ಮೈಸೂರು ದಸರಾ ಕಂಬಳಕ್ಕೆ 8 ಕೋಟಿ ಕೊಟ್ರೆ, ಕರಾವಳಿಯ ಕಂಬಳಕ್ಕೆ 25 ಲಕ್ಷ ರೂಪಾಯಿ ಕೊಡಿ : ಸುನಿಲ್ ಕುಮಾರ್
ಯಾವುದೋ ಒಂದು ಕಂಬ:ಳಕ್ಕೆ 8 ಕೋಟಿ ರೂಪಾಯಿ ನೀಡುವುದಾದ್ರೆ ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳಕ್ಕೆ 25 ಲಕ್ಷ ರೂಪಾಯಿ ನೀಡಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.

ಬೆಂಗಳೂರು : ಕರ್ನಾಟಕ ಸರಕಾರ ಮೈಸೂರು ಕಂಬಳಕ್ಕೆ 8 ಕೋಟಿ ರೂಪಾಯಿ ನೀಡುವುದಾದ್ರೆ ಕರಾವಳಿಯ ಕಂಬಳಕ್ಕೆ 25 ಲಕ್ಷ ರೂಪಾಯಿ ನೀಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಮೈಸೂರು ಕಂಬಳ ಮಹೋತ್ಸವದ ಆಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಕಂಬಳ ನಡೆಸಲು ಅನುದಾನ ನೀಡಿದ್ದರು. ಈಗ ಪ್ರತೀ ಕಂಬಳಕ್ಕೆ 5 ಲಕ್ಷ ರೂಪಾಯಿ ನೀಡಿ ಅಂತ ಕೇಳಿದ್ದೇವೆ. ಆದರೆ ಸರಕಾರ ಕೊಟ್ಟಿಲ್ಲ.
ಯಾವುದೋ ಒಂದು ಕಂಬ:ಳಕ್ಕೆ 8 ಕೋಟಿ ರೂಪಾಯಿ ನೀಡುವುದಾದ್ರೆ ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳಕ್ಕೆ 25 ಲಕ್ಷ ರೂಪಾಯಿ ನೀಡಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ. ಕರಾವಳಿಯ ಉತ್ಸವ ಬೇರೆ ಪ್ರದೇಶದಲ್ಲಿ ನಡೆಸಲು ಭಿನ್ನಾಭಿಪ್ರಾಯವಿಲ್ಲ. ಕರಾವಳಿಯ ಕಂಬಳಕ್ಕೆ ಸಾಂಸ್ಕೃತಿಕ ಸೊಗಡು ಇದೆ, ಮಾತ್ರವಲ್ಲ ಧಾರ್ಮಿಕ ಭಾವನೆಯೂ ಇದೆ ಎಂದಿದ್ದಾರೆ.
ಕರಾವಳಿಯ ಕಂಬಳನ್ನು ಬೇರೆಡೆಗೆ ಕೊಂಡೊಯ್ದಾಗ ಎಲ್ಲರೂ ಅದನ್ನು ಸ್ವೀಕಾರ ಮಾಡಬೇಕು. ನಾನು ಕೂಡ ಕಂಬಳ ಆಯೋಜಿಸುವ ವ್ಯಕ್ತಿ. ದಸರಾ ಸಮಿತಿ, ಕಂಬಳದ ಮಾಲೀಕರು, ಅಭಿಮಾನಿಗಳ ಜೊತೆಗೆ ಚರ್ಚೆ ನಡೆಸಿಲ್ಲ. ಕೇವಲ ಒಬ್ಬರು ಕಂಬಳ ಮಾಡುವುದಾಗಿ ತೀರ್ಮಾನ ಮಾಡುವುದು ಸರಿಯಲ್ಲ. ಕಂಬಳ ಕೋಣಗಳ ಮಾಲೀಕರ ಜೊತೆಗೆ ಮಾತುಕತೆ ಮಾಡಿಯೇ ತೀರ್ಮಾನ ಮಾಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
Mysore dasara Kambala 8 cr BJP MLA sunil kumar demands 25 lakh fund for karavali kambala

