ಗ್ರಿಲ್ ಕಂಡುಬರುತ್ತದೆ. ಮುಂಭಾಗವು ದಪ್ಪ ಬಂಪರ್ ಅನ್ನು ಹೊಂದಿದೆ.
* ಈ ಕಾರು 17 ಇಂಚಿನ ಅಲಾಯ್ ವೀಲ್ ಮತ್ತು ಸ್ಕ್ವೇರ್-ಆಫ್ ಬಾಡಿ ಕ್ಲಾಡಿಂಗ್‌ನೊಂದಿಗೆ ಬರಲಿದೆ. ಹಿಂಭಾಗದಲ್ಲಿ ಸಿ ಆಕಾರದ ಡಿಆರ್‌ಎಲ್ ಸಿಗ್ನೇಚರ್‌ನೊಂದಿಗೆ ಲಂಬವಾದ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ.
ಇದನ್ನೂ ಓದಿ : ಹಯಾಬುಸಾ ಸ್ಟೈಲ್‌ನಲ್ಲಿ ಹೊಸ Suzuki GSX250R ಸ್ಪೋರ್ಟ್ಸ್ ಬೈಕ್ ಎಂಟ್ರಿ
* ಹೊಸ ಹೈಲಕ್ಸ್ ನಲ್ಲಿ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಮಾಡರ್ನ್ ಆಗಿದೆ. ಇದರಲ್ಲಿ 12.3 ಇಂಚಿನ ಡಿಸ್ಪ್ಲೇ ದೊರೆಯಲಿದೆ. ಜೊತೆಗೆ ತ್ರೀ ಸ್ಪೋಕ್ ಸ್ಟೀಯರಿಂಗ್, ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ, ಹಲವು ಫಿಸಿಕಲ್ ಬಟನ್‌ಗಳು ದೊರಲಿವೆ.
* ಇದರಲ್ಲಿ ಡ್ರೈಮೋಡ್, ಡ್ಯಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ವೈಯರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಬ್ಲೈಂಡ್ ಸ್ಪಾಟ್ ಮಾನಿಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್, 360 ಡಿಗ್ರಿ ಕ್ಯಾಮೆರಾ, ADAS ವೈಶಿಷ್ಟ್ಯ ಇರಲಿದೆ.
* ಇದು 2.8-ಲೀಟರ್ ಟರ್ಬೋಡೀಸೆಲ್ ಎಂಜಿನ್ ಅನ್ನು 204 PS ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಆರು-ವೇಗದ ಸ್ವಯಂಚಾಲಿತ ಟ್ರಾನ್ಸ್ಮಿಷನ್ ಮತ್ತು ಆಫ್-ರೋಡಿಂಗ್ ಸಾಮರ್ಥ್ಯಗಳೊಂದಿಗೆ ಸಹ ನೀಡಲಾಗುವುದು.

