ಕಪ್ಪಾದ ತುಟಿಗಳು ಇನ್ಮುಂದೆ ಸಾಫ್ಟ್ & ಪಿಂಕ್ ಆಗುತ್ತೆ! ಇಲ್ಲಿದೆ 5 ಮ್ಯಾಜಿಕಲ್ ಮನೆಮದ್ದುಗಳು
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಲೈಫ್‌ಸ್ಟೈಲ್, ಅತಿಯಾದ ಲಿಪ್‌ಸ್ಟಿಕ್ ಅಥವಾ ಕಾಸ್ಮೆಟಿಕ್ಸ್ ಬಳಕೆ, ಧೂಮಪಾನ, ಸೂರ್ಯನ ಬಿಸಿಲಿನಿಂದಾಗುವ ಟ್ಯಾನ್ ಅಥವಾ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದರಿಂದ (Dehydration) ತುಟಿಗಳು ಕಪ್ಪಗಾಗುತ್ತವೆ ಹಾಗೂ ಒಣಗುತ್ತವೆ.

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಮ್ಮ ತುಟಿಗಳ ಪಾತ್ರ ದೊಡ್ಡದು. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಲೈಫ್‌ಸ್ಟೈಲ್, ಅತಿಯಾದ ಲಿಪ್‌ಸ್ಟಿಕ್ ಅಥವಾ ಕಾಸ್ಮೆಟಿಕ್ಸ್ ಬಳಕೆ, ಧೂಮಪಾನ, ಸೂರ್ಯನ ಬಿಸಿಲಿನಿಂದಾಗುವ ಟ್ಯಾನ್ ಅಥವಾ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದರಿಂದ (Dehydration) ತುಟಿಗಳು ಕಪ್ಪಗಾಗುತ್ತವೆ ಹಾಗೂ ಒಣಗುತ್ತವೆ.
ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ಕೆಮಿಕಲ್ ಯುಕ್ತ ಲಿಪ್ ಬಾಮ್‌ಗಳ ಹಿಂದೆ ಬಿದ್ದು ಹಣ ಪೋಲು ಮಾಡುವ ಬದಲು, ನಮ್ಮ ಅಡುಗೆಮನೆಯಲ್ಲೇ ಇರುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೇವಲ ಕೆಲವು ದಿನಗಳಲ್ಲಿ ತುಟಿಗಳಿಗೆ ಗುಲಾಬಿ ಬಣ್ಣವನ್ನು ಮರಳಿ ತರಬಹುದು. ಹಾಗಾದರೆ ಕಪ್ಪಾದ ತುಟಿಗಳನ್ನು ಸಾಫ್ಟ್ ಮತ್ತು ಪಿಂಕ್ ಮಾಡಲು ಇರುವ 5 ಸುಲಭ ದಾರಿಗಳು ಇಲ್ಲಿವೆ ನೋಡಿ.
1. ಬೀಟ್‌ರೂಟ್ ಮತ್ತು ಸಕ್ಕರೆ ಸ್ಕ್ರಬ್
- ಬೀಟ್‌ರೂಟ್ ತುಟಿಗಳ ಕಪ್ಪು ಬಣ್ಣ ನಿವಾರಣೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
- ಬೇಕಾಗುವ ಪದಾರ್ಥಗಳು: 1 ಚಮಚ ಬೀಟ್‌ರೂಟ್ ರಸ, 1 ಚಮಚ ಸಕ್ಕರೆ, ಅರ್ಧ ಚಮಚ ಜೇನುತುಪ್ಪ.
- ಬಳಸುವ ವಿಧಾನ: ಒಂದು ಸಣ್ಣ ಬೌಲ್‌ನಲ್ಲಿ ಇವೆಲ್ಲವನ್ನೂ ಮಿಕ್ಸ್ ಮಾಡಿ ಪೇಸ್ಟ್ ತರ ಮಾಡಿ. ಇದನ್ನು ತುಟಿಗಳ ಮೇಲೆ ಹಚ್ಚಿ ಅತ್ಯಂತ ಹಗುರವಾಗಿ, ವೃತ್ತಾಕಾರದಲ್ಲಿ (Circular motion) 2 ನಿಮಿಷ ಮಸಾಜ್ ಮಾಡಿ. 5 ನಿಮಿಷ ಬಿಟ್ಟು ಒದ್ದೆ ಹತ್ತಿ ಅಥವಾ ತಣ್ಣೀರಿನಿಂದ ಸ್ವಚ್ಛಗೊಳಿಸಿ.
2. ನಿಂಬೆರಸ ಮತ್ತು ಸಕ್ಕರೆ ಮ್ಯಾಜಿಕ್
- ನಿಂಬೆಹಣ್ಣು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುವುದರಿಂದ ತುಟಿಗಳ ಕಪ್ಪನ್ನು ಬೇಗನೆ ಇಳಿಸುತ್ತದ
- ಬೇಕಾಗುವ ಪದಾರ್ಥಗಳು: 1 ಸಣ್ಣ ನಿಂಬೆಹಣ್ಣಿನ ಹೋಳು, ಅರ್ಧ ಚಮಚ ಸಕ್ಕರೆ.
- ಬಳಸುವ ವಿಧಾನ: ನಿಂಬೆಹಣ್ಣಿನ ಹೋಳಿನ ಮೇಲೆ ಸಕ್ಕರೆಯನ್ನು ಉದರಿಸಿ, ಅದನ್ನು ತುಟಿಗಳ ಮೇಲೆ ನೇರವಾಗಿ 2 ನಿಮಿಷಗಳ ಕಾಲ ಲಘುವಾಗಿ ಉಜ್ಜಿ. ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದು ಲಿಪ್ ಬಾಮ್ ಅಥವಾ ತೆಂಗಿನ ಎಣ್ಣೆ ಹಚ್ಚಿ.
3. ಹಸಿ ಹಾಲು ಮತ್ತು ಅರಿಶಿನ ಪೇಸ್ಟ್
- ಪಿಗ್ಮೆಂಟೇಶನ್ (ಕಪ್ಪು ಕಲೆ) ನಿವಾರಣೆಗೆ ಈ ಆಯುರ್ವೇದಿಕ್ ಕಂಬಿನೇಷನ್ ಅತ್ಯುತ್ತಮ.
- ಬೇಕಾಗುವ ಪದಾರ್ಥಗಳು: 1 ಚಮಚ ಹಸಿ ಹಾಲು (Raw Milk), ಅರ್ಧ ಚಮಚ ಕಸ್ತೂರಿ ಅರಿಶಿನ ಪುಡಿ.
- ಬಳಸುವ ವಿಧಾನ: ಹಾಲಿಗೆ ಅರಿಶಿನವನ್ನು ಬೆರೆಸಿ ದಪ್ಪನೆಯ ಪೇಸ್ಟ್ ಮಾಡಿ. ಇದನ್ನು ತುಟಿಗಳಿಗೆ ಹಚ್ಚಿ 5-10 ನಿಮಿಷ ಒಣಗಲು ಬಿಡಿ. ನಂತರ ಹಗುರವಾಗಿ ಮಸಾಜ್ ಮಾಡುತ್ತಾ ತಣ್ಣೀರಿನಲ್ಲಿ ತೊಳೆದುಕೊಳ್ಳಿ..
4. ಜೇನುತುಪ್ಪ ಮತ್ತು ಆಲಿವ್ ಆಯಿಲ್ ನೈಟ್ ಪ್ಯಾಕ್
- ರಾತ್ರಿ ಇಡೀ ತುಟಿಗಳಿಗೆ ಪೋಷಣೆ ನೀಡಲು ಇದು ಬೆಸ್ಟ್ ಹವ್ಯಾಸ.
- ಬೇಕಾಗುವ ಪದಾರ್ಥಗಳು: 3 ಹನಿ ಜೇನುತುಪ್ಪ, 3 ಹನಿ ಆಲಿವ್ ಆಯಿಲ್ (ಅಥವಾ ತೆಂಗಿನ ಎಣ್ಣೆ).
- ಬಳಸುವ ವಿಧಾನ: ಪ್ರತಿದಿನ ರಾತ್ರಿ ಮಲಗುವ ಮುನ್ನ ಜೇನುತುಪ್ಪ ಮತ್ತು ಆಲಿವ್ ಆಯಿಲ್ ಅನ್ನು ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿಕೊಂಡು ಮಲಗಿ.
5. ಸೌತೆಕಾಯಿ ರಸದ ಕಂಪ್ರೆಸ್
- ದೇಹಕ್ಕೆ ಮಾತ್ರವಲ್ಲ, ತುಟಿಗಳ ತಂಪಿಗೂ ಸೌತೆಕಾಯಿ ಅತ್ಯುತ್ತಮ.
- ಬೇಕಾಗುವ ಪದಾರ್ಥಗಳು: 1 ಚಮಚ ಸೌತೆಕಾಯಿ ರಸ.
- ಬಳಸುವ ವಿಧಾನ: ಸೌತೆಕಾಯಿ ರಸವನ್ನು ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾಗಿಸಿ. ನಂತರ ಹತ್ತಿಯ (Cotton) ಸಹಾಯದಿಂದ ಇದನ್ನು ದಿನಕ್ಕೆ ಎರಡು ಬಾರಿ ತುಟಿಗಳ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ.

