ಇಂದಿನ ಭವಿಷ್ಯ : ಜುಲೈ 08ರಂದು ಈ ರಾಶಿಯವರಿಗೆ ಒಲಿಯಲಿದೆ ಬಂಪರ್ ಅದೃಷ್ಟ, ಅಪಾರ ಧನಲಾಭ

ದಿನ ಭವಿಷ್ಯ 08 ಜುಲೈ 2026: ಜುಲೈ ತಿಂಗಳ ಎರಡನೇ ವಾರ ಆರಂಭವಾಗುತ್ತಿದ್ದಂತೆ ಗ್ರಹಗತಿಗಳಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ಇಂದು ಬುಧವಾರವಾಗಿದ್ದು, ಬುಧ ಗ್ರಹದ ವಿಶೇಷ ಚಲನೆಯಿಂದಾಗಿ ಕೆಲವು ರಾಶಿಯವರಿಗೆ ಆಕಸ್ಮಿಕ ಧನಲಾಭ ಹಾಗೂ ವೃತ್ತಿ ಜೀವನದಲ್ಲಿ ಬಂಪರ್ ಯಶಸ್ಸು ಸಿಗುವ ಯೋಗವಿದೆ.

ಮೇಷ ರಾಶಿ (Aries)

ನಿಮ್ಮ ಪಾಲಿಗೆ ಅತ್ಯಂತ ಪ್ರಶಸ್ತವಾದ ದಿನ. ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದ್ದು, ಹೊಸ ಆದಾಯದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಕಾರಾತ್ಮಕ ಶಕ್ತಿ, ನಾಯಕತ್ವ ಗುಣಗಳಿಗೆ ತಕ್ಕ ಗೌರವ ಸಿಗಲಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಆದರೆ, ಶೀಘ್ರ ಲಾಭದ ಆಸೆಗೆ ಬಿದ್ದು ದೊಡ್ಡ ಹಣಕಾಸಿನ ರಿಸ್ಕ್ ತೆಗೆದುಕೊಳ್ಳಬೇಡಿ. ದೀರ್ಘಕಾಲೀನ ಹೂಡಿಕೆಗಳತ್ತ ಗಮನ ಹರಿಸಿ.

ವೃಷಭ ರಾಶಿ (Taurus)

ಇಂದು ಅದೃಷ್ಟದ ದಿನ. ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭ ನಿಮಗೆ ಸಿಗಲಿದೆ. ಕಠಿಣ ಪರಿಶ್ರಮಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ವ್ಯವಹಾರದ ವೇಗ ಸ್ವಲ್ಪ ನಿಧಾನ ಎನಿಸಿದ್ರೂ, ತಾಳ್ಮೆಯಿಂದ ಕೆಲಸ ಮಾಡಿದ್ರೆ ಉತ್ತಮ ಫಲಿತಾಂಶ ಖಚಿತ. ಯಾರಿಗೂ ಸೂಕ್ತ ದಾಖಲೆಗಳಿಲ್ಲದೆ ಯಾರಿಗೂ ಸಾಲ ನೀಡಬೇಡಿ. ಕೌಟುಂಬಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಮೂಡಲಿದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ಮಿಥುನ ರಾಶಿ (Gemini)

ಬುಧನ ಚಲನೆಯಿಂದ ಮಿಶ್ರ ಫಲ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಆದರೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ತಪ್ಪು ತಿಳುವಳಿಕೆ ಉಂಟಾಗದಂತೆ ಎಚ್ಚರ ವಹಿಸಿ. ಯಾವುದೇ ಪ್ರಮುಖ ಪಾವತಿ ಅಥವಾ ಬ್ಯಾಂಕಿಂಗ್ ವ್ಯವಹಾರ ಮಾಡುವ ಮುನ್ನ ಎರಡು ಬಾರಿ ಪರಿಶೀಲಿಸಿ. ಅಪೂರ್ಣ ಮಾಹಿತಿ ನಂಬಿ ಹೂಡಿಕೆ ಮಾಡಬೇಡಿ. ಅತಿಯಾದ ಕೆಲಸದ ಒತ್ತಡದಿಂದ ಸಂಜೆಯ ವೇಳೆಗೆ ಆಯಾಸವಾಗಬಹುದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ಸಿಗುತ್ತದೆ.

ಕರ್ಕಾಟಕ ರಾಶಿ (Cancer)

ಪ್ರಗತಿಪರ ದಿನವಾಗಿದೆ. ಉದ್ಯೋಗದಲ್ಲಿ ನಿಮ್ಮ ಹೊಸ ಆಲೋಚನೆ, ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಹಿರಿಯರ, ಮಾರ್ಗದರ್ಶಕರ ಸಲಹೆ ವರದಾನವಾಗಲಿವೆ. ಅತಿಯಾಗಿ ಯೋಚನೆ ಮಾನಸಿಕ ಶಾಂತಿ ಕಳೆದುಕೊಳ್ಳಬೇಡಿ. ಹಣಕಾಸಿನ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

ಸಿಂಹ ರಾಶಿ (Leo)

ಗೌರವ ಮತ್ತು ಕೀರ್ತಿ ಹೆಚ್ಚಾಗುವ ದಿನ. ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಬಹುದು. ಆದರೆ, ಕಚೇರಿಯ ರಾಜಕೀಯ ಮತ್ತು ಗಾಸಿಪ್‌ಗಳಿಂದ ದೂರವಿರಿ. ಇಂದು ಹೊಸ ಒಪ್ಪಂದಗಳಿಗೆ ಸಹಿ ಹಾಕಲು, ದೊಡ್ಡ ಮೊತ್ತದ ಸಾಲ ನೀಡಲು ಸೂಕ್ತ ದಿನವಲ್ಲ. ಹಣ ವಾಪಸ್ ಬರುವುದು ಕಷ್ಟವಾಗಬಹುದು. ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಬೇಡಿ, ಎಲ್ಲರ ಮಾತನ್ನು ಆಲಿಸುವುದು ಒಳ್ಳೆಯದು.

ಕನ್ಯಾ ರಾಶಿ (Virgo)

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಸಾರ್ವಜನಿಕ ಸಂಪರ್ಕ, ಟೀಮ್ ವರ್ಕ್‌ನಲ್ಲಿ ಸಾಮರ್ಥ್ಯಕ್ಕೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ದೀರ್ಘಕಾಲೀನ ಹೂಡಿಕೆಗಳ ಬಗ್ಗೆ ತಜ್ಞರ ಸಲಹೆ ಪಡೆಯಿರಿ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಲು ಹೋಗಿ ಒತ್ತಡಕ್ಕೆ ಒಳಗಾಗಬೇಡಿ, ಇದು ತಲೆನೋವಿಗೆ ಕಾರಣವಾಗಬಹುದು. ತಾಳ್ಮೆಯಿಂದ ವರ್ತಿಸಿದರೆ ಕೌಟುಂಬಿಕ ವಾತಾವರಣವು ಶಾಂತಿಯುತವಾಗಿ ಮತ್ತು ಸಂತೋಷದಿಂದ ಕೂಡಿರುತ್ತದೆ.

ತುಲಾ ರಾಶಿ (Libra)

ಸಕಾರಾತ್ಮಕ ಬದಲಾವಣೆ. ಕೆಲಸದ ಸ್ಥಳದಲ್ಲಿ ನಿಮ್ಮ ಕ್ರಿಯೇಟಿವ್ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ಹಠಾತ್ ಧನಲಾಭ ಅಥವಾ ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಹರಿಸುವುದು ಮುಖ್ಯ. ನಿಮ್ಮ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ, ಪ್ರೀತಿಯ ಸಂದೇಶ ಸಿಗಬಹುದು, ಇದು ನಿಮ್ಮ ದಿನವನ್ನು ಸಂತೋಷಗೊಳಿಸುತ್ತದೆ. ಕಾನೂನು, ಆಸ್ತಿ ಸಂಬಂಧಿತ ವಿಷಯಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ವೃಶ್ಚಿಕ ರಾಶಿ (Scorpio)

ಕೌಟುಂಬಿಕ ಜೀವನದಲ್ಲಿ ಸಂತೋಷ ತರಲಿದೆ. ಪ್ರೀತಿಪಾತ್ರರ ಜೊತೆಗಿನ ಸಂಬಂಧ ಮತ್ತಷ್ಟು ಮಧುರವಾಗಲಿವೆ. ವೃತ್ತಿ ರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಧನ ಹರಿವು ಉತ್ತಮವಾಗಿರುತ್ತದೆ, ಅನಗತ್ಯ ವೆಚ್ಚಗಳಿಗೆ ಬ್ರೇಕ್ ಹಾಕುವುದು ಅವಶ್ಯಕ. ಹೊಸ ಕೆಲಸವನ್ನು ಪ್ರಾರಂಭಿಸಲು ದಿನವು ಶುಭವಾಗಿದೆ. ಕಣ್ಣಿನ ತೊಂದರೆ ಅಥವಾ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷಿಸಬೇಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಧನಸ್ಸು ರಾಶಿ (Sagittarius)

ಆರ್ಥಿಕವಾಗಿ ಸ್ಥಿರತೆಯ ದಿನ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ. ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು, ನೀವು ಯಶಸ್ವಿಯಾಗಿ ನಿರ್ವಹಿಸುವಿರಿ. ಕುಟುಂಬದ ಹಿರಿಯರ ಆರೋಗ್ಯದ ಕಡೆಗೆ ಕಾಳಜಿ ವಹಿಸಿ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು.

ಮಕರ ರಾಶಿ (Capricorn)

ಪರಿಶ್ರಮಕ್ಕೆ ತಕ್ಕ ಫಲ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ಸಿಗಲಿದ್ದಾರೆ , ಲಾಭ ಹೆಚ್ಚಾಗಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಸಹಕಾರ ನಿಮಗಿರುತ್ತದೆ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗಳಿಗೆ ದಿನವು ಪೂರಕವಾಗಿದೆ. ಆದರೆ, ಯಾರಿಗೂ ಜಾಮೀನು ನಿಲ್ಲಲು ಹೋಗಬೇಡಿ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ವಾದ ಮಾಡುವುದನ್ನು ತಪ್ಪಿಸಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ ಮುನ್ನಡೆಯಿರಿ.

ಕುಂಭ ರಾಶಿ (Aquarius)

ವೇಗ ಮತ್ತು ಉತ್ಸಾಹದ ದಿನ. ನಿಂತುಹೋಗಿದ್ದ ಕೆಲಸಗಳು ಮತ್ತೆ ಚುರುಕುಗೊಳ್ಳಲಿವೆ. ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶಗಳು ಸಿಗಲಿವೆ. ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ, ಆದರೆ ಭವಿಷ್ಯದ ಉಳಿತಾಯದ ಕಡೆಗೆ ಗಮನ ಹರಿಸಿ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ಸಣ್ಣಪುಟ್ಟ ಪ್ರಯಾಣಗಳು ಲಾಭದಾಯಕವಾಗಿರಲಿವೆ. ನಿಮ್ಮ ಆತ್ಮವಿಶ್ವಾಸವೇ ಇಂದು ನಿಮ್ಮ ದೊಡ್ಡ ಶಕ್ತಿಯಾಗಲಿದೆ.

ಮೀನ ರಾಶಿ (Pisces)

ಭಾವನಾತ್ಮಕವಾಗಿ ಹೊಸ ಆರಂಭದ ದಿನ. ಹಳೆಯ ಕಹಿ ನೆನಪುಗಳನ್ನು ಮರೆತು ಮುನ್ನಡೆಯಲು ಸೂಕ್ತವಾಗಿದೆ. ವೃತ್ತಿಜೀವನದಲ್ಲಿ ಹೊಸ ಆಫರ್‌ಗಳು ಬರುವ ಸಾಧ್ಯತೆ ಇದೆ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳಿಗೆ ಒಳಗಾಗಬೇಡಿ, ಪ್ರಾಯೋಗಿಕವಾಗಿ ಯೋಚಿಸಿ. ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ. ತಾಯಿಯ ಆರೋಗ್ಯದ ಕಡೆ ಗಮನವಿರಲಿ.

Today Horoscope June 08 2026 Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021